ಚಳ್ಳಕೆರೆ : ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಇಂದು ನಗರದ ವಾಲ್ಮೀಕಿ ವೃತ್ತದಿಂದ ಅಂಬೇಡ್ಕರ್ ವೃತ್ತ ಹಾಗೂ ತಾಲೂಕು ಕಛೇರಿವರೆಗೆ ಕಾಲೇಜ್ ವಿದ್ಯಾರ್ಥಿಗಳು ಜಾಗೃತಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
ತಾಲೂಕು ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲೂಕು ಆಡಳಿತ, ತಾಲೂಕು ಪಂಚಾಯತ, ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥ ತಾಲೂಕು ಕಛೇರಿಯತ್ತ ಆಗಮಿಸಿ ನಂತರ ಪ್ರತಿಜ್ಞೆ ವಿಧಿಯನ್ನು ಪಡೆದರು.
ಇನ್ನೂ ಈ ಕಾರ್ಯಕ್ರಮದ ಉದ್ದೇಶವನ್ನು ಕುರಿತು ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ರೇಷ್ಮಾ ಕಲಕಪ್ಪ ಗೋಣಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನದ ಹಕ್ಕು ನಮ್ಮೆಲ್ಲರದು ಅಂತಹ ಮತವನ್ನು ಯಾರು ಕೂಡ ಮಾರಟ ಮಾಡಬಾರದು, ಸಂವಿಧಾನದ ಮೂಲಭೂತವಾದ ಹಕ್ಕು ಮತದಾನದ ಹಕ್ಕು, ಯಾವುದೇ ಆಸೆ ಆಮಿಶಗಳಿಗೆ ಬಲಿಯಾಗದೆ ಯುವ ಮತದಾರರು ಜಾಗರುಕತೆಯಿಂದ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದರು.
ಇದೇ ಸಂಧರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್ ಮಾತನಾಡಿ,
ಸಂವಿಧಾನ ಆಶಯದಂತೆ ಮತದಾನ ಯಾವಾಗಲೂ ದಾನ ಹಾಗಬೇಕೆ ಹೊರತು ಕ್ರಯ ಹಾಗಬಾರದು, ಯುವ ಮತದಾರರು ನಿಮ್ಮ ಮತದಾನ ಉತ್ತಮ ಸಮಾಜ ನಿರ್ಮಾಣದ ಭದ್ರ ಬುನಾದಿಗೆ ನಾಂದಿಯಾಗಬೇಕು ತಪ್ಪದೆ ಎಲ್ಲಾರೂ ಕೂಡ ಮತದಾನ ಮಾಡಬೇಕು ಯಾರುಕೂಡ ಮತದಾನದಿಂದ ವಂಚಿತರಾಗಬಾರದು ಎಂದರು.
ಈದೇ ಸಂಧರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ, ತಾಪಂ. ಇಒ.ಹೆಚ್ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಡಿವೈಎಸ್ ಪಿ ಬಿಟಿ. ರಾಜಣ್ಣ, ಪೌರಾಯುಕ್ತ ಸಿ.ಚಂದ್ರಪ್ಪ, ಸಮಾಜ ಕಲ್ಯಾಣ ಅಧಿಕಾರಿ ಮಂಜುನಾಥ್, ವಕೀಲರಾದ ಶ್ರೀನಿವಾಸ್, ಕಂದಾಯ ಅಧಿಕಾರಿ ಲಿಂಗೇಗೌಡ, ಪ್ರಕಾಶ್, ಶ್ರೀನಿವಾಸ್, ಕಛೇರಿ ಸಿಬ್ಬಂದಿ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇದೇ ಸಂಧರ್ಭದಲ್ಲಿ ಯುವ ಮತದಾರರಿಗೆ ಹೊಸದಾಗಿ ಐಡಿ ಕಾರ್ಡ್‌ಗಳನ್ನು ವಿರತಣೆ ಮಾಡಿದರು.
ಇನ್ನೂ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜೇತರಾದ ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.