ಚಳ್ಳಕೆರೆ
ಮುಂಜಾನೆ ಮುಸುಕಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ ನಾಲ್ವರು ಸ್ಥಳದಲ್ಲೇ ಸಾವು
ಚಳ್ಳಕೆರೆ: ಮುಂಜಾನೆಯ ಮುಸುಕಿನಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ದಂಡಮ್ಮನಹಳ್ಳಿಯ ನಿವಾಸಿಗಳು.ದೇವದುರ್ಗದಿಂದ ಬೆಂಗಳೂರಿಗೆ ತೆರಳುವಾಗಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಗೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ.ಓರ್ವ ವ್ಯಕ್ತಿ ಸೇರಿದಂತೆ ಮೂರು ಕಂದಮ್ಮಗಳು ಸ್ಥಳದಲ್ಲೇ ಮೃತಪಟ್ಟಿವೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗೇಟಿನ ಸಮೀಪದ ಸೇತುವೆ ಬಳಿ ಭೀಕರ ಅಪಘಾತ ನಡೆದಿದ್ದು,ಈ ಘಟನೆ ಸ್ಥಳದಲ್ಲಿಯೇ ನಾಲ್ವರು ಮೃತರಾಗಿದ್ದಾರೆ. 25 ವರ್ಷದ ಲಿಂಗಪ್ಪ, 2 ವರ್ಷದ ಸಿಂಧುಶ್ರೀ, 5 ತಿಂಗಳ ಕೂಸು ಅಯ್ಯಾಳಪ್ಪ, 3 ತಿಂಗಳ ಮತ್ತೊಂದು ಕೂಸು ರಕ್ಷಾ ಮೃತಪಟ್ಟಿದ್ದಾರೆ. ಇನ್ನುಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಹತ್ತಿರದ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ದಂಡಮ್ಮನಹಳ್ಳಿಯ ನಿವಾಸಿಗಳಾಗಿದ್ದಾರೆ.
ದೇವದುರ್ಗದಿಂದ ಬೆಂಗಳೂರಿಗೆ ತೆರಳುವಾಗ ಈ ಅಪಘಾತ ನಡೆದಿದೆ. ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸ್ ಇಲಾಖೆಯ ಡಿವೈಎಸ್ಪಿ ಟಿ.ಬಿ.ರಾಜಣ್ಣ, ಪಿ ಐ ದೇಸಾಯಿ, ಪಿಎಸ್ಐ ಶಿವರಾಜ್, ಎಎಸ್ಐ ನಾಗೇಂದ್ರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.