ಚಳ್ಳಕೆರೆ : ಅಯೋಧ್ಯೆ ಶ್ರೀಬಾಲರಾಮ ಪ್ರಾಣ ಪ್ರತಿಷ್ಟಾಪನೆ ಅಂಗವಾಗಿ ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಬ್ರಹ್ಮಣ ಸಂಘ, ವಿಶ್ವ ಹಿಂದೂ ಪರಿಷತ್ತು, ಮಲ್ಲಿಕಾರ್ಜುನ ಸ್ವಾಮಿ ಸೇವಾ ಸಮಿತಿ, ಹಾಗೂ ಬ್ರಹ್ಮ ಚೈತನ್ಯ ಮಂಡಳಿ ವತಿಯಿಂದ ಮುಂಜಾನೆಯಿಂದ ನೂರಾರು ಜನಸಂಖ್ಯೆಯಲ್ಲಿ ಭಕ್ತರು ನೇರ ಪ್ರಸಾರದ ಮೂಲಕ ತಾವು ಕೂಡ ಶ್ರೀರಾಮನಮೂರ್ತಿಗೆ ಪುಷ್ಪರ್ಚಾನೆ ಮಾಡುವ ಮೂಲಕ ರಾಮ ಅವನ ಹೋಮ ಮಾಡುವ ಮೂಲಕ ನೂರಾರು ಭಕ್ತರು ಕಣ್ತುಂಬಿಸಿಕೊಂಡರು
ಇನ್ನೂ ಪ್ರದೀಪ್ ಶರ್ಮ ರವರು ಪೂಜಾ ಕಾರ್ಯಕ್ರಮ ನೆರೆವೆರಿಸುವ ಮೂಲಕ ಶ್ರೀರಾಮನ ಕೃಪೆಗೆ ಪಾತ್ರರಾದರು..
ಇದೇ ಸಂಧರ್ಭದಲ್ಲಿ ನರಹರಿ ಆಶ್ರಮದ ಸದ್ಗರು ರಾಜರಾಮ್ ಸ್ವಾಮೀಜಿ ರವರು ಆರ್ಶಿವಚನ ನೀಡಿದರು
ಇನ್ನೂ ಪೂಜಾ ಕಾರ್ಯಕ್ರಮದಲ್ಲಿ ಡಾ.ಅನಂತರಾಮ್ ಗೌತಮ್, ಸತ್ಯನಾರಾಯಣ ರಾವ್, ಶ್ರೀನಿನಾಥ್, ವಾಸುದೇವರಾವ್, ಜಗದೀಶ್, ರಾಜರಾಮ್,ವಿಶ್ಚ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಡಾ.ಮಂಜುನಾಥ್, ಪ್ರಕಾಸ್, ಮಹಿಳಾ ಮಂಡಳಿಯವರು ಪಾಲ್ಗೊಂಡಿದ್ದರು.
ಇನ್ನೂ ಪೂಜಾ ಕಾರ್ಯಕ್ರಮದಲ್ಲಿ 1992 ರಲ್ಲಿ ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣದ ಕರ ಸೇವಕನಾಗಿ ಚಳ್ಳಕೆರೆಯಿಂದ ಅಯೋಧ್ಯೆಹೋಗಿದ್ದ ಗಂಗಾಧರ್ ರವರನ್ನು ಅಭನಂಧಿಸಿದರು.
ಇನ್ನೂ ಗಾಯಿತ್ರಿ ವಿಪ್ರ ಮಹಿಳಾ ಮಂಡಳಿವತಿಯಿಂದ ಪಾನಕ ವಿತರಣೆ ಮಾಡಿದರು.