ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ 2022-23ರ ಸಾಲಿನ ಪದವೀಧರರಿಗೆ ಗ್ರಾಜ್ಯೂಯೇಷನ್ ಡೇ ಸಮಾರಂಭವನ್ನು ಮುರುಘಾಮಠದ ಅನುಭವಮಂಟಪದಲ್ಲಿ ದಿನಾಂಕ:20.01.2024ರAದು ಬೆಳಿಗ್ಗೆ 10.00ಕ್ಕೆ ಆಯೋಜಿಸಲಾಗಿದೆ. ಕರ‍್ಯಕ್ರಮದ ದಿವ್ಯಸಾನಿಧ್ಯವನ್ನು ಶ್ರೀಮುರುಘಾಮಠದ ಉಸ್ತುವಾರಿ ಶ್ರೀಗಳಾದ ಶ್ರೀಬಸವಪ್ರಭು ಸ್ವಾಮಿಗಳು ವಹಿಸಲಿದ್ದು, ಮುಖ್ಯಅತಿಥಿಗಳಾಗಿ ಸುರತ್ಕಲ್ ನ್ಯಾಷನಲ್ ಇನ್ಸಿ÷್ಟ್ಟಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಮೋಹಿತ್ ತಹಿಲಿಯಾನಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಗಳಾದ ಶ್ರೀ ಎ ಜೆ ಪರಮಶಿವಯ್ಯ ಭಾಗವಹಿಸಲಿದ್ದು, ಪ್ರಾಂಶುಪಾಲರಾದ ಡಾ.ಭರತ್ ಪಿ ಬಿ ಅಧ್ಯಕ್ಷತೆ ವಹಿಸುವರು ಹಾಗೂ ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿರುವರು.