ಗ್ರಾಮೀಣ ಭಾಗದ ಭರತನಾಟ್ಯ ನೃತ್ಯಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸಿದ ಹೆಗ್ಗಳಿಕೆ ನೃತ್ಯನಿಕೇತನ ಸಂಗೀತ ಶಿಕ್ಷಣ ಸಂಸ್ಥೆಯ ಹೆಗ್ಗಳಿಕೆಯಾಗಿದೆ: ಶಾಸಕ ಟಿ ರಘುಮೂರ್ತಿ

ಚಳ್ಳಕೆರೆ: ಭರತನಾಟ್ಯದಂತಹ ಗ್ರಾಮೀಣ ಸೊಗಡಿನ ಕಾರ್ಯಕ್ರಮಗಳು ನಶಿಸುತ್ತಿದ್ದು ಇಂತಹ ಸಾಂಸ್ಕೃತಿಕ ಕಲೆಗಳನ್ನು ಪೋಷಿಸುವ ಸಲುವಾಗಿ ಮತ್ತು ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ ನೃತ್ಯನಿಕೇತನ ಶಾಸ್ತ್ರೀಯ ನೃತ್ಯ ಸಂಗೀತ ಶಿಕ್ಷಣ ಕೇಂದ್ರದ ವತಿಯಿಂದ “ಬಡಾವಣೆಗಳಲ್ಲಿ ಭರತನಾಟ್ಯದ ಸೊಬಗು” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಟಿ ರಘುಮೂರ್ತಿ ಅಭಿಪ್ರಾಯಪಟ್ಟರು.

ನಗರದ ತ್ಯಾಗರಾಜ ನಗರದಲ್ಲಿರುವ ಶ್ರೀ ಕೃಷ್ಣ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ದೃಸ್ಟಿನಿಕೇತನ ಶಾಸ್ತ್ರೀಯ ನೃತ್ಯ ಸಂಗೀತ ಶಿಕ್ಷಣ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಚಳ್ಳಕೆರೆ ತಾಲೂಕಿನಲ್ಲಿ ನೃತ್ಯನಿಕೇತನ ಶಾಸ್ತ್ರೀಯ ನೃತ್ಯ ಸಂಗೀತ ಶಿಕ್ಷಣ ಕೇಂದ್ರವು ಕಳೆದ 38 ವರ್ಷಗಳಿಂದ ರಾಜ್ಯದ ಗಡಿ ಭಾಗಗಳಲ್ಲಿ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಪರಂಪರೆಗಳ ಮಹತ್ವವನ್ನು ಜನರಿಗೆ ಪರಿಚಯಿಸಿ ಕಲಾಭಿರುಚಿಯನ್ನು ಮೂಡಿಸಿ ಭರತಾಂಜಲಿ ಎಂಬ ಶೀರ್ಷಿಕೆ ಅಡಿ ನೃತ್ಯನಿಕೇತನ ಸಂಸ್ಥೆಯು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಜನಮನ್ನಣೆ ಗಳಿಸಿದೆ ಇದೀಗ ನೃತ್ಯನಿಕೇತನದ 38ನೇ ವರ್ಷಾಚರಣೆ ಪ್ರಯುಕ್ತ ಹಾಗೂ ಕರ್ನಾಟಕ ಸಂಭ್ರಮ 50ರ ಅಂಗವಾಗಿ ನಗರದಾದ್ಯಂತ ನಮ್ಮ ಶ್ರೇಷ್ಠ ಕಲೆಗಳಾದ ಸಂಗೀತ ಮತ್ತು ನೃತ್ಯಗಳಲ್ಲಿ ಈಗಿನ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಬಡಾವಣೆಗಳಲ್ಲಿ ಭರತನಾಟ್ಯದ ಸೊಬಗು ಎಂಬ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದು ಈ ಮೂಲಕ ಕಲೆ ಹಾಗೂ ಸಂಸ್ಕೃತಿಯ ಪ್ರಚಾರ ಮತ್ತು ಪ್ರಸಾರವನ್ನು ಮಾಡುತ್ತಿದೆ ಪ್ರತಿಯೊಬ್ಬ ಮಗುವಿನಲ್ಲೂ ವಿಶೇಷವಾದ ಅಭಿರುಚಿಗಳಿರುತ್ತವೆ ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಉತ್ತಮ ಜೀವನ ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ  ಗ್ರಾಮೀಣ ಪ್ರದೇಶದ ಭರತನಾಟ್ಯ ನೃತ್ಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದ ಹೆಗ್ಗಳಿಕೆ ನೃತ್ಯನಿಕೇತನ ಸಂಸ್ಥೆಯದ್ದಾಗಿದೆ ಇಂದು ವಿದೇಶಗಳಲ್ಲಿಯೂ ಸಹ ಈ ಸಂಸ್ಥೆಯ ಶಿಷ್ಯರಿರುವುದು ತಾಲೂಕು ಹೆಮ್ಮೆ ಪಡುವ ವಿಷಯವಾಗಿದೆ ಎಂದು ತಿಳಿಸಿದರು‌.

ಸಾಹಿತಿ ತಿಪ್ಪಣ್ಣ ಮರಿಕುಂಟೆ ಮಾತನಾಡಿ ಕಲಾ ಸರಸ್ವತಿ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಈ ನಿಟ್ಟಿನಲ್ಲಿ ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಸೇರಿದಂತೆ ವಿದೇಶಗಳಲ್ಲಿಯೂ ತಮ್ಮ ಚಾಪನ್ನು ಮೂಡಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಬಡಾವಣೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಸೊಗಡಿನ ಪರಂಪರೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕಿನ ತಿಪ್ಪಾರೆಡ್ಡಿಹಳ್ಳಿ ಗ್ರಾಮದ ಕು. ಎನ್ ಮಾನಸ ರವರಿಗೆ ನೃತ್ಯನಿಕೇತನ ಶಾಸ್ತ್ರೀಯ ಸಂಗೀತ ಶಿಕ್ಷಣ ಸಂಸ್ಥೆಯಿಂದ 2024ರ ನಾಟ್ಯ ಕಲಾರತ್ನ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಜಿಟಿ ವೀರಭದ್ರ ಸ್ವಾಮಿಯವರ ಸಾಧನೆಯನ್ನು ಗುರುತಿಸಿ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಇತ್ತೀಚೆಗಷ್ಟೇ ರಾಜ್ಯದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಾಜನರಾದ ತಾಲೂಕಿನ ರಂಗಕರ್ಮಿ ಪಿ ತಿಪ್ಪೇಸ್ವಾಮಿ ಅವರನ್ನು ಅಭಿನಂದಿಸಲಾಯಿತು‌.

ಸಮಾರಂಭದಲ್ಲಿ ನೃತ್ಯನಿಕೇತನ ಶಾಸ್ತ್ರೀಯ ನೃತ್ಯ ಸಂಗೀತ ಶಿಕ್ಷಣ ಕೇಂದ್ರದ ಅಧ್ಯಕ್ಷ ಯು ಎಸ್ ವಿಷ್ಣುಮೂರ್ತಿ ರಾವ್ ಸುಧಾ ವಿಷ್ಣುಮೂರ್ತಿ ರಾವ್ ಬಿವಿ ಸಿರಿಯಣ್ಣ ವೆಂಕಟಪ್ಪ ನಗರಸಭಾ ಸದಸ್ಯ ಎಂ ಜಯಣ್ಣ ಪುಷ್ಪ ಚಂದ್ರ ನಾಯಕ್ ಸಂಜೀವಿನಿ ಲ್ಯಾಬ್ ಎಂಎನ್ ಮೃತ್ಯುಂಜಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!