ಚಳ್ಳಕೆರೆ : ಶೋಷಿತ ಸಮುದಾಯಗಳ ಏಳಿಗೆಗೆ ಕಾಂತರಾಜ್ ವರದಿ ಮಂಡಿಸಿದಾಗ ಮಾತ್ರ ಶೋಷಿತರ ಅಭಿವೃದ್ದಿಯಾಗುತ್ತದೆ ಎಂದು ಕೆಪಿಸಿಸಿ ಸದಸ್ಯರಾದ ಕಂದಿಕೆರೆ ಸುರೇಶ್ ಬಾಬು ಹೇಳಿದರು.
ಅವರು ನಗರದ ಯಾದವರ ಹಾಸ್ಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಮಾತನಾಡಿದರು, ರಾಜ್ಯದಲ್ಲಿ ಸುಮಾರು ವರ್ಷಗಳ ಕಾಲ ಉಳ್ಳವರು ಉಳ್ಳವರಾಗಿಯೆ ಇದ್ದಾರೆ ಇಲ್ಲದವರು ಅವರ ಬಡವರಾಗಿಯೇ ಇದ್ದಾರೆ, ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವವರಿಗೂ ಸಮಾನ ಹಕ್ಕು ಸಿಗಬೇಕಾದರೆ ಸಮಾನತೆ ಮೂಲವಾದ ಕಾಂತರಾಜ್ ವರದಿ ಜಾರಿಗೆ ತರಬೇಕು ಆದ್ದರಿಂದ ಇದೇ ಜ.28 ರಂದು ಮಧ್ಯ ಕರ್ನಾಟಕವಾದ ಚಿತ್ರದುರ್ಗದಲ್ಲಿ ಶೋಷಿತರ ಸಮಾವೇಶ ಹಮ್ಮಿಕೊಂಡಿದ್ದೆವೆ ಆದ್ದರಿಂದ ಆ ಸಭೆಗೆ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚಿನ ಜನ ಸಂಖ್ಯೆ ಸೇರುವ ಸಾಧ್ಯೆತೆ ಇದೆ ಎಂದರು.
ಇನ್ನೂ ಶೋಷಿತ ವರ್ಗ ಹಾಗೂ ಅಹಿಂದ ಸಮುದಾಯದಗಳ ಪದಾಧಿಕಾರಿ ಆರ್.ಪ್ರಸನ್ನ ಕುಮಾರ್ ಮಾತನಾಡಿ, ಗಡಿಭಾಗವಾದ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆ ಸಭೆಗೆ ಭಾಗವಹಿಸುವ ಮೂಲಕ ತಮ್ಮ ತಮ್ಮ ಹಕ್ಕುಗಳನ್ನು ಒಕ್ಕೂರಲಿನಿಂದ ಪಡೆಯಬೇಕು ಎಂದರು.

ಮುಖAಡ ಸಿ.ವೀರಭದ್ರಬಾಬು ಮಾತನಾಡಿ, ಶೋಷಿತ ವರ್ಗ ಹಾಗೂ ಅಹಿಂತ ವರ್ಗ ಕಾಂತರಾಜ್ ವರದಿ ಜಾರಿಗೊಳಿಸಲು ಒಗ್ಗೂಡಬೇಕು, ಎಲ್ಲಾ ಸಮುದಾಯಗಳು ಒಗ್ಗೂಡಬೇಕು ಸಿದ್ದರಾಮಯ್ಯನರವರ ಹಾದಿಯಲ್ಲಿ ನಡೆಯೋಣ, ಹಿಂದೂಳಿದ ವರ್ಗ, ಎಸ್‌ಟಿ, ಎಸ್‌ಸಿ ವರ್ಗ, ಓಬಿಸಿ, ಈಗೇ ಎಲ್ಲಾ ವರ್ಗದ ಜನಾಂಗವೂ ಬೆಂಬಲ ಸೂಚಿಸಬೇಕು ಎಂದರು.
(ದಲಿತ, ಹಿಂದುಳಿದ, ಆದಿವಾಸಿ, ಅಲೆಮಾರಿ, ಅಲ್ಪಸಂಖ್ಯಾತ ಮತ್ತು ಜನಪರ ಸಂಘನೆಗಳನ್ನೊಳಗೊAಡ) ಚಿತ್ರದುರ್ಗ ಜಿಲ್ಲೆಯ ಬಸವಮೂರ್ತಿ ಮಾದರ ಚನ್ನಯ್ಯ ಶ್ರೀಮಠದ ಪಕ್ಕದ ಮೈದಾನದಲ್ಲಿ ಜ.28ರಂದು ಆಯೋಜಿಸಲು ಉದ್ದೇಶಿಸಿರುವ “ಶೋಷಿತ ಸಮುದಾಯಗಳ ಜಾಗೃತಿ” ಬೃಹತ್ ಸಮಾವೇಶ ಯಶ್ವಸಿಯಾಗಬೇಕು ಎಂದರು.

ಇದೇ ಸಂಧರ್ಭದಲ್ಲಿ ಕರಿಬಸಅಜ್ಜಯ್ಯ ಸ್ವಾಮೀಜಿ, ಸಿ.ವೀರಭದ್ರಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ಪರುಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್, ಆರ್.ಪ್ರಸನ್ನಕುಮಾರ್, ಸಿರಿಯಪ್ಪ, ನೇತಾಜಿ ಪ್ರಸನ್ನ ಕುಮಾರ್, ನರಹರಿನಗರದ ಮಂಜಣ್ಣ, ಮಾಜಿ ನಗರಸಭೆ ಸದಸ್ಯ ಪುಜಾರಿ ಪರಸಪ್ಪ, ಸೈಯದ್, ಗದ್ದಿಗೆ ತಿಪ್ಪೇಸ್ವಾಮಿ, ಮುಜಿಬ್, ದೊಡ್ಡರಂಗಪ್ಪ, ಗೀತಾಬಾಯಿ, ಸರಸ್ವತಿ, ನನ್ನಿವಾಳ ಬಸವರಾಜ್, ಪುರುಶೋತ್ತಮ ನಾಯ್ಕ್, ಸೈಯದ್ ಸಾಬ್, ಸಿಟಿ ಶ್ರೀನಿವಾಸ್, ಕಾಡುಗೊಲ್ಲ ಸಂಘದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ರೆಡ್ಡಿಹಳ್ಳಿ ವೀರಣ್ಣ ಇತರರು ಇದ್ದರು.

About The Author

Namma Challakere Local News
error: Content is protected !!