ಚಳ್ಳಕೆರೆ : ಗ್ರಾಮದಲ್ಲಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದು ಶಾಸಕ ಗೋಪಾಲಕೃಷ್ಣ ಹೇಳಿದ್ದಾರೆ.
ಅವರು ತಾಲೂಕಿನ ತೋರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ 2022- 23ನೇ ಸಾಲಿನ ಎಸ್ ಸಿ ಎ ಹಾಗೂ ಎಸ್ ಸಿ ಎಸ್ ಪಿ ಅನುದಾನದಡಿಯಲ್ಲಿ ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳ ಕೌಶಲ್ಯ ಅಭಿವೃದ್ಧಿ ಮತ್ತು ಆದಾಯಗಳಿಗಾಗಿ 60 ದಿನಗಳ ಚರ್ಮ ವಸ್ತುಗಳ ತರಬೇತಿ ಶಿಬಿರದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಎಲ್ಲಾ ಅರ್ಹ ಫಲಾನುಭವಿಗಳನ್ನು ತಲುಪಿವೆ ಈ ದಿನ ತೊರೆಕೋಲಮ್ಮಹಳ್ಳಿ ಗ್ರಾಮದಲ್ಲಿ ಡಾ.ಬಾಬು ಜಗಜೀವನ್ ರಾಮ್ ಇಲಾಖೆಯಿಂದ ಹೊಲಿಗೆ ಯಂತ್ರ ಪಡೆದ 30 ಜನ ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿ ಮಹಿಳೆಯರು ಜೀವನಮಟ್ಟವನ್ನ ಸುಧಾರಿಸಲು ಸಾಧ್ಯ.
ಗ್ರಾಮದ ಗ್ರಾಮಸ್ಥರು ಬೇಡಿಕೆಗಳಾದ ಸ್ಮಶಾನ ಭೂಮಿ *ಬಸ್ ಸಂಪರ್ಕ ರಂಗ ಮಂದಿರ ತೊರೆಕೊಲಮ್ಮನಹಳ್ಳಿಯಿಂದ ನಾಯಕನಹಟ್ಟಿಯವರಿಗೆ ರಸ್ತೆಯ ಅಗಲೀಕರಣ ಇವುಗಳನ್ನು ಕಾಲಕ್ರಮೇಣ ಹಂತ ಹಂತವಾಗಿ ಕಾಮಗಾರಿಗಳನ್ನು ನಡೆಸಲಾಗುವುದು.
ಮುಖ್ಯವಾಗಿ ನಮ್ಮ ನಾಯಕನಹಟ್ಟಿ ಹೋಬಳಿಯಲ್ಲಿ ರೈತರು ಅತಿ ಹೆಚ್ಚು ಇರುವುದರಿಂದ ಕೃಷಿಗೆ ಮೊದಲ ಆದ್ಯತೆ ನೀಡಬೇಕು ಕೃಷಿಯಿಂದ ಮಾತ್ರ ಈ ಪ್ರದೇಶದ ಜಲಜೀವನ ಸುಧಾರಿಸಲು ಸಾಧ್ಯ.
ಹೋಬಳಿಯ ವಿವಿಧ ಹಳ್ಳಿಗಳ ಮುಖಂಡರು ಈಗಾಗಲೇ ಚರ್ಚೆಯನ್ನು ಮಾಡಿದ್ದೇವೆ ಹಿರೇಮಲ್ಲನಹೊಳೆಯಿಂದ ರೇಖಲಗೆರೆ ವರಗೆ ಚಾನೆಲ್ ನಲ್ಲಿ ನೀರು ತರುವಂತ ಕೆಲಸವಾಗಬೇಕು.
ಸುಮಾರು 7 -8 ಕೆರೆಗಳಿಗೆ ನೀರಿನ ಸೌಲಭ್ಯ ಒದಗಿಸಿದಂತಾಗುತ್ತದೆ ಆ ಕೆರೆಗಳಿಂದ ನೀರು ಬಂದರೆ ಇಲ್ಲಿಯ ಜನ ಜೀವನ ಸುಧಾರಿಸಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಾಲರಾಜ್, ಬಂಡೆ ಕಪಿಲೆ ಓಬಣ್ಣ, ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾಪಮ್ಮ ಆನಂದಪ್ಪ, ಉಪಾಧ್ಯಕ್ಷೆ ಬಿ ಅನಿತಮ್ಮ ಜಿ ಎಂ ಜಯಣ್ಣ, ಸದಸ್ಯರಾದ ಕೆ. ಜಿ .ತಿಪ್ಪೇಸ್ವಾಮಿ, ಬಿ .ಗುಂಡಪ್ಪ, ಗಾದ್ರಪ್ಪ ,ಸುಮಿತ್ರಮ್ಮ, ಮಂಜುಳ , ಸಿದ್ದಲಿಂಗಮ್ಮ, ಮಾರಕ್ಕ, ಪ್ರಾದೇಶಿಕ ವ್ಯವಸ್ಥಾಪಕ ಬೆಳಗಾವಿ ವಿಭಾಗ ಪಿ ಎ ಪ್ರಾಣೇಶ್, ಡಾಕ್ಟರ್ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ಇಲಾಖೆಯ ಜಿಲ್ಲಾ ಸಂಯೋಜಕ ಜಿ ಆರ್ ವಿನಯ್ ಕುಮಾರ್, ಚೌಳಕೆರೆ ಸಿ. ಬಿ.ಮೋಹನ್, ಬಗರ್ ಹುಕುಂ ಕಮಿಟಿ ಪಿ ಜಿ ಬೋರನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ನೀರಾವರಿ ಹೋರಾಟ ಸಮಿತಿ ಹೋಬಳಿ ಅಧ್ಯಕ್ಷ ಜಿ ಬಿ. ಮುದಿಯಪ್ಪ, ಗುಂತಕೋಲಮ್ಮಹಳ್ಳಿ ಮೀಸೆ ಓಬಯ್ಯ, ಚಂದ್ರಣ್ಣ, ವಕೀಲ ಅಶ್ವಥ್ ನಾಯಕ್, ವಕೀಲ ಉಮಾಪತಿ, ಕೆ ಜಿ ಪ್ರಕಾಶ್ ಕುದಾಪುರ, ಮಾಜಿ ಗ್ರಾ. ಪಂ. ಉಪಾಧ್ಯಕ್ಷ ಆರ್, ಬಸವರಾಜ್, ಎನ್ ದೇವರಹಳ್ಳಿ ಟಿ ರಾಜಣ್ಣ, ಜವಳಿ ಗಂಗಣ್ಣ,ಜಿ ಕೆ ಹಳ್ಳಿ
ಕೆ ಟಿ ಮಲ್ಲಿಕಾರ್ಜುನ್, ವಕೀಲ ಮಲ್ಲೇಶ್ ,ಅಬ್ಬೇನಹಳ್ಳಿ ಯುವ ಮುಖಂಡ ಎ ಪಿ ರೇವಣ್ಣ, ಟಿ. ಬಸಪ್ಪ ನಾಯಕ, ಬಿ ಕಾಟಯ್ಯ, ಮಲ್ಲೂರಹಳ್ಳಿ, ಕೊರಡಿಹಳ್ಳಿ ಸುರೇಂದ್ರಪ್ಪ, ರೇಖಲಗೆರೆ ಅಶೋಕ್, ವೀರೇಶ್, ತಿಪ್ಪೇಸ್ವಾಮಿ, ಪಿಡಿಒ ಮೋಹನ್ ದಾಸ್,
ಬಿಲ್ ಕಲೆಕ್ಟರ್ ಎಸ್ .ಶಿವತಿಪ್ಪೇಸ್ವಾಮಿ, ಮಧು, ಪಿಎಸ್ಐ ದೇವರಾಜ್ ಎಎಸ್ಐ ತಿಪ್ಪೇಸ್ವಾಮಿ, ಪೇದೆ ಅಣ್ಣಪ್ಪ, ಸೇರಿದಂತೆ ತೊರೆಕೋಲಮ್ಮನಹಳ್ಳಿ ಗ್ರಾಮದ ಸಮಸ್ತ ಊರಿನ ಗ್ರಾಮಸ್ಥರು ಇದ್ದರು.