ಚಳ್ಳಕೆರೆ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಶಾಖೆ, ಹಾಗೂ ಪ್ರಗತಿಪರ ಶಿಕ್ಷಕರ ವೇದಿಕೆ ಜ.19ರಂದು ನಡೆದ ಮಾತೆ ಸಾವಿತ್ರಿಬಾಯಿ ಪುಲೆಯವರ ಜಯಂತಿಯ ಅಂಗವಾಗಿ 2023-24ನೇ ಸಾಲಿನ ತಾಲ್ಲೂಕು ಮಟ್ಟದ ಉತ್ತಮ ಶಾಲೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೌರಸಮುದ್ರ ಶಾಲೆಯನ್ನು ಆಯ್ಕೆ ಮಾಡಲಾಗಿದ್ದು

ಈ ಶಾಲೆಗೆ ಪ್ರಶಸ್ತಿ ಬರಲು ಕಾರಣ ಕರ್ತರಾದ ಮುಖ್ಯೋಪಾಧ್ಯಾಯ ಪುರುಷೋತ್ತಮ್ ಮತ್ತು ಸಹ ಶಿಕ್ಷಕರಾದ ಮಾರುತಿ, ಈಶ್ವರ್, ಶಿಕ್ಷಕಿ ಮಂಜುಳಾ, ಚೈತ್ರ, ವಿದ್ಯಾ, ವಿಜಯ್ ಹಾಗೂ ಎಸ್‌ಡಿ ಎಂಸಿ ಅಧ್ಯಕ್ಷರಾದ ಜಿಬಿ.ರಾಜಶೇಖರ್ ರವರಿಗೆ ಗ್ರಾಮ ಪಂಚಾಯಿತಿ ಕಛೇರಿ ಗೌರಸಮುದ್ರ ಇವರ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಓಬಣ್ಣ , ಸದಸ್ಯರಾದ ಶಶಿಕುಮಾರ್, ಈರಣ್ಣ , ಭಾಗ್ಯಮ್ಮಬೊಮ್ಮಣ್ಣ, ಶಶಿರೇಖಾಬೊಮ್ಮಣ್ಣ, ಶುಭಾಷಿಣಿ ಪಲ್ಲಕ್ಕಿರೆಡ್ಡಿ, ನಾಗವೇಣಿ ಹಾಗೂ ಅಧ್ಯಕ್ಷರಾದ ರಾಜಶೇಖರ ಜಿ.ಬಿ ಹಾಗೂ ಸದಸ್ಯರು, ಮಾಜಿ ಅಧ್ಯಕ್ಷರಾದ ನಾಗರಾಜ, ರಣಧೀರ, ಶಾಲೆಯ ಹಳೆಯ ವಿದ್ಯಾರ್ಥಿಗಳು ಗ್ರಾಮಸ್ಥರು ಹಾಜರಿದ್ದರು.

About The Author

Namma Challakere Local News
error: Content is protected !!