ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಜಾಜೂರು ಬಳಿಯ ತೋಟದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಕೃಷ್ಣ ಮೃಗ ಹಾಗೂ ಕಾಡು ಮೊಲದ ಚರ್ಮವನ್ನು ಇಂದು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡು ಒರ್ವವ್ಯಕ್ತಿಯನ್ನು ಬಂಧಿಸಿದ್ದಾರೆ.
ಹೌದು ಅರಣ್ಯ ವಲಯದಲ್ಲಿ ಕಾಡು ಪ್ರಾಣಿಗಳ ಚರ್ಮ ಹಾಗೂ ಇನ್ನಿತರೆ ವಸ್ತುಗಳನ್ನು ಶೇಖರಿಸಿದ್ದ ಓಬಣ್ಣ (55) ಜಾಜೂರು ಎಂಬುವವರು ತೋಟದ ಮನೆಯಲ್ಲಿ ಶೇಖರಿಸಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಧಿಕಾರಿ ಬಹುಗುಣ ನೇತೃತ್ವದಲ್ಲಿ ತಂಡ ದಾಳಿ ನಡೆಸಿ ಜಿಂಕೆ ಚರ್ಮ ಹಾಗೂ ಮೊಲದ ಚರ್ಮ ಹಾಗೂ ಒರ್ವ ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಾಳಿ ನಡೆಸಿದ ತಂಡ ವಲಯ ಅರಣ್ಯ ಅಧಿಕಾರಿ ನವೀನ್. ಹಾಗೂ ಸಿಬ್ಬಂದಿ ಇದ್ದರು.