ಚಳ್ಳಕೆರೆ: ಬೀದಿಬದಿಯ ವ್ಯಾಪಾರಿಗಳಿಂದ ನಗರದ ಖಾಸಗಿ ಬಸ್ ನಿಲ್ದಾಣದ ಪಕ್ಕ ಹಣ್ಣಿನ ವ್ಯಾಪಾರಸ್ತರ ಸ್ಥಳದಲ್ಲಿ ಶೌಚಾಲಯ ನಿರ್ಮಾಣ ಮಾಡುವುದು ವಿರೋಧಿಸಿ ಬೀದಿಬದಿ ವ್ಯಾಪರದಾರರ ಸಂಘದಿAದ ಇಂದು ನಗರದ ಶಾಸಕರ ಭವನದ ಆವರಣದಲ್ಲಿ ಶಾಸಕ ಟಿ.ರಘುಮೂರ್ತಿಗೆ ಮನವಿ ಸಲ್ಲಿಸಿದರು.
ನಗರದ ಹೃದಯ ಭಾಗದಲ್ಲಿ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಖಾಸಗಿ ಬಸ್ ನಿಲ್ದಾಣ ಸಮೀಪದ ಸ್ಥಳದಲ್ಲಿ ಸುಮಾರು 300 ಬೀದಿಬದಿಯ ವ್ಯಾಪಾರಿಯ ಕುಟುಂಬಗಳು ಪ್ರತಿದಿನ ಬೆಳಿಗ್ಗೆ 6 ಗಂಟೆಯಿAದ ರಾತ್ರಿ 9 ರವೆರೆಗೆ ಹೂವು, ಹಣ್ಣು, ಎಲೆ, ಅಡಿಕೆ, ಲಘು ಉಪಹಾರ ಪಾನೀಪೂರಿ, ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ನಗರಸಭೆ ಅಧಿಕಾರಿಗಳು ಹಣ್ಣಿನ ವ್ಯಾಪಾರ ಸ್ಥಳದಲ್ಲಿ ಶೌಚಾಲಯ ಕಟ್ಟಿಸುತ್ತೇವೆಂದು ಹೇಳಿದ್ದಾರೆ.
ಇದರಿಂದ ಬೀದಿಬದಿಯ ವ್ಯಾಪಾರಿಗಳ ಕುಟುಂಬಸ್ಥರು ಬೀದಿಗೆ ಬೀಳುತ್ತಾರೆ. ಶೌಚಾಲಯವನ್ನು ಬೇರೆಕಡೆ ಕಟ್ಟಿಸಬೇಕು ಎಂದು ಬೀದಿಬದಿ ವ್ಯಾಪಾರದಾರ ಸಂಘದ ಅಧ್ಯಕ್ಷ ಸಿ.ವೈ, ಶಿವರುದ್ರಪ್ಪ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿ ಶಾಸಕ ಟಿ.ರಘುಮೂರ್ತಿ ಮೊದಲು ನಾನು ಸ್ಥಳಪರೀಶಿಲನೆ ನಡೆಸಿ ಯಾರಿಗೂ ತೊಂದರೆಯಾಗುವುದು ಬೇಡ, ಶೌಚಾಲಯ ನಿರ್ಮಾಣದ ಕುರಿತು ಸ್ಥಳ ಪರಿಶೀಲನೆ ಮಾಡಿ, ನಗರಸಭೆ ಪೌರಾಯುಕ್ತರೊಂದಿಗೆ ಚರ್ಚೆ ಮಾಡುತ್ತೇನೆ ಎಂದರು.
ಈ ವೇಳೆ ಬೀದಿ ಬದಿ ವ್ಯಾಪಾರಿಗಳಾದ ಬಿ.ಪಟೇಲ್, ವರಲಕ್ಷ್ಮಿ, ಮಂಜುನಾಥ, ಗೌರಮ್ಯ, ಅನುಸೂಯಮ್ಮ ಕುಮಾರ್, ಶೃತಿ, ವೆಂಕಟೇಶ್, ರಘು ಸೇರಿದಂತೆ ಮುಂತಾದವರು ಇದ್ದರು.