ಚಳ್ಳಕೆರೆ : ಸಾಮಾಜದಲ್ಲಿ ಇರುವ ಅಂಕುಡೊAಕುಗಳನ್ನು ತಿದ್ದುವ ಕೆಲಸ ಪತ್ರಕರ್ತರು ಮಾಡುತ್ತಿದ್ದಾರೆ ಆದರೆ ಸಾಮಾಜದಲ್ಲಿ ಹಾಗೂ ನಗರದಲ್ಲಿ ಸಮಸ್ಯೆಗಳನ್ನು ಬರೆದರೆ ಖಂಡಿತ ಅವರನ್ನು ನಾನು ದ್ವೇಷಿಸುವುದಿಲ್ಲ ಬದಲಾಗಿ ನಾನು ಪ್ರೀತಿಯಿಂದ ಕಾಣುತ್ತೆನೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟದ ಪತ್ರಕರ್ತರ ಸಂಘದಿAದ ಆಯೋಜಿಸಿದ್ದ 2024-25ರ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು. ಪತ್ರಕರ್ತರು ಸಾಮಾಜದಲ್ಲಿ ಇರುವ ಸಮಸ್ಯೆಗಳನ್ನು ಬರೆದರೆ ಅವುಗಳನ್ನು ಸಮಸ್ಯೆ ಇತ್ಯರ್ಥ ಪಡಿಸಬೇಕು, ಪತ್ರಕರ್ತರು ಕೂಡ ಸಮಾಜ ಮುಖಿಯಾದ ಕೆಲಸ ಮಾಡುತ್ತಿದ್ದಾರೆ ಎಂದರು.
ಇದೇ ಸಂಧರ್ಭದಲ್ಲಿ ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟದ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷ ಕೆ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಡಿ.ಈಶ್ವರಪ್ಪ, ನಿವೃತ್ತ ಶಿಕ್ಷಕ ಸೂರಪ್ಪನಾಯಕ, ವಕೀಲರಾದ ಜಿಟಿ.ನಾಗರಾಜ್, ಬೋರನಾಯಕ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಜೆ.ರಾಘವೇಂದ್ರ, ಪತ್ರಕರ್ತರಾದ ಲಕ್ಷö್ಮಣ್, ರಾಧ ಡೆವಲರ‍್ಸ್ ಮಾಲೀಕರಾದ ಆರ್.ಅಣ್ಣಪ್ಪ, ಡಾ.ಸಂತೋಷ್‌ನಾಯ್ಕ್, ಮಾಜಿ ತಾಪಂ.ಸದಸ್ಯ ಗಿರಿಯಪ್ಪ, ಇತರರು ಇದ್ದರು.