ಈಶ್ವರಿ ವಿದ್ಯಾಲಯದಿಂದ ಹೊಸ ವರ್ಷದ ಕ್ಯಾಲೆಂಡರ್ ವಿತರಣೆ : ಸಂಧ್ಯಾ ಅಕ್ಕನವರ್
ಚಳ್ಳಕೆರೆ : ಹೊಸ ವರುಷ ಹರುಷವ ತರಲಿ ಎಂದು ನಾಡಿನ ಜನತೆಗಾಗಿ ಆ ಭಗವಂತನಲ್ಲಿ ಪ್ರಾರ್ಥನೆ ಮಾಡೊಣ ಎಂದು ಈಶ್ವರಿ ವಿದ್ಯಾಲಯಾದಿಂದ ಅಕ್ಕನವರಾದ ಸಂಧ್ಯಾ ಅಕ್ಕನವರು ಹೇಳಿದರು.
ಅವರು ನಗರದ ಈಶ್ವರಿ ವಿದ್ಯಾಲಯಾದಿಂದ ನಾಗರೀಕರಿಗೆ ಪ್ಯಾಕೇಟ್ ಕ್ಯಾಲೆಂಡರ್‌ನ್ನು ನೀಡುವ ಕುರಿತು ಮಾತನಾಡಿದ ಅವರು ಮನುಷ್ಯನ ಜನ್ಮ ಸಾರ್ಥಕವಾದದ್ದು ಇದರಿಂದ ನಾನು ಯಾರು..! ದೇವರು ಯಾರು ಎಂಬ ಪರಿಕಲ್ಪನೆಯಲ್ಲಿ ಪ್ರತಿಯೊಬ್ಬ ನಾಗರೀಕರಿಗೆ ಪ್ಯಾಕೇಟ್ ಕ್ಯಾಲೆಂಡರ್ ಮಹತ್ವದ ಅಂಶಗಳನ್ನು ತಿಳಿ ಹೇಳುವ ಮೂಲಕ ಪ್ರತಿನಿತ್ಯ ನಮ್ಮ ಈಶ್ವರಿ ವಿದ್ಯಾಲಯಾದಲ್ಲಿ ಮನುಷ್ಯನ ಏಕಾಗ್ರತೆಗೆ ಒಂದು ತಾಸು ಇಲ್ಲಿ ವಿಶ್ರಾಂತಿ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಇನ್ನೂ ಸಾರ್ವಜನಿಕರಿಗೆ ಹೊಸ ವರ್ಷದ ಕ್ಯಾಲೆಂಡರ್ ನೀಡುವ ಮೂಲಕ ದೇವರಲ್ಲಿ ಪ್ರಾರ್ಥಿಸಿದರು.
ಇದೇ ಸಂಧರ್ಭದಲ್ಲಿ ಈಶ್ವರಿ ವಿದ್ಯಾಲಯಾದ ವೆಂಕಟಲಕ್ಷಿö್ಮಅಕ್ಕಾ, ಸರಸ್ವತಿ ಅಕ್ಕನವರು ಹಾಗೂ ಸಾರ್ವಜನಿಕರು ಇದ್ದರು.