ಚಳ್ಳಕೆರೆ : ಅಮರಶಿಲ್ಪಿ ಜಕಣಾಚಾರಿ ಯವರು ಅತ್ಯಂತ ನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ, ಇವರು ಕಲ್ಯಾಣಿ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾರೆ ಎಂದು ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಜ್ಯಾಧ್ಯಕ್ಷ ಆರ್. ಪ್ರಸನ್ನ ಕುಮಾರ್ ಹೇಳಿದರು.
ಅವರು ನಗರದ ತಾಲೂಕು ಕಛೇರಿಯಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಅಮರ ಶಿಲ್ಪಿ ಜಕಣಾಚಾರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು, ಅವರ ಕರ್ನಾಟಕದ ತುಮಕೂರಿನಿಂದ 9ಕಿ.ಮೀ ದೂರದಲ್ಲಿರುವ ಕೈದಾಳೆಯಲ್ಲಿ ಜಕಣಾಚಾರಿಯವರು ಜನಿಸಿದರು. ಕೆಲವು ದಾಖಲೆಗಳ ಪ್ರಕಾರ ಈ ಊರಿನ ಮೂಲ ಹೆಸರು ಕ್ರೀಡಾಪುರ. ಅವರ ತಮ್ಮ ಜೀವನವನ್ನು ಕಲೆಗಾಗಿ ಮುಡಿಪಾಗಿಟ್ಟಿದ್ದರು ಎನ್ನಲಾಗಿದೆ ಎಂದರು.
ಇನ್ನೂ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು, ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ಅವರು ತಮ್ಮ ವೃತ್ತಿ ಜೀವನವನ್ನು ಹಾಗೂ ತಮ್ಮ ಮದುವೆಯಾದ ನಂತರವೇ ಅವರು ಕೆಲಸ ಹುಡುಕುತ್ತಾ ಮನೆಬಿಟ್ಟು ಹೊರಟರು. ದೂರದ ಪ್ರಯಾಣ ಮಾಡಿದರು ಹಾಗೂ ಹಲವಾರು ದೇವಾಲಯಗಳನ್ನು ನಿರ್ಮಿಸುತ್ತ ಮುನ್ನಡೆದರು ಹಾಗೂ ತಮ್ಮ ಹೆಂಡತಿಯನ್ನು ಸಹ ತಮ್ಮ ಕೆಲಸದಲ್ಲಿ ಮರೆತ್ತಿದ್ದರು ಎನ್ನಲಾಗಿದೆ ಎಂದರು.
ಉಪನ್ಯಾಸ ನೀಡಿದ ಸುಮಲತಾ ಮಾತನಾಡಿ ಜಕಣಾಚಾರ್ಯನ ಮಗನ ಹೆಸರು ಡಂಕಣಾಚಾರ್ಯ. ಡಂಕಣಾಚರ್ಯನು ಆತನ ತಂದೆಯನ್ನು ಹುಡುಕುವುದಕ್ಕಾಗಿ ತಾನೇ ಒಬ್ಬ ಪ್ರಖ್ಯಾತ ಶಿಲ್ಪಿಯಾಗಿ ಬೆಳೆದನು. ಬೇಲೂರಿನಲ್ಲಿ ಅವನು ಶಿಲ್ಪಿಯ ಕೆಲಸಕ್ಕಾಗಿ ನೇಮಿಸಲ್ಪಟ್ಟನು, ಮಹಾನ್ ಶಿಲ್ಪಿ ಜಕಣಾಚಾರಿ ನಿರ್ಮಿಸಿದ ಒಂದು ಶಿಲ್ಪದಲ್ಲಿ ಒಂದು ಒಡಕನ್ನು ಆತನು ಕಂಡನು. ಇದರಿಂದ ಕೋಪಗೊಂಡ ಜಕಣಾಚಾರ್ಯರು ಅವರು ಕೆತ್ತಿದ ಶಿಲ್ಪದಲ್ಲಿ ದೋಷವಿದ್ದರೆ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುವುದಾಗಿ ಆ ಯುವ ಶಿಲ್ಪಿಗೆ ಮಾತನ್ನಿತ್ತರು. ಆ ಶಿಲ್ಪವನ್ನು ಪರೀಕ್ಷಿಸಿದ ನಂತರ, ಆ ದೋಷವಿರುವುದು ನಿಜವೆಂದು ಗೊತ್ತಾಗಿ ಜಕಣಾಚಾರ್ಯರು ತಮ್ಮ ವಾಗ್ದಾನದಂತೆ ತಮ್ಮ ಬಲಗೈಯನ್ನು ಕತ್ತರಿಸಿಕೊಂಡರು. ಕೊನೆಯಲ್ಲಿ, ಆ ಇಬ್ಬರು ಶಿಲ್ಪಿಗಳು ಅವರಿಬ್ಬರೂ ತಂದೆ, ಮಗನೆಂಬ ಸಂಬAಧವನ್ನು ತಿಳಿದುಕೊಂಡರು ಎಂದರು.
ಜಯAತಿ ಕೊನೆಯಲ್ಲಿ ಸಮುದಾಯದ ಶಿಲ್ಪಿಕಾರರನ್ನು ಹೆಂಜೇರ್ಚಾರ್, ಸಿದ್ದಭಂಡಚಾರ್, ಬಿ.ತಿಪ್ಪೆಸ್ವಾಮಿರವರನ್ನು ಸನ್ಮಾನಿಸಿದರು.
ಈದೇ ಸಂಧರ್ಭದಲ್ಲಿ ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ತಾಲೂಕು ಸಿಬ್ಬಂದಿ ವರ್ಗ, ನಗರಸಭೆ ಸದಸ್ಯೆ ಮಂಜುಳಾ ಪ್ರಸನ್ನ ಕುಮಾರ್, ತಾಲೂಕು ಅಧ್ಯಕ್ಷ ವೆಂಕಟಶೇಚಾರ್, ಕಾರ್ಯದರ್ಶಿ ಸಿಇ.ಪ್ರಸನ್ನ, ಮಹಿಳಾ ಅಧ್ಯಕ್ಷೆ ಕಮಲಮ್ಮ, ಜೈವೀರಾಚಾರ್, ರಾಜೇಶ್ವರಿ, ಸರಸ್ವತಿ, ಶ್ರೀಧರ್ಚಾರ್, ಸಿಪಿಐ ಅನ್ನಪೂರ್ಣಮ್ಮ, ಲಕ್ಷಿö್ಮನಾರಾಯಣಚಾರ್, ಸದಾನಂದಚಾರ್, ಉಮಾದೇವಿ, ಶಿವಮ್ಮ, ಸುಮಾ, ಇತರರು ಇದ್ದರು.