ನಾಯಕನಹಟ್ಟಿ:: ಡಿ .31.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೋಸೆದೇವರಹಟ್ಟಿ ಗ್ರಾಮದಲ್ಲಿ ಬುಡಕಟ್ಟು ಸಂಸ್ಕೃತಿಯ ಆಚರಣೆಯ ವೈಭವ ಬೋಸೆರಂಗಸ್ವಾಮಿ ಜಾತ್ರೋತ್ಸವ.
ಬುಡಕಟ್ಟು ಸಂಸ್ಕೃತಿಯ ಆಚರಣೆಯಂತೆ 28.12.2023ರ ಗುರುವಾರ ಮದ್ಯಾಹ್ನ ಮೂರು ಗಂಟೆಗೆ ಶ್ರೀ ಸ್ವಾಮಿ ದೇವರ ಎತ್ತುಗಳೊಂದಿಗೆ ಹಾಗೂ ಸಕಲ ಬಿರುದಾವಳಿಗಳೊಂದಿಗೆ ಹಿರೇಕೆರೆ ಕಾವಲಿನ ಮೂಲ ಜಾತ್ರಾ ಸ್ಥಳಕ್ಕೆ ಆಗಮಿಸಿತು ನಂತರ ಪೂಜಾ ಮಂಗಳಾರತಿ ಮೊಕ್ಕಾಂ.
ದಿನಾಂಕ 29.12.2023ನೇ ಶುಕ್ರವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಶ್ರೀ ಸ್ವಾಮಿಯ ಮಹಾಪೂಜೆ ಮತ್ತು ದಾಸರಿಂದ ಪಂಜಿನ ಸೇವೆ ಉರುಳು ಸೇವೆ ಮತ್ತು ರಾತ್ರಿ ಅಖಂಡ ಭಜನೆ ನಡೆಯಿತು.
ದಿನಾಂಕ 30.12.2023ನೇ ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಹರಿಸೇವೆ ದಾಸೋಹ ಪಟ್ಟದ ಎತ್ತುಗಳ ಆಗಮನ ಬಂಡಾರ ಸೇವೆ ಮತ್ತು ಬೆಲ್ಲದ ಮಣೇವು ಕಾರ್ಯಗಳು ನಡೆದವು.
ದಿನಾಂಕ 31.12.2023ನೇ ಭಾನುವಾರ ಮಧ್ಯಾನ ಮೂರು ಗಂಟೆಯಿಂದ ಶ್ರೀ ಸ್ವಾಮಿಯ ಸಕಲ ಬಿರುದಾವಳಿಗಳೊಂದಿಗೆ ಮೂಲ ಸ್ಥಾನದಿಂದ ಮರಳಿ ಬಿಜಯಂಗೈಯುವುದು ಮತ್ತು ವಸಂತ ಪೂಜಿ ಹಾಗೂ ಮಹಾ ಮಂಗಳಾರತಿಯೊಂದಿಗೆ ಗುಡಿ ಸೇರಿತು.
ಇದೇ ಸಂದರ್ಭದಲ್ಲಿ ಶ್ರೀ ಬೋಸೆರಂಗ ಸ್ವಾಮಿ ದೇವರ ಗುಡಿ ಕಟ್ಟಿನ ಅಣ್ಣ-ತಮ್ಮಂದಿರು ಸಮಸ್ತ ಊರಿನ ಗ್ರಾಮಸ್ಥರು ಭಕ್ತಾದಿಗಳು ಇದ್ದರು