ನಾಯಕನಹಟ್ಟಿ:: ಡಿ .29. ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಕರಿಬಸವೇಶ್ವರ ಸ್ವಾಮಿಯ 101ನೇ ವರ್ಷದ ರಥೋತ್ಸವ ಪ್ರತಿವರ್ಷದ ಸಂಪ್ರದಾಯದಂತೆ ಗ್ರಾಮದ ಆರಾಧ್ಯ ದೈವ ಶ್ರೀ ಕರಿಬಸವೇಶ್ವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಅದ್ದೂರಿಯಾಗಿ ಜರುಗಿತು.

ಗ್ರಾಮದಲ್ಲಿ ಶುಕ್ರವಾರ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ರಥೋತ್ಸವದ ಪ್ರಯುಕ್ತ ಶ್ರೀ ಕರಿಬಸವೇಶ್ವರ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈ ಕಾರ್ಯಗಳನ್ನು ನೆರವೇರಿಸಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

ಬೆಳಗ್ಗೆ ಕಳಸ ಪೂಜೆ ನೆರವೇರಿಸಿದ ಭಕ್ತರು ಧ್ವಜ ಹಾಗೂ ನಾನಾ ಬಣ್ಣಗಳ ಹೂಗಳಿಂದ ರಥವನ್ನು ವಿಶೇಷವಾಗಿ ಅಲಂಕರಿಸಿ ರಥಕ್ಕೆ ಅನ್ನಸಂತರ್ಪಣೆ ನೆರವೇರಿಸಿ ಬೆಳಿಗ್ಗೆ 11 ಗಂಟೆಗೆ ಗ್ರಾಮಸ್ಥರು ರಥೋತ್ಸವಕ್ಕೆ ಚಾಲನೆಯನ್ನು ನೀಡಿದರು.

ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದ ರಥೋತ್ಸವ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಭಕ್ತಿ ಸಮರ್ಪಿಸಿದರು.

ರಥ ಸಂಚರಿಸುವ ದಾರಿ ಉದ್ದಕ್ಕೂ ಭಕ್ತರು ಬಾಳೆಹಣ್ಣು ಮಂಡಕ್ಕಿ ಎರಚುತ್ತಿದ್ದರು ರಥೋತ್ಸವದಲ್ಲಿ ನಂದಿ ಕೋಲು ಕುಣಿತ ಡೊಳ್ಳು ಕುಣಿತ ಜನರ ಗಮನ ಸೆಳೆದವು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಜಯಮ್ಮ ಬಾಲರಾಜ್, ಜಿ ತಿಪ್ಪೇಸ್ವಾಮಿ( ಕೋಟೆಪ್ಪ) ಗ್ರಾಮ ಪಂಚಾಯತಿ ಸದಸ್ಯರಾದ ಜಿ ಎಸ್ ವಿಜಯ್ ಕುಮಾರ್, ರೇವಣ್ಣ, ಅಶೋಕ್, ಶೈಲಜಾ ಮಂಜಣ್ಣ, ಗ್ರಾಮಸ್ಥರಾದ ಜಿ. ಕರಿಯಣ್ಣ ,ಆರ್ ಟಿ ರಾಜಣ್ಣ, ಶ್ರೀ ಕರಿಬಸವೇಶ್ವರ ಸ್ವಾಮಿಯ ದೈವದ ಯಜಮಾನರು ಎಚ್‌ ಬಿ. ರವಿಕುಮಾರ್, ಹಾಗೂ ತಿಮ್ಮಪ್ಪನಹಳ್ಳಿ ಸಮಸ್ತ ಗ್ರಾಮಸ್ಥರು ಇದ್ದರು

Namma Challakere Local News
error: Content is protected !!