ನಾಯಕನಹಟ್ಟಿ:: ಸಮೀಪದ ಎನ್ ಮಹದೇವಪುರ ಗ್ರಾಮದಲ್ಲಿ ಪ್ರತಿ ವರ್ಷವೂ ಶ್ರೀ ಮಹಾಲಿಂಗೇಶ್ವರ ಸ್ವಾಮಿಯ ಕಾರ್ತಿಕೋತ್ಸವದ ರಥೋತ್ಸವ ಆಚರಿಸುತ್ತಾ ಬಂದಿದ್ದೇವೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಟೇಲ್ ಜಿ .ತಿಪ್ಪೇಸ್ವಾಮಿ ಹೇಳಿದ್ದಾರೆ.
ಶುಕ್ರವಾರ ಮಧ್ಯಾಹ್ನ 3:00 ಗಂಟೆಗೆ ಅವರು ಗ್ರಾಮದಲ್ಲಿ ಶ್ರೀ ಮಹಾಲಿಂಗೇಶ್ವರ ಸ್ವಾಮಿಯ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ.
ಶ್ರೀ ಮಹಾಲಿಂಗೇಶ್ವರ ಸ್ವಾಮಿಯ ರಥೋತ್ಸವವು ಕಾರ್ತಿಕ ಮಾಸದ ಪ್ರಯುಕ್ತ ಗ್ರಾಮದಲ್ಲಿ ಎಲ್ಲಾ ಸಮುದಾಯದವರು ಜೊತೆಗೂಡಿ ಅದ್ದೂರಿಯಾಗಿ ರಥೋತ್ಸವವನ್ನು ನಡೆಸಲಾಗಿದೆ.
ಶ್ರೀ ಮಹಾಲಿಂಗೇಶ್ವರ ಸ್ವಾಮಿ ಗ್ರಾಮಕ್ಕೆ ಶಾಂತಿ ನೆಮ್ಮದಿ ಕರುಣಿಸಿ ಉತ್ತಮ ಮಳೆ ಬೆಳೆ ಈ ಭಾಗದ ರೈತರಿಗೆ ನೀಡಲಿ ಎಂದು ಶುಭ ಹಾರೈಸಿದರು..
ಇದು ವೇಳೆ ಕೆ ಟಿ ಸ್ವಾಮಿ ಮಾತನಾಡಿ ನಮ್ಮ ಗ್ರಾಮದಲ್ಲಿ ಪ್ರತಿ ವರ್ಷವೂ ಸಂಪ್ರದಾಯದಂತೆ ಶ್ರೀ ಮಹಾಲಿಂಗೇಶ್ವರ ಸ್ವಾಮಿಯ ರಥೋತ್ಸವವನ್ನು ಗ್ರಾಮದ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ ಶ್ರೀ ಮಹಾಲಿಂಗೇಶ್ವರ ಸ್ವಾಮಿ ರಥೋತ್ಸವ ಸಂಭ್ರಮ ಸಡಗರದಿಂದ ಆಚರಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಾಟೀಲ್ ಜಿ ತಿಪ್ಪೇಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷ ಬಿ. ತಿಪ್ಪೇಸ್ವಾಮಿ, ಸದಸ್ಯರಾದ ಶ್ವೇತಾ ಪಟೇಲ್ ಪಾಪ ನಾಯಕ ,ಎಂ.ಓಬಳೇಶಪ್ಪ, ಸೈಯದ್ ಅಕ್ತರ್ ಬಾನು, ಕೆ ಟಿ ಸ್ವಾಮಿ, ಸೇರಿದಂತೆ ಎನ್ ಮಹದೇವಪುರ ಗ್ರಾಮದ ಎಲ್ಲಾ ಸಮುದಾಯದ ಗುರು -ಹಿರಿಯರು ಸಮಸ್ತ ಗ್ರಾಮಸ್ಥರು ಇದ್ದರು