ಚಳ್ಳಕೆರೆ : ಈಡೀ ವಿಶ್ವಕ್ಕೆ ವಿಶ್ವಮಾನವರಾದ ರಾಷ್ಟçಕವಿ ಕುವೆಂಪುರವರ ನೆನಪು ಅಮರ, ಅವರು ಬರೆದ ಹಲವು ಲೇಖನಗಳು ಇಂದು ಜನಮಾಸದಲ್ಲಿ ಸಾಕ್ಷಿಕರಿಸುತ್ತವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಅಡಳಿತ ವತಿಯಿಂದ ಕಚೇರಿ ಸಭಾಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನದ ಪ್ರಯುಕ್ತ ವಿಶ್ವಮಾನವ ಕುವೆಂಪುರವರ ಭಾವಚಿತ್ರಕ್ಕೆ ಪುಷ್ಷ ನಮನ ಸಲ್ಲಿಸಿ ನಂತರ ಮಾತನಾಡಿದ ಅವರು ಕುವೆಂಪುರವರ ಜೀವನದ ಉದ್ದೂಕ್ಕೂ ಕೇವಲ ಸಾಮಾಜದ ಬದುಕಿನ ತುಡಿತಗಳು ನೆಲೆಯೂರಿದ್ದವು ಅವರು ಬದುಕಿದ್ದ ದಿನಗಳ ಕಾಲ ಅವರ ಜಗತ್ತಿಗೆ ತಮ್ಮ ಕೃತಿಗಳ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ನಾಡು ಮೆಚ್ಚುವಂತ, ರಾಷ್ಟçಕವಿ ಕುವೆಂಪುರವರ ದಿನ ಇಂದು ನಮಗೆ ನಮ್ಮ ಪೂರ್ವ ಅವಲೋಕನದ ದಿನವಾಗಬೇಕು, ಅಪಾರ ಕೃತಿಗಳ ಮೂಲಕ ಸಾಮಾಜದಲ್ಲಿರುವ ಜಾತಿ, ಧರ್ಮ , ಮತ, ಪಂಥಗಳನ್ನು ಹೊಗಲಾಡಿಸುವ ನಿಟ್ಟಿನಲ್ಲಿ ಲೇಖನಗಳ ಮೂಲಕ ಜಗತ್ತಿಗೆ ಸಾರಿದ ಮಹಾ ಸದ್ವಿ ಎಂದರು.
ತಾಲೂಕು ದಂಡಾಧಿಕಾರಿ ರೇಹಾನ್ ಪಾಷಾ, ಡಿ.ವೈ.ಎಸ್.ಪಿ. ರಾಜಣ್ಣ, ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಶುಂಪಾಲರಾದ ರಂಗಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ, ಸದಸ್ಯರಾದ ರಮೇಶ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಗಿರಿಯಪ್ಪ, ಕುಶಲ ಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷರಾದ ಆರ್ ಪ್ರಸನ್ನಕುಮಾರ್, ಸಿರಿಯಪ್ಪ, ಸಿ.ಟಿ.ಶ್ರೀನಿವಾಸ್, ಬೋಪಣ್ಣ, ಹನುಮಂತಪ್ಪ, ಬಸವರಾಜ್, ರಾಮಣ್ಣ, ಚೇತನ್ ಕುಮಾರ್, ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಹಾಗೂ ಸಮುದಾಯದವರು ಉಪಸ್ಥಿತರಿದ್ದರು.