ಚಳ್ಳಕೆರೆ : ಶ್ರೀರಾಮ ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಆಮಂತ್ರಣ ಅಭಿಯಾನದ ನಿಮಿತ್ತ ಪವಿತ್ರ ಮಂತ್ರಾಕ್ಷತೆ ವಿತರಣಾ ಸಮಾರಂಭ ಹಾಗೂ ಬೃಹತ್ ಶೋಭಾಯಾತ್ರೆಯನ್ನು ಚಳ್ಳಕೆರೆ ನಗರದ ಗಾಯಿತ್ರಿ ಕಲ್ಯಾಣ ಮಂಟಪದಿAದ ಶುಕ್ರವಾರ ತಾಲೂಕಿನ ನೂರಾರು ಸಾರ್ವಜನಿಕರು ಭಕ್ತಿ ಭಾವನೆಯಿಂದ ಭವ್ಯ ಸ್ವಾಗತ ಕೋರಿದರು.
ನಗರದ ವಿಶ್ವಹಿಂದೂ ಪರಿಷತ್ ಭಜರಂಗದಳದ ನೇತೃತ್ವದಲ್ಲಿ ನಗರದ ವಾಲ್ಮಿಕಿ ವೃತ್ತ ದಿಂದ ಅಂಬೇಡ್ಕರ್ ವೃತ್ತ ಹಾಗೂ ನೆಹರು ವೃತ್ತ ದವರೆಗೆ ಸಾಗಿದ ಬೆಳ್ಳಿ ಸರೋಟದ ಮೆರವಣಿಗೆ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದವರೆಗೆ ಮಹಿಳಾ ಭಜನಾ ಮಂಡಳಿಯಿAದ ಡೋಳು ವಾಧ್ಯದೊಂದಿಗೆ ಸಾಗಿತು
@@@
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಾಲುವೆಳ್ಳಿ ಪಾಲಯ್ಯ ಮಾತನಾಡಿ, ಭಾರತ ದೇಶದ ಬಹು ಸಂಖ್ಯಾತ ಜನರು ಹಾಗೂ ಹಿಂದೂಗಳ ಮಹಾದಾಸೆಯಂತೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವುದು ನಮ್ಮೆಲ್ಲರ ಸಂತೋಷಕ್ಕೆ ಕಾರಣವಾಗಿದೆ, ಇದರ ಪ್ರಯುಕ್ತ ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ದ್ವಿಗ್ರಹ ಪ್ರತಿಷ್ಟಾಪನೆ ನಡೆಯುತ್ತಿರುವುದು ಅದರ ಅಂಗವಾಗಿ ಅಯೋದ್ಯೆಯಲ್ಲಿ ಪೂಜೆ ಮಾಡಲ್ಪಟ್ಟ ಅಕ್ಷತೆಯ ಭವ್ಯ ಮೆರವಣಿಗೆಯಲ್ಲಿ ಸ್ವಾಗತಕ್ಕೆ ಕಾರಣವಾಗಿದೆ ಎಂದರು.

ಕಾರ್ಯಕ್ರಮದ ಅಭಿಯಾನಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶುಭ ಕೋರಿದರು. ಶ್ರೀ ರಾಮ ಜಯ ರಾಮ ಜಯ ಜಯ ರಾಮ ಎಂಬ ಘೋಷಣೆ ಮೊಳಗಿದವು.

ಈದೇ ಸಂಧರ್ಭದಲ್ಲಿ ಬಾಳೆಕಾಯಿ ರಾಮದಾಸ್, ಬಜರಂಗಳದ ಡಾ.ಮಂಜುನಾಥ್, ಕೃಷ್ಣಾ, ಮಲ್ಲೆಶ್, ಅಭಿಲಾಷ್, ಶ್ರೀನಿವಾಸ್, ಶಿವಣ್ಣ, ರಂಗಸ್ವಾಮಿ, ಮಹಾಂತೇಶ್, ಇತರ ಮಹಿಳಾ ಮುಖಂಡರು ಪಾಲ್ಗೊಂಡಿದ್ದರು.

Namma Challakere Local News
error: Content is protected !!