ರೈತರ ಪರಿಶ್ರಮದಿಂದಲೇ ನಮ್ಮ ಬದುಕು ಅರ್ಥಪೂರ್ಣ
ಚಳ್ಳಕೆರೆ ; ಪ್ರತಿಯೊಬ್ಬರಿಗೂ ಬೇಕಾಗುವ ಆಹಾರವನ್ನು ಉತ್ವಾದನೆ ಮಾಡುವವನೇ ಅನ್ನದಾತನಾದ ರೈತ ಅದ್ದರಿಂದ ರೈತ ಸಮುದಾಯವನ್ನು ಅತ್ಯಂತ ಗೌರವ ಪೂರ್ಣವಾಗಿ ಕಾಣಬೇಕೆಂದು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಕೃಷಿ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ರಾಷ್ಟಿçÃಯ ರೈತರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಮಾಡಿ ಮಾತನಾಡಿದರು. ತಾಲೂಕಿನಲ್ಲಿ ಬರಗಾಲವಿದೆ ಆದರೆ ರೈತರಿಗೆ ಬರವಿಲ್ಲ, ಅದರಂತೆ ತಾಲೂಕಿನಲ್ಲಿ ಮಳೆ ಪ್ರಮಾಣ ತೀವ್ರ ಕಡಿಮೆ ಬಿಳುತ್ತದೆ ಅದಕ್ಕೆ ತಕ್ಕಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕು, ಕಡಿಮೆ ನೀರಿನಲ್ಲಿ ಕಡಿಮೆ ಹಣದಲ್ಲಿ ಆರ್ಥಿಕವಾಗಿ ಮುಂದೆ ಬರಲು ಮಿಶ್ರ ಬೇಸಾಯ ಪದ್ದತಿಯನ್ನು ಅಳವಡಿಸಿಕೊಳ್ಳಬೆಕು ಆಗ ಮಾತ್ರ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ, ತಾಲೂಕಿನಲ್ಲಿ ಉದ್ಯೋಗ ಖಾತ್ರಿಯಲ್ಲಿ ಹಾಗೂ ಇನ್ನಿತರೆ ಯೋಜನೆಯಲ್ಲಿ ರೈತರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಎಲ್ಲಾ ಪ್ರೋತ್ಸಹ ಬೆಳೆಗಳನ್ನು ಬೆಳೆಯಲು ಪ್ರೋತ್ಸಹಿಸಬೇಕು ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಕೃಷಿ ಜಂಟಿ ನಿದೇರ್ಶಕ ಮಂಜುನಾಥ್, ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರನ್ನು ಒಳಗೊಂಡ ತಾಲೂಕು ಇದಾಗಿದೆ. ಸರಕಾರ ಈಗೀನ ನೂತನ ಬೆಳೆ ಸರ್ವೆಯನ್ನು ಮೊಬೈಲ್ ತಂತ್ರಜ್ಞಾನದ ಮೂಲಕ ಬೆಳೆ ದೃಡೀಕರಣ ಮಾಡಲಾಗುತ್ತದೆ ಇದು ಪಾರದರ್ಶಕವಾಗಿದೆ, ಮತ್ತು ಬೆಳೆ ದರ್ಶಖ್ ತಂತ್ರಜ್ಞಾನ ಜಾರಿಗೊಳಿಸಿದೆ ಮತ್ತು ಪ್ರಪಂಚದ ಎಲ್ಲಾ ದೇಶಗಳಿಂದ ಭಾರತ ದೇಶ ಕೃಷಿಕ ಸಮಾಜ ಆದ್ದರಿಂದ ಕೃಷಿ ಮೂಲಕದಿಂದ ನಮ್ಮ ದೇಶ ಅಭಿವೃದ್ದಿಯತ್ತ ಸಾಗಿದೆ ಎಂದರೆ ಅದು ತಪ್ಪಾಗಲಿಕ್ಕಿಲ್ಲ ದೇಶದಲ್ಲಿ ಕೃಷಿಗೆ ಯೋಗ್ಯವಾದ ಭೂಮಿಯಿಂದ ಕೃಷಿಕ ಸಮಾಜವಾಗಿದೆ ಎಂದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಭೂಚೇತನ ಎಂಬ ಕಾರ್ಯಕ್ರಮವನ್ನು ಮತ್ತೆ ಅನುಷ್ಠಾನಕ್ಕೆ ತರುವ ಮೂಲಕ ರೈತರ ಭೂಮಿಗಳನ್ನು ಫಲವತ್ತತೆ ಹೆಚ್ಚಿಸಬೇಕು ಇದರ ಬಗ್ಗೆ ಶಾಸಕರು ಅಧಿವೇಶನದಲ್ಲಿ ಗಮನ ಸೆಳೆದು ಅನುಷ್ಟಾನ ಮಾಡಬೇಕು, ರೈತರಿಗೆ ಖಾಸಗಿ ಕಂಪನಿಗಳು ನೀಡುವ ಬೀಜ, ಗೊಬ್ಬರ ವಿಷವಾಗಿರುತ್ತದೆ ಇದರಿಂದ ರೈತರ ಭೂಮಿಗಳು ಹಸನಾಗಿಸಬೇಕು ಎಂದು ಒತ್ತಾಯಿಸಿದರು.
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ರೈತ ಏನಾದರೂ ಕೃಷಿ ಚಟುವಟಿಕೆ ಬಿಟ್ಟು ಬೇರೆ ವಲಯಕ್ಕೆ ಬಂದರೆ ಈ ದೇಶದ, ಈ ಪ್ರಪಂಚದ ಗತಿ ಏನಾದಿತು ಊಹಿಸಲು ಅಸಾಧ್ಯ ಆಹಾರಕ್ಕೆ ಆಹಾಕಾರ ಉಂಟಾಗಿ ದೇಶ ಅನಾಗರಿಕ ಕಾಲದತ್ತ ಹೋಗುವುದನ್ನು ಯಾರು ತಡೆಯಲಾಗುವುದಿಲ್ಲ ಆದ್ದರಿಂದ ರೈತರಿಗೆ ಕೊಡುವಂತಹ ಸಬ್ಸಿಡಿ, ಬೆಳೆವಿಮೆ, ಬೆಳೆಪರಿಹಾರ, ಬೆಳೆ ನಷ್ಟದಂತಹ ಪರಿಹಾರಗಳನ್ನು ಇರುವಂತಹ ಸರ್ಕಾರಗಳು ಕೊಟ್ಟು ರೈತರು ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಯಿಂದ ಹಿಂದೆ ಸರಿಯಲು ಬಿಡಬಾರದು ಎಂದು ತಿಳಿಸಿದರು
ಹಿರಿಯೂರು ಬಬ್ಬೂರು ಪಾರಂ.ನ ವಿಜ್ಞಾನಿ ಡಾ.ಓಕಾರಪ್ಪ ಮಾತನಾಡಿ, ಇಂದಿನ ಕಾಲದಲ್ಲಿ ಆಧುನಿಕತೆಗೆ ಮಾರುಹೊಗಿ ರೈತ ತಮ್ಮ ಹಿಂದಿನ ಕಾಲದ ಕೊಟ್ಟಿಗೆ ಗೊಬ್ಬರವನು ಮರೆತು ರಾಸಾಯನಿಕ ಗೊಬ್ಬರಕ್ಕೆ ಮೊರೆಹೊಗಿ ತಮ್ಮ ಮಣ್ಣಿನ ಫಲವತ್ತೆಯನ್ನು ಕಡಿಮೆ ಮಾಡಿದ್ದಾನೆ ಹಾಗೂ ಮಣ್ಣಿನ ಸತ್ವವನ್ನು ನಾಶಪಡಿಸಿದ್ದಾನೆ ಇದರಿಂದ ಹಲವು ರೋಗಗಳು ತಗುಲಿ ಬೆಳೆ ನಾಶವಾಗುತ್ತದೆ ಎಂದರು.
ಪ್ರಗತಿಪರ ಡಾ.ಆರ್.ಎ.ದಯಾನಂದಮೂರ್ತಿ ಮಾತನಾಡಿ, ಬರವನ್ನು ಹೋಗಲಾಡಿಸಲು ರೈತರು ಹಲವಾರು ಕೃಷಿ ತಂತ್ರಾಜ್ಞಾನಗಳನ್ನು ಅಳವಡಿಸಿಕೊಂಡು ಬರಕ್ಕೆ ಅದಕ್ಕೆ ಎದೆಕೊಟ್ಟು ನಿಲ್ಲುವ ಧೈರ್ಯ ರೈತನಿಗೆ ಮಾತ್ರ ಇದೆ, ಬರ ಎಂಬುದು ಮನುಷ್ಯನಿಗೆ ಮಾತ್ರ ಹೊರತು ಪರಿಸರಕ್ಕೆ ಅಲ್ಲ, ಹಣ್ಣು ಕೊಡುವ ಕಾಡಿನಲ್ಲಿ ಜಾತಿಯ ಗಿಡಗಳು ಇವೆ ಆದರೆ ರೈತ ಕೆವಲ ಒಂದೇ ಬೆಳೆಗೆ ಸಿಮೀತವಾಗಿರುವುದು ಬೇಸರದ ಸಂಗತಿ, ಮನೆಯಲ್ಲಿ ಬೇಕಾದಷ್ಟು ಆದಾಯ ವಿದೆ ಆದರೆ ಬೇರೆ ಊರುಗಳಿಗೆ ವಲಸೆ ಹೋಗುವುದು ಬೇಡ, ನಾಟಿ ಹಸು ಸಾಕಣಿ ಉಪಯೋಗ ಮತ್ತು ಅದರ ಗಂಜಲ, ಹಾಗೂ ಅಡವಿ ಕಾಡು ಜಾತಿ ಮರಗಳ ಉಪಯೋಗವನ್ನು ರೈತರ ಮುಂದೆ ತೆರೆದಿಟ್ಟು ಲಾಭದಾಯಕ ಆದಾಯ ಗಳಿಸುವ ವಿಧಾನವನ್ನು ತಿಳಿಸಿದರು.

ಈದೇ ಸಂಧರ್ಭದಲ್ಲಿ ರಾಜ್ಯ ರೈತ ಸಂಘ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಅಖಂಡ ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ತಾಲೂಕು ಅಧ್ಯಕ್ಷ ಶ್ರೀಕಂಠಮೂರ್ತಿ, ಜಂಟಿ ಕೃಷಿನಿರ್ದೇಶಕ ಮಂಜುನಾಥ್, ಡಾ.ಓಂಕಾರಪ್ಪ, ಅಖಂಡ ಕರ್ನಾಟಕ ರೈತ ಸಂಘ ತಾಲೂಕಿನ ಅಧ್ಯಕ್ಷ ಚಿಕ್ಕಣ್ಣ, ಪ್ರಗತಿಪರ ರೈತ ಡಾ.ಆರ್.ಎ.ದಯಾನಂದಮೂರ್ತಿ, ತಿಪ್ಪೇಸ್ವಾಮಿ, ಜಿಪಂ.ಕೆಡಿಪಿ ನಾಮನಿರ್ದೇಶನ ಸದಸ್ಯ ರಂಗಸ್ವಾಮಿ, ದೊಡ್ಡ ಉಳ್ಳಾರ್ತಿ ಕರಿಯಣ್ಣ, ನಗರಸಭೆ ಸದಸ್ಯ ರಮೇಶ್ ಗೌಡ, ರೆಡ್ಡಿಹಳ್ಳಿಶಿವಣ್ಣ, ನಾಗೇಂದ್ರಪ್ಪ, ಓಬಣ್ಣ, ಉಪ ಕೃಷಿ ನಿರ್ದೇಶಕ ಡಾ..ಎನ್.ಪ್ರಭಾಕರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ, ಪಶು ಇಲಾಖೆ ನಿರ್ದೇಶಕ ರೇವಣ್ಣ, ಕೃಷಿ ಸಹಯಾಕಧಿಕಾರಿ ಅಶೋಕ್,ರೇಷ್ಮೆ ಅಧಿಕಾರಿ ಮೋಹನ್, ಪರುಶುರಾಂಪುರ ಕೃಷಿ ಅಧಿಕಾರಿ ಜೀವನ್ ಕುಮಾರ್, ತಿಪ್ಪೇಸ್ವಾಮಿ, ಸಾಮ್ಯಾನಾಯ್ಕ್, ಮಂಜುನಾಥ್, ಇತರ ರೈತ ಮುಖಂಡರು ಪಾಲ್ಗೊಂಡಿದ್ದರು.
ಈದೇ ಸಂಧರ್ಭದಲ್ಲಿ ಪ್ರಗತಿಪರ ರೈತ ಡಾ.ಆರ್.ಎ.ದಯಾನಂದ ಮೂರ್ತಿ ಜೀವನ ಚರಿತ್ರೆ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಶಾಸಕ ಟಿ.ರಘುಮೂರ್ತಿ ಹಸ್ತದಿಂದ ಬಿಡುಗಡೆ ಮಾಡಿದರು.

ಪೋಟೋ, ಚಳ್ಳಕೆರೆ ನಗರದ ಕೃಷಿ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ರೈತರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿದರು.

ಪೋಟೋ ಚಳ್ಳಕೆರೆ ನಗರದ ಕೃಷಿ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ರೈತರ ದಿನಾಚರಣೆ ಶಾಸಕ ಟಿ.ರಘುಮೂರ್ತಿ ರೈತರನ್ನು ಸನ್ಮಾನಿಸಿದರು.

Namma Challakere Local News
error: Content is protected !!