ಚಿತ್ರದುರ್ಗ : ಕಲ್ಲಿನ ಕೋಟೆಯಲ್ಲಿ ಬೆಳಂ ಬೆಳ್ಲಿಗ್ಗೆ ಬೆಚ್ಚಿ‌ ಬೀಳುವ ಘಟನೆ ನಡೆದಿದೆ.

ಒಂದೇ ಮನೆಯಲ್ಲಿ ಐದು ಅಸ್ಥಿಪಂಜರಗಳು ಸಿಗುವ ಮೂಲಕ ನಾಗರೀಕರಲ್ಲಿ ಆತಂಕ ಸೃಷ್ಟಿ ಮಾಡಿದೆ.

ಚಿತ್ರದುರ್ಗ ನಗರದ ಜೈಲ್ ರಸ್ತೆಯ ಮನೆಯೊಂದರಲ್ಲಿ 3 ಅಸ್ಥಿಪಂಜರಗಳು
ಪತ್ತೆಯಾಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ನಗರದ ಚಳ್ಳಕೆರೆ
ಟೋಲ್ ಗೇಟ್ ಬಳಿಯ ಹಳೆ ಬೆಂಗಳೂರು ರಸ್ತೆಯ
ಜೈಲ್ ರಸ್ತೆಯ ಜಗನ್ನಾಥ ರೆಡ್ಡಿ ಸಮೀಲ್ ಇಂಜಿನಿಯರ್
ದೊಡ್ಡ ಸಿದ್ದವ್ವನಹಳ್ಳಿ ಎಂಬ ನಾಮಫಲಕ ಹೊಂದಿರುವ
ಮನೆಯಲ್ಲಿ ಮೂರು ಅಸ್ಥಿಪಂಜರಗಳು ಪತ್ತೆಯಾಗಿದ್ದು
ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಇನ್ನೂ ದೊಡ್ಡ ಸಿದ್ದವ್ವನಹಳ್ಳಿ
ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ,
ಮನೆಯ ಕೊಠಡಿ ಒಳಗಡೆ ಇರುವ ಮಂಚದ ಮೇಲೆ ಒಂದು ಅಸ್ಥಿಪಂಜರ,
ನೆಲದ ಮೇಲೆ ಹಾಗೂ ಬಾಗಿಲು ಹಿಂದೆ ಅಸ್ಥಿ ಪಂಜರ ಕಂಡು ಬಂದಿದ್ದು,
ಅಸ್ಥಿಪಂಜರ ಬಳಿ ಆಕ್ಸಿಜನ್ ಸಿಲಿಂಡರ್ ಕಂಡು ಬಂದಿದ್ದು,
ಜಗನ್ನಾಥ ರೆಡ್ಡಿ, ಕೃಷ್ಣಾರೆಡ್ಡಿ, ಜಗನ್ನಾಥ ರೆಡ್ಡಿ ಪತ್ನಿಯ
ಅಸ್ತಿಪಂಜರಗಳು ಇರಬಹುದು ಎಂದು ಸ್ಥಳೀಯ ನಿವಾಸಿಗಳ ಮಾಹಿತಿ
ನೀಡಿದ್ದಾರೆ.

ಇಷ್ಟೆ ಅಲ್ಲದೆ ಸ್ಥಳೀಯರ ಪ್ರಕಾರ ಮನೆಯ ನಿವಾಸಿಗಳು
2019 ರ ಸೆಪ್ಟೆಂಬರ್ ನಿಂದ ಯಾರಿಗೂ ಸಹ ಕಾಣದೆ ಇರುವುದು ಕಂಡು
ಬಂದಿರುತ್ತದೆಯಂತೆ. ಆ ನಂತರದ ದಿನಗಳಲ್ಲಿ ಮನೆಯ ಸುತ್ತಮುತ್ತ ಸ್ವಲ್ಪ
ದುರ್ವಾಸನೆ ಬಂದಂತಹ ಸ್ಥಿತಿಯಿತ್ತು ನಾವು ಯಾವುದೋ ಪ್ರಾಣಿ ಸತ್ತಿರುವ
ವಾಸನೆ ಬರುತ್ತದೆ ಎಂದು ತಿಳಿದುಕೊಂಡಿದ್ದೆವು ಎಂದು ಸ್ಥಳೀಯರಿಂದ ಮಾಹಿತಿ
ಲಭ್ಯವಾಗಿದೆ.

ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಡಿವೈಎಸ್ಪಿ ಅನಿಲ್
ಕುಮಾರ್, ಸಿಪಿಐ ನಯೀಂ ಅಹಮದ್, ಪಿಎಸ್ಐ ರಘು ಸ್ಥಳಕ್ಕೆ ಭೇಟಿ ನೀಡಿ
ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಶ್ವಾನ ದಳದವರು ಬಂದಿದ್ದು, ಪತ್ತೆ ಕಾರ್ಯ
ಆರಂಭಿಸಿದ್ದಾರೆ. ಚಿತ್ರದುರ್ಗದ ಪೊಲೀಸರು ವಿಧಿ ವಿಜ್ಞಾನ ತಜ್ಞರಿಗಾಗಿ
ಕಾಯುತ್ತಿದ್ದು, ಅವರು ಬಂದ ಮೇಲೆ ಅಸ್ತಿ ಪಂಜಿರಗಳ ಅಸ್ತಿ ಸಂಗ್ರಹಿಸಿ
ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬಂದ ಮೇಲೆ ಸತ್ಯಾಸತ್ಯತೆ ಹೊರ
ಬರಲಿದೆ. ಈ ಪ್ರಕರಣವು ನಗರದ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
ನಡೆದಿದ್ದು, ಮನೆಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ,
ಬ್ಯಾರಿಕೇಡ್ ಹಾಕಿ, ಪೊಲೀಸ್ ಸರ್ಪಗಾವಲು ಹಾಕಲಾಗಿದೆ, ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ಹೊರಬಿಳಲಿದೆ ಎನ್ನಲಾಗಿದೆ.

About The Author

Namma Challakere Local News
error: Content is protected !!