ಚಳ್ಳಕೆರೆ : ಗ್ಯಾಸ್ ಸಿಲಿಂಡರ್ಗೆ ಇಕೆವೈಸಿ ಮಾಡಿಸಲು ಯಾವುದೇ ಅಂತಿಮ ದಿನಾಂಕ ಇರುವುದಿಲ್ಲ ಆದ್ದರಿಂದ ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಇಕೆವೈಸಿ ಮಾಡಿಸಬೇಕು ಎಂದು ಕುಬೇರ ಗ್ಯಾಸ್ ಮಾಲೀಕರಾದ ತಿಪ್ಪೇರುದ್ರಪ್ಪ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಅವರು ನಗರದ ವಿಠಲ ನಗರದ ಕುಬೇರ್ ಗ್ಯಾಸ್ ಏಜಿನ್ಸಿಗೆ ಇಕೆವೈಸೊಇ ಮಾಡಿಸಲು ಜಮಾಯಿಸಿದ ಮಹಿಳೆಯರಿಗೆ ಜಾಗೃತಿ ಮೂಡಿಸುವ ಮೂಲಕ ಮಾತನಾಡಿದರು, ಗ್ಯಾಸ್ ಸಂಪರ್ಕ ವಿರುವ ಗ್ರಾಹಕರಿಗೆ ತಮ್ಮ ಗ್ಯಾಸ್ ಖಾತೆಗಳಿಗೆ ಲಾಗಿನ್ ಮಾಡಿಸಲು. ಸರ್ಕಾರ ಯಾವುದೇ ಕೊನೆಯ ದಿನಾಂಕ ನಿಗಧಿ ಪಡಿಸಿಲ್ಲ. ನೀವು ಯವುದೋ ವದಂತಿಗಳಿಗೆ, ಮಾರುಹೊಗದೆ, ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳ ಬೇಡಿ. ನಿಮ್ಮ ಹಳ್ಳಿಗಳಿಗೆ ನಮ್ಮ ಏಜೇನ್ಸಿ ಹುಡುಗರು ಬಂದು ಮಾಹಿತಿ ನೀಡುತ್ತಾರೆ ಎಂದು ಜನ ಜಾಗೃತಿ ಮೂಡಿಸಿದರು.