ಚಳ್ಳಕೆರೆ : ಕರಡಿ ಪ್ರತಕ್ಷ್ಯ ಮಹಿಳೆ ಮೇಲೆ ದಾಳಿ
ಸ್ಥಳಕ್ಕೆ ತಹಶೀಲ್ದಾರ್ ರೇಹಾನ ಪಾಷ ಬೇಟಿ
ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಕೆರೆಯಂಗಳದಲ್ಲಿ ಮುಂಜಾನೆ ಮಹಿಳೆಯೊರ್ವರ ಮೇಲೆ ಕರಡಿ ದಾಳಿ ಮಾಡಿದೆ ದುರದೃಷ್ಟವಶಾತ್ ಮಹಿಳೆ ಮಂಜಮ್ಮ, (51)ಪ್ರಾಣಾಪಯದಿಂದ ಉಳಿದಿದ್ದು , ತಲೆಯ ಭಾಗದಲ್ಲಿ ಕರಡಿ ದಾಳಿಯಿಂದ ಘಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಮುಂಜಾನೇ ಸ್ಥಳಕ್ಕೆ ತಹಶೀಲ್ದಾರ್ ರೇಹಾನ್ ಪಾಷ ಬೇಟಿ ನೀಡಿ ಸ್ಥಳ ಪರೀಶಿಲನೆ ನಡೆಸುತ್ತಿದ್ದಾರೆ.
ಇನ್ನೂ ಗ್ರಾಮದ ಹೊರವಲಯದಲ್ಲಿ ಮೂರು ಕರಡಿಗಳು ಓಡಾಡಿರುವ ಶಂಕೆ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿ ತಳಕು ಪೊಲೀಸ್ ಪಿಎಸ್ಐ ಲೋಕೇಶ್ ಹಾಗು ಸಿಬ್ಬಂದಿ ಗ್ರಾಮ ಲೆಕ್ಕಾಧಿಕಾರಿ ಕೇಶವ ಚಾರ್ ಹಾಗು ಅರಣ್ಯ ಅಧಿಕಾರಿಗಳು ದೌಡಹಾಯಿಸಿದ್ದಾರೆ.