ನಾಯಕನಹಟ್ಟಿ:: ಹೋಬಳಿಯ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ರಾಮದುರ್ಗ ಗ್ರಾಮದಲ್ಲಿ ಕಳೆದ ಮೂರು ದಿನಗಳ ಕಾಲ ಅದ್ದೂರಿಯಾಗಿ ಶ್ರೀಮಂದ ಬೊಮ್ಮಲಿಂಗೇಶ್ವರ ಸ್ವಾಮಿಯ ಜಾತ್ರೋತ್ಸವ ಜರುಗಿದೆ.
ಎಂದು ಗ್ರಾಮ ಪಂಚಾಯತಿಯ ಸದಸ್ಯ ಬಂಗಾರಪ್ಪ ಹೇಳಿದ್ದಾರೆ.

ಅವರು ಭಾನುವಾರ ಶ್ರೀಮಂದ ಬೊಮ್ಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ ನಮ್ಮ ಗ್ರಾಮದ ಹೊರವಲಯದಲ್ಲಿರುವ ದೊಣೆ ಎಂಬ ಸ್ಥಳಕ್ಕೆ ನಮ್ಮ ಪೂರ್ವಜರು ದೊಣೆಮಂಡಲಹಟ್ಟಿ ಎಂಬ ಹೆಸರು ನಾಮಕರಣವಾಗಿದೆ.
ಪ್ರತಿ ವರ್ಷವೂ ಬುಡಕಟ್ಟು ಸಂಸ್ಕೃತಿಯ ಆಚಾರ ವಿಚಾರಗಳ ಸಂಪ್ರದಾಯದಂತೆ ಕಳೆದ ಮೂರು ದಿನಗಳಿಂದ ಶ್ರೀಮಂದ ಬೊಮ್ಮಲಿಂಗೇಶ್ವರ ಸ್ವಾಮಿಯ ಜಾತ್ರೋತ್ಸವ ಸಂಭ್ರಮ ಸಡಗರದಿಂದ ಆಚರಿಸಲಾಗಿದೆ ಭಾನುವಾರ ಮೂರನೇ ದಿನವಾದರಿಂದ ಗ್ರಾಮಕ್ಕೆ ಶ್ರೀ ಮಂದ ಬೊಮ್ಮಲಿಂಗೇಶ್ವರ ಸ್ವಾಮಿಯ ವಿವಿಧ ಮಂಗಳವಾದ್ಯಗಳೊಂದಿಗೆ ಅದ್ದೂರಿಯಾಗಿ ಗ್ರಾಮಕ್ಕೆ ಕರೆತರಲಾಗುತ್ತದೆ ನಮ್ಮ ಮ್ಯಾಸ ನಾಯಕ ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೈವ ಶ್ರೀಮಂದ ಬೊಮ್ಮಲಿಂಗೇಶ್ವರ ಮೂಲಸ್ಥಾನ ನಮ್ಮ ಗ್ರಾಮದ ಸಮೀಪದಲ್ಲಿರುವ ( ಬಿ ಆರ್ ಸಿ) ಹತ್ತಿರದ ಸ್ಥಳ ಈ ಸ್ಥಳದಲ್ಲಿ ನಮ್ಮ ನಾಯಕ ಜನಾಂಗದವರು ವಾಸ ಮಾಡಿರುವಂತ ಸ್ಥಳವಾಗಿದೆ ನಮ್ಮ ಪೂರ್ವಜರು ಆ ಸ್ಥಳಕ್ಕೆ (ಸಣ್ಣಗಂಬಲದಿನ್ನಿ) ಎಂಬ ಹೆಸರನ್ನ ಕರೆಯುತ್ತಾರೆ.
ಅಲ್ಲಿ ನಮ್ಮ ಮ್ಯಾಸ ನಾಯಕ ಸಮುದಾಯದವರು ಪ್ರತಿ ಮೂರು ಮತ್ತು ಐದು ವರ್ಷಕ್ಕೊಮ್ಮೆ ಈ ಸ್ಥಳದಲ್ಲಿ ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೈವ ಶ್ರೀ ಮಂದ ಬೊಮ್ಮಲಿಂಗೇಶ್ವರ ನಡೆಸುತ್ತಾ ಬಂದಿದ್ದಾರೆ ಅದರಂತೆ ಇಂದು ಗ್ರಾಮದ ಹೊರವಲಯದಲ್ಲಿರುವ ದೋಣಿ ಎಂಬ ಸ್ಥಳದಲ್ಲಿ ಕಳೆದ ಮೂರು ದಿನಗಳ ಕಾಲ ಶ್ರೀ ಮಂದ ಬೊಮ್ಮಲಿಂಗೇಶ್ವರ ಸ್ವಾಮಿಯ ದೇವರ ಪೂಜಾ ಕೈಕಾರ್ಯಗಳು ನೆರವೇರಿಸಲಾಗಿದೆ ಗ್ರಾಮದ ಸರ್ವ ಭಕ್ತಾದಿಗಳು ಸಂಭ್ರಮ ಸಡಗರದಿಂದ ಆಚರಣೆ ಮಾಡಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಮದುರ್ಗ ಗ್ರಾಮದ ಆರಾಧ್ಯ ದೈವ ಶ್ರೀ ಮಂದ ಬೊಮ್ಮಲಿಂಗೇಶ್ವರ ಸ್ವಾಮಿಯ ಗುಡಿಕಟ್ಟಿನ ಅಣ್ಣತಮ್ಮಂದಿರು ಸಮಸ್ತ ಊರಿನ ಗ್ರಾಮಸ್ಥರು ಇದ್ದರು

Namma Challakere Local News
error: Content is protected !!