ಹಿರಿಯೂರು : ಜಾನಪದ ಕಲೆಗಳಿಂದ ಮನಉಲ್ಲಾಸ ಕಾಣುವ ಜತೆಗೆ ಮಾನಸ್ಸಿಕ ನೆಮ್ಮದಿ ಕಾಣಲು ಸಾಧ್ಯ ಎಂದು ಐಮಂಗಲ ಪೊಲೀಸ್ ತರಬೇತಿ ಶಾಲೆಯ ಎಸ್‌ಪಿ ಪಾಪಣ್ಣ ಹೇಳಿದ್ದಾರೆ.
ಹಿರಿಯೂರು ತಾಲೂಕು ಐಮಂಗಲ ಪೊಲೀಸ್ ತರಬೇತಿ ಶಾಲೆಯ ಸಭಾಂಗಣದಲ್ಲಿ ಶ್ರೀ ವಾಲ್ಮೀಕಿ ಶೈಕ್ಷಣಿಕ, ಕ್ರೀಡಾ ಸಾಂಸ್ಕೃತಿಕ ಯುವಕ ಸಂಘ ಬೊಂಬೇರಹಳ್ಳಿ ಮತ್ತು ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸಂಭ್ರಮ 50, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಸುಗಮ ಸಂಗೀತ ಹಾಗೂ ಜಾನಪದ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಜಾನಪದ ಕಲೆಗಳು ಮೊದಲು ಹುಟ್ಟಿದ್ದು ಹಳ್ಳಿಗಳಲ್ಲಿ ಬಯಲಾಟ, ಕೋಲಾಟ ಜತೆಗೆ ಕೃಷಿ, ಬೆಳೆನಾಟಿ, ನಾಟಿ, ಬೀಸುವಾಗ ಹಾಡಿದಂತಹ ಸಾಲುಗಳಲ್ಲಿ ನಮ್ಮ ಪೂರ್ವ ಜರು ಮನರಂಜನೆ ಕಾಣುವ ಜತೆಗೆ ಸಧೃಡ ಆರೋಗ್ಯ ಹೊಂದಿದ್ದರು. ಅಂತಹ ಕಲೆಗಳು ಇಂದಿನ ಜಾಗತಿಕ ಮಟ್ಟದಲ್ಲಿ ನಶಿಸಿಹೋಗಿದ್ದು ಉಳಿಸಿಬೆಳೆಸುವ ಕೆಲಸ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಮಾತನಾಡಿ, ಇಲಾಖೆ ಯಿಂದ ಬುಡಕಟ್ಟು ಜನಾಂಗ ಗಿರಿಜನ, ಪ.ಜಾತಿ, ಪ.ಪಂಗಡ ಕಲಾವಿದರಿಗೆ ಇಲಾಖೆಯಿಂದ ನಾನಾ ಕಾರ್ಯಕ್ರಮಗಳಿಗೆ ಅನುದಾನ ನೀಡಿ ಕಲಾವಿದರನ್ನು ಪ್ರೋತ್ಸಾಹಿಸಲಾಗುತ್ತಿದೆ. ಜತೆಗೆ ಯುವಕರಿ ಯುವ ಸೌರಭ, ಮಕ್ಕಳಿಗೆ ಚಿಗುರು, ಗಡಿ ಭಾಗದ ಉತ್ಸವಗಳಿಗೆ ಕಾರ್ಯಕ್ರಮ ಗಳನ್ನು ಕೊಡಲಾಗುತ್ತಿದೆ. ನಿವೃತ್ತಿ ಹೊಂದಿದ ಕಲಾವಿದರಿಗೆ ಮಾಸಾಶನ ನೀಡಲಾಗುತ್ತಿದೆ ಎಂದರು.
ಇದೇ ವೇಳೆ ಚಳ್ಳಕೆರೆ ತಾಲೂಕು ಶ್ರೀ ಕ್ಷೇತ್ರ ಡಿ.ಉಪ್ಪಾರಹಟ್ಟಿ ಗ್ರಾಮದ ವಾಲ್ಮೀಕಿ ಗುರುಪೀಠದ ಶೀ ವಾಲ್ಮೀಕಿ ಹರ್ಷಾನಂದ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತುನ ಗೌರವ ಕಾರ್ಯದರ್ಶಿ ಕೆ.ಪಿ.ಎಂ ಗಣೇಶಯ್ಯ ಮಾತನಾಡಿದರು.
ಸಂದರ್ಭದಲ್ಲಿ ಕಲಾವಿದ ತಿಪ್ಪೇಸ್ವಾಮಿ ಹಾಗೂ ನಾಗವೇನ ಸಂಗಡಿಗರಿAದ ಸುಗಮ ಸಂಗೀತ ಹಾಗೂ ಜಾನಪದ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ವೇದಿಕೆಯಲ್ಲಿ ರಾಜ್ಯೋತ್ಸವ ಪುಸ್ಕೃತ ಕಲಾವಿದ ದೊಡ್ಡೇರಿ ಶ್ರೀ ನಿವಾಸ್ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಇದೇ ವೇಳೆ ಅಧ್ಯಕ್ಷ ವಿ. ತಿಪ್ಪೇಸ್ವಾಮಿ, ಪತ್ರಕರ್ತ ಮಂಜುನಾಥ, ವಿ.ಹನುಮಂತರಾಯ, ಶ್ರೀನಿವಾಸ್, ಬೊಂಬೇರಹಳ್ಳಿ ವಾಲ್ಮೀಕಿ ಸಂಘದ ತಿಪೇಸ್ವಾಮಿ, ರಜನಿಕಾಂತ್ ವಿಜಿಯಣ್ಣ, ಅರುಣ್ ಜಾನಪದ ಕಲಾವಿದರು ಇದ್ದರು.