ಚಳ್ಳಕೆರೆ : ತಿರುಮಲ ವೆಂಕಟೇಶ್ವರ ದೇವಸ್ಥಾನವು ಮುಕ್ಕೋಟಿ ಏಕಾದಶಿಯನ್ನು ಆಚರಿಸಲು ಇದೇ ರೀತಿಯ ಪರಿಕಲ್ಪನೆಯನ್ನು ಹೊಂದಿದೆ, ತಿರುಮಲವು ಗರ್ಭಗುಡಿಯನ್ನು ಸುತ್ತುವರೆದಿರುವ ವೈಕುಂಠ ದ್ವಾರಂ ಎಂಬ ವಿಶೇಷ ಪ್ರವೇಶವನ್ನು ಹೊಂದಿದೆ ಎಂದು ಜಿ.ಮಾರಣ್ಣ ಹೇಳಿದರು.
ಅವರು ನಗರದ ಹಳೆ ನಗರದಲ್ಲಿ ಶ್ರೀ ತಿಮ್ಮಪ್ಪ ದೇವಾಸ್ಥಾನದಲ್ಲಿ ಆಯೋಜಿಸಿದ್ದ ಶ್ರೀ ವೈಕುಂಠ ಏಕಾದಶಿ ಪ್ರಯುಕ್ತ ಮುಂಜಾನೆಯಿAದ ವಿಶೇಷ ಪೂಜೆಯನ್ನು ನೆರೆವೆರಿಸುತ್ತಾ ಮಾತನಾಡಿದರು, ಕಳೆದ ಹಲವು ವರ್ಷಗಳಿಂದ ಈ ತಿಮ್ಮಪ್ಪನ ಸನ್ನಿದಾನದಲ್ಲಿ ಸಾವಿರಾರು ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ ಅದರಂತೆ ಇಂದು ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ಭಕ್ತಿಗಳು ದೇವಾಸ್ಥಾನಕ್ಕೆ ಆಗಮಿಸಿದ್ದಾರೆ, ಇನ್ನೂ ತಿಮ್ಮಪ್ಪನ ಭಕ್ತರಾದ ಬಾಳೆಕಾಯಿ ರಾಮದಾಸ್ ರವರು ಸುಮಾರು ನಾಲ್ಕು ಸಾವಿರ ಭಕ್ತಾಧಿಗಳಿಗೆ ಪ್ರಸಾದ್ ನೀಡುವುದರಿಂದ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ, ಅದರಂತೆ ಈ ಬಾರಿ ವಿಶೇಷವಾಗಿ ಲಡ್ಡು ಪ್ರಸಾದ್ ನೀಡಲಾಗುತ್ತದೆ, ನಂತರ ಶಾಂತಿನಗರದ ಗಣಪತಿ ಮಹಿಳಾ ಭಜನ ಮಂಡಳಿಯಿAದ ಆವಣದಲ್ಲಿ ಭಜನೆ ಮಾಡುವ ಮೂಲಕ ದೇವರ ಕೇಪೆಗೆ ಪಾತ್ರರಾಗಿದ್ದಾರೆ ಎಂದರು.
ಇದೇ ಸಂಧರ್ಭದಲ್ಲಿ ಭಕ್ತಾಧಿಗಳಾದ ಜಯಣ್ಣ, ಸಿ.ತಿಮ್ಮಣ್ಣ, ಡಿಟಿ.ವೆಂಕಟೇಶ್, ಹಳೆನಗರದ ವೀರಭದ್ರ, ಹಾಗೂ ಕಾಲೋನಿಯ ಎಲ್ಲಾ ಭಕ್ತವೃಂಧ ಸೇರಿದಂತೆ ಸುಮಾರು ಮೂರು ಸಾವಿರ ಭಕ್ತಾಧಿಗಳು ಆರ್ಶೀವಾದ ಪಡೆದರು.