ಚಳ್ಳಕೆರೆ : ವೈಕುಂಠ ಏಕಾದಶಿಯ ಪ್ರಯುಕ್ತ ಚಳ್ಳಕೆರೆ ನಗರದ ಗಾಂಧಿನಗರದ ಶ್ರೀ ವೆಂಕಟೇಶ್ವರ ದೇವಾಸ್ಥಾನದ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿವತಿಯಿಂದ ಯೋಗ ಅಭ್ಯಾಸ ಮಾಡುವ ಮೂಲಕ ಏಕಾದಶಿ ಪೂಜಾ ವಿಧಾನಗಳನ್ನು ನೆರೆವೆರಿಸಿದರು.
ಈದೇ ಸಂಧರ್ಭದಲ್ಲಿ ಯೋಗ ಶಿಕ್ಷಕರಾದ ಮನೋಹರ ಅಣ್ಣಾ ಮಾತನಾಡಿ, ಮನುಷ್ಯನು ಇಂದು ಮಾನಸಿಕ ಸಮಾತೋಲನ ಕಾಪಾಡಿಕೊಳ್ಳವ ನಿಟ್ಟಿನಲ್ಲಿ ದಿನನಿತ್ಯದ ಯೋಗದ ಬದುಕು ಸಾರ್ಥಕ ಇದರಿಂದ ರೋಗಗಳು ದೂರವಾಗಲಿವೆ ಮತ್ತು ಮುಪ್ಪಿನ ವರ್ಷಗಳು ದೂರ ಸರಿಯಲಿವೆ ಎಂದು ಹೇಳಿದ್ದಾರೆ.
ಯೋಗ ಮಹತ್ವದ ಬಗ್ಗೆ ಮಹೇಶ್ ಅಣ್ಣಾ ಮಾತನಾಡಿ, ಯೋಗ ಭಾರತದ ಆಧ್ಯಾತ್ಮಿಕ ಶಿಸ್ತು” ಇದು ಸರ್ವ ರೋಗಗಳಿಗೂ ರಾಮಬಾಣ ಇದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಯೋಗದಿಂದ ಅನೇಕ ರೋಗಗಳನ್ನು ಮತ್ತು ಜೀವನದ ತೊಳಲಾಟವನ್ನು ದೂರಮಾಡುವುದು ಎಂದರು.
ಇದೇ ಸಂಧರ್ಭದಲ್ಲಿ ಯೋಗ ಬಂಧುವಾದ ವೈ ಎಸ್.ನಾಗರಾಜ್, ಸಿಎಲ್.ತಿಪ್ಪೆಸ್ವಾಮಿ, ಹಾಗೂ ದೇವಾಸ್ಥಾನ ಸಮಿತಿಯ ಸದಸ್ಯರು ಭಕ್ತ ವೃಂಧ ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!