ಚಳ್ಳಕೆರೆ : ರೈತರ ದಿನಾಚರಣೆಯ ಪ್ರಯುಕ್ತ ಚಳ್ಳಕೆರೆ ನಗರದ ಬಿಸಿಎಂ ಪದವೀಧರ ವಿದ್ಯಾರ್ಥಿಗಳೊಂದಿಗೆ ರೈತರು ಮುಖಂಡರು, ಕಾಂಗ್ರೇಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಈದೇ ಸಂಧರ್ಭದಲ್ಲಿ ಅಧ್ಯಕ್ಷರಾದ ಎ.ನಾಗರಾಜ್ ಮಾತನಾಡಿ ಪದವೀಧರ ಮತ್ತು ತಾಂತ್ರಿಕ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರೆಯುವುದರ ಜೊತೆ ಜೊತೆಗೆ ತಂದೆ ತಾಯಿಗಳು ಚಿಕ್ಕಂದಿನಲ್ಲಿ ಜಮೀನಿನಲ್ಲಿ ದುಡಿಯುವ ಚಿತ್ರಗಳು ಮನ ಪಟಲಕ್ಕೆ ತಂದುಕೊAಡು ಆಧುನಿಕ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.
ರೈತ ಏನಾದರೂ ಕೃಷಿ ಚಟುವಟಿಕೆ ಬಿಟ್ಟು ಬೇರೆ ವಲಯಕ್ಕೆ ಬಂದರೆ ಈ ದೇಶದ, ಈ ಪ್ರಪಂಚದ ಗತಿ ಏನಾದಿತು ಊಹಿಸಲು ಅಸಾಧ್ಯ ಆಹಾರಕ್ಕೆ ಆಹಾಕಾರ ಉಂಟಾಗಿ ದೇಶ ಅನಾಗರಿಕ ಕಾಲದತ್ತ ಹೋಗುವುದನ್ನು ಯಾರು ತಡೆಯಲಾಗುವುದಿಲ್ಲ ಆದ್ದರಿಂದ ರೈತರಿಗೆ ಕೊಡುವಂತಹ ಸಬ್ಸಿಡಿ, ಬೆಳೆವಿಮೆ, ಬೆಳೆಪರಿಹಾರ, ಬೆಳೆ ನಷ್ಟದಂತಹ ಪರಿಹಾರಗಳನ್ನು ಇರುವಂತಹ ಸರ್ಕಾರಗಳು ಕೊಟ್ಟು ರೈತರು ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಯಿಂದ ಹಿಂದೆ ಸರಿಯಲು ಬಿಡಬಾರದು ಎಂದು ತಿಳಿಸಿದರು
ಇನ್ನೂ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಿಎಂ.ಶಿವಕುಮಾರ್‌ಸ್ವಾಮಿ ಮಾತನಾಡಿ ಒಂದು ನಿಮಿಷ ಐದಾರು ಮೊಬೈಲ್ಗಳನ್ನು ತಯಾರು ಮಾಡಬಹುದು ಗಂಟೆಗಳ ಮೇಲೆ ಕಾರುಗಳನ್ನು ತಯಾರು ಮಾಡಬಹುದು ಬಾಹ್ಯಾಕಾಶಕ್ಕೆ ಹೋಗಿ ಬರಬಹುದು ಆದರೆ ಒಂದು ಕಾಳು ಈ ಬೆಳೆಯಬೇಕಾದರೆ ತಿನ್ನುವ ಆಹಾರ ಪದಾರ್ಥಗಳನ್ನು ಬೆಳೆಯಬೇಕಾದರೆ ಕನಿಷ್ಠ ಮೂರು ತಿಂಗಳು ಬೇಕೇ ಬೇಕು ಆದ್ದರಿಂದ ಯುವಕ ಮಿತ್ರರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.
ಈ ಸಮಯದಲ್ಲಿ ರೈತ ಮುಖಂಡರುಗಳಾದ, ಪ್ರದೀಪ ಕುಮಾರ, ಪಾಲಯ, ಹರೀಶ, ಸಂತೋಷ, ಈರಣ್ಣ, ನಾಗರಾಜ, ವಿದ್ಯಾರ್ಥಿಗಳು ಭರತ, ಸೀನು, ಉದಯಕಿರನ್, ಕುಮಾರಸ್ವಾಮಿ, ಚೇತನ್ ಕುಮಾರ್, ತಿಪ್ಪೇಸ್ವಾಮಿ, ಬಸವರಾಜು, ಕಿರಣ್, ಮಂಜುನಾಥ್ ಭರತ್‌ಕುಮಾರ್, ವರುಣ್ ಗೌಡ, ಮನೋಜು, ಶಿವಕುಮಾರ್ ಅಶ್ವಥ್, ರಾಮು, ಸೂರಜ್, ಅಡುಗೆ ವ್ಯವಸ್ಥಾಪಕರಾದ ಸುರೇಶ್ ಅಂಬುಜಮ್ಮ ಇನ್ನು ಮುಂತಾದವರು ಭಾಗವಹಿಸಿದ್ದರು