ಚಳ್ಳಕೆರೆ : ಶಾಲಾ ಆವರಣದಲ್ಲಿ ಉತ್ತಮ ವಾತಾವರಣವಿದ್ದಲ್ಲಿ ಕಲಿಕೆಗೆ ಪೂರಕವಾಗಿರುತ್ತದೆ, ಮಕ್ಕಳು ಮನಸ್ಸು ಆಹ್ಲಾದಕರವಾಗಿರುತ್ತದೆ, ಉತ್ತಮ ಆರೋಗ್ಯ ಹಾಗೂ ಕಲಿಕೆಗೆ ಪೂರಕವಾದ ಚಟುವಟಿಕೆಗಳಿಗೆ ಪರಿಸರ ಅತ್ಯಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್.ಸುರೇಶ್ ಹೇಳಿದರು.
ಅವರು ತಾಲೂಕಿನ ದೇವರೆಡ್ಡಿಹಳ್ಳಿ ಕ್ಲಸ್ಟರ್‌ನ ಗಡಿಭಾಗದ ಪಿಂಜಾರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸ್ಯಶಾಮಲಾ ಕಾರ್ಯಕ್ರಮದಡಿಯಲ್ಲಿ ಸಸಿನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಿಗೆ ಮನೆಯ ಪರಿಸರದಂತೆ ಶಾಲಾ ವಾತಾವರಣವನ್ನು ಸೃಷ್ಟಿಸಬೇಕು, ಆಗಿದ್ದಲ್ಲಿ ಮಾತ್ರ ಕಲಿಕೆಗೆ ಹಿಂಬು ನೀಡುತ್ತದೆ ಆದ್ದರಿಂದ ಇಂದು ಶಾಲಾ ಕೈತೋಟದಲ್ಲಿ 20ತೆಂಗಿನ ಸಸಿ, 10 ತೆಗೆದ ಸಸಿ, 20 ಮಹಾಗನಿಯ ಸಸಿಗಳನ್ನು ಸಾಂಕೇತಿಕವಾಗಿ ನೆಡಲಾಗಹಿದೆ ಎಂದರು.
ಇನ್ನೂ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಸಹಾಯಕ ನಿದೇರ್ಶಕರಾದ ಎಂ.ತಿಪ್ಪೆಸ್ವಾಮಿ, ತಳಕು ಹೋಬಳಿ ಶಿಕ್ಷಣ ಸಂಯೋಜಕರಾದ ಮಾರುತಿ ಭಂಡಾರಿ ಪಿ., ಸಿಆರ್‌ಪಿ ಶಿವಣ್ಣ, ಶಾಲಾಎಯ ಮುಖ್ಯ ಶಿಕ್ಷಕ ಮಂಜನಾಯ್ಕ್, ರವಿಕುಮಾರ್, ಹಾಗೂ ಗ್ರಾಮಸ್ಥರು ಹಾಜರಿದ್ದರು.