ಚಳ್ಳಕೆರೆ : ‘ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಆ ಶಿವನು’ ಎಂಬ ಮಾತಿನಂತೆ ಚುನಾವÀಣೆ ಸಂಧರ್ಭದಲ್ಲಿ ಮತದಾರರಿಗೆ ನೀಡಿದ ಮಾತನ್ನು ಉಳಿಸಿಕೊಳ್ಳಲು ಇನ್ನೂ ಸುಮಾರು ನಾಲ್ಕು ಮೇಲ್ಪಟ್ಟ ವರ್ಷಗಳ ಕಾಲವಿದೆ ಆದರೆ ಕಳೆದ ಮೂರು ಬಾರಿ ಗೆದ್ದ ಶಾಸಕ ಟಿ.ರಘುಮೂರ್ತಿ ಪ್ರಸ್ತುತ ವರ್ಷದ ಮೊದಲ ಚಳಿಗಾಲದ ಅಧಿವೇಶನದಲ್ಲಿ ಮತದಾರರರಿಗೆ ಕೊಟ್ಟ ಮಾತಿನಂತೆ ಆಂದ್ರದ ಗಡಿ ಭಾಗದ ಪರುಶುರಾಂಪುರ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂಬ ಕೂಗು ಸದಸನದಲ್ಲಿ ಪ್ರಜ್ವಲಿಸಿತು.
ಕಳೆದ ಸದನದಲ್ಲಿ ಕೂಡ ತಾಲೂಕು ಕೇಂದ್ರಕ್ಕೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದ ಶಾಸಕರು ಈ ಬಾರಿಯೂ ಕೂಡ ತಾಲೂಕು ಕೇಂದ್ರಕ್ಕೆ ಧ್ವನಿ ಎತ್ತುವ ಮೂಲಕ ಪರುಶುರಾಂಪುರ ತಾಲೂಕು ಕೇಂದ್ರಕ್ಕೆ ಕಂಕಣ ಬದ್ದರಾಗಿದ್ದಾರೆ ಎಂಬುದು ಮತದಾರ ಅಭಿಪ್ರಾಯವಾಗಿದೆ.
ಪರಶುರಾಂಪುರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು, ಕಳೆದ ಬಾರಿಯ ಅಧಿವೇಶನದಲ್ಲೂ ಪರಶುರಾಂಪುರವನ್ನು ತಾಲೂಕನ್ನಾಗಿ ಮಾಡುವ ಕುರಿತು ಪ್ರಸ್ತಾಪಿಸಿದ್ದೆ. ತಾಲೂಕು ಕೇಂದ್ರ ಮಾಡಲು ಅಗತ್ಯವಾದ ಮೂಲಭೂತ ಸೌಲಭ್ಯಗಳು ಇವೆ, ಇನ್ನೂ ಜನಸಂಖ್ಯೆಯೂ ಇದೆ ಈಗೇ ತಾಲೂಕು ಕೇಂದ್ರಕ್ಕೆ ಸರಕಾರದ ಯಾವೇಲ್ಲಾ ಮಾನದಂಡಗಳು ಇವೆಯೋ ಅದಕ್ಕೂ ಪರುಶುರಾಂಪುರ ಅರ್ಹತೆ ಹೊಂದಿದೆ. ಆಂದ್ರದ ಗಡಿಯನ್ನು ಹಂಚಿಕೊAಡ ಈ ಹೊಬಳಿಯು ತಾಲೂಕು ಕೇಂದ್ರವಾದರೆ ಮಾತ್ರ ಇಲ್ಲಿನ ಸಾರ್ವಜನಿಕರ ಬವಣೆ ನೀಗುವುದು ಆದಷ್ಟು ಬೇಗ ಪರಶುರಾಂಪುರವನ್ನು ತಾಲೂಕಾಗಿ ಘೋಷಿಸಿ ಎಂದು ಒತ್ತಾಯಿಸಿದ್ದಾರೆ.

ನಗರದಲ್ಲಿ ಯುಜಿಡಿಗೆ ಒತ್ತಾಯ :
ಜಿಲ್ಲೆಯಲ್ಲೆ ದೊಡ್ಡದಾದ ತಾಲೂಕು ಕೇಂದ್ರ ಚಳ್ಳಕೆರೆ, ಈ ಕೇಂದ್ರ ಭಾಗದ ನಗರಸಭೆಯಲ್ಲಿ ಅಂಕಿಅAಶದ ಪ್ರಕಾರ ಸುಮಾರು 75 ಸಾವಿರದಷ್ಟು ಜನ ಸಂಖ್ಯೆ ಹೊಂದಿದೆ, ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಹೊದಗಿಸುವ ಮೂಲಕ ಸೇವೆ ಹೊದಗಿಸುವ ಅನಿವಾರ್ಯತೆ ಇದೆ. ಆದ್ದರಿಂದ ನಗರದಲ್ಲಿ ಯುಜಿಡಿ ಅಗತ್ಯವಾಗಿ ಬೇಕಾಗಿರುವುದರಿಂದ ಅತೀ ತುರ್ತಾಗಿ ಮಾಡಬೇಕಿದೆ, ಈ ಬೇಡಿಕೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರ ಮೊದಲಬಾರಿ ಮುಖ್ಯಮಂತ್ರಿಯಾದಗಿನಿAದ ಈ ಬೇಡಿಕೆ ಹಾಗೇ ಇದೆ ಈ ಬಾರಿ ಪೂರೈಸಬೇಕು ಎಂದು ಸದನದಲ್ಲಿ ಮಂಡಿಸಿದರು.
ವಸತಿ ಯೋಜನೆ ನಿರ್ಮಾಣದ ಮೊತ್ತ ಹೆಚ್ಚಳ :
ವಸತಿ ಮನೆಗಳ ನಿರ್ಮಾಣಕ್ಕೆ ಹೆಚ್ಚು ಮೊತ್ತ ನೀಡುವಂತೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕ ಟಿ.ರಘುಮೂರ್ತಿ ಬಯಲು ಸೀಮೆಯಾದ ಚಳ್ಳಕೆರೆ ಪ್ರದೇಶದಲ್ಲಿ ಕಳೆದ ಬಾರಿ ಅಲೆಮಾರಿ ಹರೆಅಲೆಮಾರಿ ಜನಾಂಗಕ್ಕೆ ಆಶ್ರಯ ಮನೆಗಳ ನಿರ್ಮಾಣಕ್ಕೆ ನೀಡಿದ 1.ಲಕ್ಷದ 20ಸಾವಿರ ಯಾವುದಕ್ಕೂ ಸಾಲುವುದಿಲ್ಲ ಆದರೆ ಆಶ್ರಯ ಮನೆಗಳ ನಿರ್ಮಾಣದ ವೆಚ್ಚವನ್ನು ಹೆಚ್ಚಿಸಬೇಕು, ಹಾಗೆಯೇ ನಮ್ಮ ಕ್ಷೇತ್ರದಲ್ಲಿ 3,500 ಮನೆಗಳು ಮಂಜೂರು ಹಾಗಿದ್ದವು ಆದರೆ ಕಟ್ಟಡದ ನಿರ್ಮಾಣದ ವೆಚ್ಚ ಕಡಿಮೆಯಾದರಿಂದ ಯಾವುದಕ್ಕೂ ಸಾಲದು ಎಂದು ಅರ್ಧದಷ್ಟು ಮನೆಗಳ ಕಾಮಗಾರಿ ಪೂರ್ಣಗೊಂಡಿಲ್ಲ ಆದ್ದರಿಂದ ಆಶ್ರಯ ಮನೆಗಳ ನಿರ್ಮಾಣ ವೆಚ್ಚವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಹೇಳಿಕೆ :
ಚಳ್ಳಕೆರೆ ಕ್ಷೇತ್ರದಲ್ಲಿ ರೈತರಿಗೆ ನಷ್ಟವಾದ ಬೆಳೆವಿಮೆ ಹಾಗೂ ಬೆಳೆ ಪರಿಹಾರದ ಅವ್ಯವಾರದ ಬಗ್ಗೆ ಸಮಗ್ರ ತನಿಖೆಗೆ ಸಿಓಡಿಗೆ ಒತ್ತಾಯಿಸಿದೆ, ಇನ್ನೂ ಪರುಶುರಾಂಪುರ ತಾಲೂಕು ಕೇಂದ್ರಕ್ಕೆ ಹಾಗೂ ಚಳ್ಳಕೆರೆ ನಗರಸಭೆ ಯುಜಿಡಿಗೆ ಒತ್ತಾಯಿಸಿಲಾಗಿದೆ ನಂತರ ಆಶ್ರಯ ಮನೆಗಳ ನಿರ್ಮಾಣದ ವೆಚ್ಚವನ್ನು ಹೆಚ್ಚಿಸಲು ಸದನದಲ್ಲಿ ಧ್ವನಿ ಎತ್ತಲಾಗಿದೆ ನಮ್ಮ ಪಕ್ಷ ನುಡಿದಂತೆ ನಡೆಯುವ ಪಕ್ಷ ಒಟ್ಟಾರೆ ಚಳ್ಳಕೆರೆ ತಾಲೂಕನ್ನು ಸ್ಮಾಟ್ ಸಿಟಿ ಮಾಡುವ ಉದ್ದೇಶ ಹೊಂದಿದ್ದೆನೆ.
-ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ

Namma Challakere Local News
error: Content is protected !!