ಶ್ರೀ ಗುರುತಿರುದ್ರಸ್ವಾಮಿಯ ಸಣ್ಣ ಕಾರ್ತಿಕೋತ್ಸವ ಸಂಭ್ರಮದಿಂದ ಶುಕ್ರವಾರ ಅದ್ದೂರಿಯಾಗಿ ತಿರುಗಿತು.
ನಾಯಕನಹಟ್ಟಿ:: ಶ್ರೀ ಗುರುತಿಸಿರುದ್ರ ಸ್ವಾಮಿಯ ಸಣ್ಣ ಕಾರ್ತಿಕೋತ್ಸವ ಶುಕ್ರವಾರ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಸುಮಾರು 30 ಅಡಿ ಮರದಿಂದ ನಿರ್ಮಿಸಿದ ರಥದ ಮೇಲ್ಭಾಗದಲ್ಲಿ ಕಮಾನಿನಾಕಾರದ ರಥ ಪ್ರಮುಖ ಆಕರ್ಷಣೆಯಾಗಿತ್ತು.
ನಾನಾ ಬಣ್ಣದ ಬಟ್ಟೆ ಹಾಗೂ ಬಾವುಟಗಳಿಂದ ರಥವನ್ನು ಅಲಂಕರಿಸಲಾಯಿತು.
ಉತ್ಸವ ಮೂರ್ತಿಯನ್ನು ದೇವಾಲಯದಿಂದ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು ಮಹಾಮಂಗಳಾರತಿ ನಂತರ ಉತ್ಸವ ಆರಂಭಗೊಂಡಿತು. ಚಿನ್ನದ ಕಿರೀಟ ಚಿನ್ನದ ಆಭರಣಗಳು ಮಲ್ಲಿಗೆ ಕನಕಾಂಬರ ಸೇವಂತಿ ಚೆಂಡು ಹೂವು ಸೇರಿದಂತೆ ನಾನ ಹೂಗಳಿಂದ ಉತ್ಸವ ಮೂರ್ತಿಯ ಅಲಂಕರಿಸಲಾಗಿತ್ತು.
ರಥಕ್ಕೆ ಅಳವಡಿಸಿದ್ದ ಬೃಹತ್ ಹೂವಿನ ಹಾರಗಳು ಗಮನ ಸೆಳೆದವು ಉತ್ಸವ ಬೀದಿಯಲ್ಲಿ ರಥ ಚಲಿಸುವಾಗ ಮಹಿಳೆಯರು ದಾರಿಗೆ ನೀರು ಹಾಕಿ ಸ್ವಚ್ಛಗೊಳಿಸಿ ಕಾಯಿ ಹಣ್ಣು ಹರಕೆ ಸಮರ್ಪಿಸಿದರು.
ಭಕ್ತರು ರಥ ಹೇಳಿದು ಹರಕೆ ಸಲ್ಲಿಸಿದರು ದೇವಾಲಯದ ಅಲಂಕೃತ ಪಟ್ಟದ ಬಸವಣ್ಣನನ್ನು ಬೆಳ್ಳಿಯ ಕಾಲು ಕಡಗ ಅಣೆಪಟ್ಟಿಗಳಿಂದ ಅಲಂಕರಿಸಲಾಗಿತ್ತು ಸಾಂಪ್ರದಾಯಿಕ ಮಂಗಳವಾದ್ಯಗಳು ಉತ್ಸವದಲ್ಲಿದ್ದವು.
ಇದೇ ಸಂದರ್ಭದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ, ಎಸ್ ಸತೀಶ್, ಎಂ ವೈ ಟಿ ಸ್ವಾಮಿ, ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷ ಎನ್ ಮಹಾಂತಣ್ಣ, ಮುತ್ತು ಪಟ್ಟಣದ ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಪಟ್ಟಣದ ದಳವಾಯಿ ರುದ್ರಮುನಿ, ಸುನಿಲ್ ಕುಮಾರ್, ಮತ್ತು ಪಟ್ಟಣದ ಸಮಸ್ತ ಭಕ್ತಾದಿಗಳು ನಾಯಕನಹಟ್ಟಿ ಹೋಬಳಿಯ ವಿವಿಧ ಹಳ್ಳಿಗಳ ಗ್ರಾಮಸ್ಥರು ಭಕ್ತಾದಿಗಳು ಉಪಸ್ಥಿತರಿದ್ದರು