ಚಳ್ಳಕೆರೆ : ನಗರ ಬೆಳೆದಂತೆಲ್ಲ ಅವಶ್ಯವಾದ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ದಿ ಕಾರ್ಯಗಳು ಚುರುಕುಗೊಂಡಿವೆ ಆದರೆ ಆದ್ಯಾಕೋ ಚಳ್ಳಕೆರೆ ನಗರದಲ್ಲಿ ಕಳೆದ ಹಲವು ತಿಂಗಳಿನಿAದ ನೆನೆಗುದಿಗೆ ಬಿದ್ದ ರಸ್ತೆಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಇದರಿಂದ ರಸ್ತೆ ಪಕ್ಕದ ಅಂಗಡಿ ಮುಗ್ಗಟ್ಟುಗಳಿಗೂ ಅಲ್ಲದೆ ಸಾರ್ವಜನಿಕರಿಗೂ ಇದರಿಂದ ಕಿರಿಕಿರಿ ಉಂಟಾಗಿದೆ.
ಇನ್ನೂ ನಗರದಲ್ಲಿ ಬೆಂಗಳೂರು ಹಾಗೂ ಹೊಸಪೇಟೆಯ ಮಾರ್ಗದ ರಾಜ್ಯ ಹೆದ್ದಾರಿ ಹಾದು ಹೊಗಿರುವುದರಿಂದ ವಾಹನಗಳ ದಟ್ಟನೆ ಹೆಚ್ಚಾಗಿದೆ ಆದರೆ ರಸ್ತೆ ಅಗಲೀಕರಣ ನೆಪದಲ್ಲಿ ರಸ್ತೆ ಡಿವೈಂಡರ್ ಹಾಗೂ ಚರಂಡಿ ಕಿತ್ತು ಹಲವು ತಿಂಗಳುಗಳೆ ಕಳೆದರು, ಬದಲಿ ಮಾರ್ಗದ ಸರಿಯಾದ ಮಾರ್ಗ ರೂಪಿಸದೆ ಟೆಂಡರ್ ಪ್ರಕ್ರಿಯೆ ಪಡೆದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವೈಪಲ್ಯದಿಂದ ಸರಿಯಾದ ರೀತಿಯಲ್ಲಿ ಚರಂಡಿ ಇಲ್ಲದೆ ಕೊಳಚೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ.
ಇನ್ನೂ ತಾಲೂಕಿನ ಪಶು ಆಸ್ವತ್ರೆಗೆ ತೆರಳಲು ಹರಸಾಹಸ ಪಡುವಂತಾಗಿದೆ ಇದರಿಂದ ಹಳ್ಳಿಗಾಡಿನಿಂದ ಬಂದ ರೈತರು ಪ್ರಾಣಿಗಳನ್ನು ನಡು ರಸ್ತೆಯಲ್ಲಿ ನಿಲ್ಲಿಸುವಂತಾಗಿದೆ ಇನ್ನೂ ಪಶು ಚಿಕಿತ್ಸಾಲಯ ಅಂಬ್ಯೂಲೆನ್ಸ್ ವಾಹನ ಹೋಗಲು ಅರ್ಧಬಂರ್ಧ ಚರಂಡಿ ಕಾಮಗಾರಿಯಿಂದ ಆಸ್ವತ್ರೆಗೆ ಹೋಗದೆ ನಡು ರಸ್ತೆಯಲ್ಲಿ ನಿಲ್ಲುವಂತಾಗಿದೆ.
ಹೇಳಿಕೆ :
ಸರ್ ಕಳೆದ ಎಂಟು ತಿಂಗಳಿAದ ರಸ್ತೆ ಅಗಲೀಕರಣ ನೆಪದಲ್ಲಿ ಇದ್ದ ಚರಂಡಿ ಕಿತ್ತು ಮತ್ತೆ ಪರಿರ್ಯಾಯ ಮಾರ್ಗ ಮಾಡದೆ ಕಾಮಗಾರಿ ಹೆಸರಲ್ಲಿ ಕುಂಠಿತಗೊAಡಿದೆ. ಅದಷ್ಟು ಬೇಗ ಸಂಬAಧಪಟ್ಟ ಇಲಾಖೆ ಕಾಮಗಾರಿ ಮುಗಿಸಿ ಸೊಳ್ಳೆಗಳಿಂದ ಮುಕ್ತಿ ಕಾಣಿಸಿ ಚರಂಡಿಗೆ ಡೆಕ್ ನಿರ್ಮಾಣ ಮಾಡಿಬೇಕು.. ವಾಹನ ಸಾವರಾರಿಗೆ ಅನೂಕೂಲ ಮಾಡಬೇಕು.–ಸ್ಥಳೀಯ ನಿವಾಸಿ ಮಂಜುನಾಥ್.

Namma Challakere Local News

You missed

error: Content is protected !!