ಚಳ್ಳಕೆರೆ : ಕಳೆದ ಹಲವು ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ತೆರವಾದ ಸ್ಥಾನಗಳು ನಿಯಮವಾಳಿಗಳ ಪ್ರಕಾರ ಆಯ್ಕೆ ಪ್ರಕ್ರಿಯೆ ನಡೆಸಿ ಇಂದು ಆದೇಶ ಪ್ರತಿ ನೀಡಿದೆ ಎಂದು ಸಿಡಿಪಿಓ ಹರಿಪ್ರಸಾದ್ ಹೇಳಿದರು.
ಅವರು ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಯೋಜನಾಧಿಕಾರಗಳ ಕಛೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಆದೇಶ ಪ್ರತಿ ನೀಡಿ ಮಾತನಾಡಿದರು. ಇಂದು ಸುಮಾರು 64 ಸಹಾಯಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು 41 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಹಾಗೂ ತಾಲೂಕಿನಲ್ಲಿ ಒಟ್ಟಾರೆ 536 ಅಂಗನವಾಡಿ ಕೇಂದ್ರಗಳು ಇವೆ, ಅದರಲ್ಲಿ 513 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 506 ಸಹಾಯಕಿಯರು ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 20 ಸಹಾಯಕಿಯರು ಹಾಗೂ 17 ಕಾರ್ಯಕರ್ತೆಯರ ಸ್ಥಾನಗಳು ಖಾಲಿ ಹುದ್ದೆಯಲ್ಲಿವೆ, ತಾಲೂಕಿನಲ್ಲಿ ಸು.56 ಅಂಗನವಾಡಿ ಕಟ್ಟಡಗಳು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

About The Author

Namma Challakere Local News
error: Content is protected !!