ಪರಶುರಾಮಪುರ
ಸಿದ್ದೇಶ್ವರನದುರ್ಗ ಗ್ರಾಮದಲ್ಲಿ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ, ಸ್ನೇಹಸಮ್ಮಿಲನ ಕಾರ್ಯಕ್ರಮ
ನಮ್ಮ ಭಾರತೀಯ ಪರಂಪರೆಯಲ್ಲಿ ತಂದೆ ತಾಯಿ ಗುರುವಿಗೆ ಅತ್ಯಂತ ಪವಿತ್ರ ಸ್ಥಾನವಿದೆ ಎಂದು ಡಯಟ್ ನಿವೃತ್ತ ಉಪನ್ಯಾಸಕ ಆರ್ ಮುರುಗೇಂದ್ರಪ್ಪ ಹೇಳಿದರು
ಸಮೀಪದ ಸಿದ್ದೇಶ್ವರನದುರ್ಗ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಗ್ರಾಮದ 2007-08 ನೇ ಸಾಲಿನ ಹತ್ತನೇ ತರಗತಿಯ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ತಮ್ಮ ಗುರುಗಳಿಗೆ ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು
ಇಂದಿನ ಅಧುನಿಕ ಕಾಲಘಟ್ಟದಲ್ಲಿ ಸಮೂಹ ಮಾಧ್ಯಮಗಳು ಮತ್ತು ತಂತ್ರಜ್ಞಾನಾಧಾರಿತ ಶಿಕ್ಷಣ ವ್ಯವಸ್ಥೆಯಲ್ಲಿ ಯುವಕರು ತಮಗೆ ಚಿಕ್ಕಂದಿನಲ್ಲಿ ಪಾಠ ಹೇಳಿಕೊಟ್ಟ ಗುರುಗಳನ್ನು ಗುರ್ತಿಸಿ ಅವರೆಲ್ಲರನ್ನೂ ತಾವು ಓದಿದ ಶಾಲೆಗೆ ಕರೆಸಿಕೊಂಡು ಗುರುವಂದನೆ ಸಲ್ಲಿಸುತ್ತಿರುವುದು ಇಂದಿನ ಯುವಕರಿಗೆ ಮಾದರಿಯಾಗಿದೆ ಎಂದರು
ವಿದ್ಯಾರ್ಥಿಗಳು ಶಿಕ್ಷಕರು ಮತ್ತು ತನ್ನ ತಂದೆ ತಾಯಿಯರ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಿದರೆ ನಿರೀಕ್ಷಿತ ಗುರಿ ತಲುಪಲು ಸಾಧ್ಯ ಎಂದರು
ಉಪ ಪ್ರಾಚಾರ್ಯ ಎಚ್ ನಾಗೇಂದ್ರಪ್ಪ ಮಾತನಾಡಿ ಪ್ರಾಥಮಿಕ ಹಾಗೂ ಪ್ರೌಢಹಂತದಲ್ಲಿ ಪಾಠ ಹೇಳಿಕೊಟ್ಟ ಗುರುಗಳನ್ನು ಶಿಷ್ಯರು ಮರೆಯಲು ಸಾಧ್ಯವಿಲ್ಲ ಹಲವು ವರ್ಷಗಳ ನಂತರ ಗುರು ಶಿಷ್ಯರು ಒಂದೆಡೆ ಸೇರಿಕೊಂಡು ಸಮಾಲೋಚಿಸುತ್ತಿರುವುದು ಉತ್ತಮವಾದ ಸಂಗತಿ ಎಂದರು
ಉಪನ್ಯಾಸಕ ಎಸ್ ಆರ್ ನಯನಯಜಮೂರ್ತಿ ಮಾತನಾಡಿ ಆಂದ್ರ ಗಡಿಯ ಹಳ್ಳಿಗಳ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಹಲವು ಕ್ಷೇತ್ರಗಳಲ್ಲಿ ಸಾಧನೆಗೈದು ಗುರುಗಳಿಗೆ ಉತ್ತಮ ಹೆಸರು ತಂದಿದ್ದಾರೆ ಇಂದಿನ ವಿದ್ಯಾರ್ಥಿಗಳು ಸಾಂಪ್ರದಾಯಕ ಶಿಕ್ಷಣ ಪಧ್ದತಿಯನ್ನು ತೊರೆದು ತಂತ್ರಜ್ಞಾನಾಧಾರಿತ ಶಿಕ್ಷಣವನ್ನು ಇಷ್ಟಪಡುತ್ತಿರುವ ಈ ಹೊತ್ತಿನಲ್ಲಿ ಶಿಕ್ಷಕರೂ ಸಹ ಸಾಮಾಜಿಕ ಬದಲಾವಣೆಗೆ ತಕ್ಕಂತೆ ಬದಲಾಗಿ ವೃತ್ತಿ ತರಬೇತಿ ಪಡೆದು ತಮ್ಮ ವೃತ್ತಿ ದಕ್ಷತೆಯನ್ನು ಹೆಚ್ಚಿಸಿಕೊಳ್ಳುವ ಅನಿವರ‍್ಯತೆ ಇದೆ ಎಂದರು
ಗುರುವAದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಆರ್ ಮಂಜುಳಾ ಮಾತನಾಡಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಜನಪ್ರತಿನಿಧಿಗಳು, ದಾನಿಗಳು, ಶಾಲಾ ಸಮಿತಿಯವರು ನಿಯಮಿತವಾಗಿ ಸಭೆ ನಡೆಸಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಅರಿತು ಅವುಗಳನ್ನು ಪೂರೈಸಿದರೆ ಹಳ್ಳಿ ಮಕ್ಕಳು ಉತ್ತಮ ಸಾಧನೆಗೈದು ಹುಟ್ಟಿದ ಊರಿಗೆ ಗುರು ಹಿರಿಯರಿಗೆ ಕೀರ್ತಿ ತರುತ್ತಾರೆ ಎಂದರು
ಇದೇ ವೇಳೆ ಹಳೇ ವಿದ್ಯಾರ್ಥಿಗಳಾದ ಪ್ರತಾಪ್, ತಾರೇಶ, ದುಶ್ಯಂತ್, ರಾಜು, ಮಂಜುಳಾ, ಮಹಂತೇಶ ವೈ, ಲಕ್ಷಿö್ಮÃ, ಅನಿಲ್ ವಿಶ್ವ ತಮ್ಮ ಬಾಲ್ಯದಲ್ಲಿನ ಶಿಕ್ಷಣ ಪಧ್ದತಿ, ಗುರುಗಳ ಕಲಿಸಿದ ರೀತಿ ನೀತಿಯನ್ನು ಹೇಳಿಕೊಂಡು ಹಳೇ ನೆನಪುಗಳನ್ನು ಮೆಲುಕು ಹಾಕಿದರು
ಸಂದರ್ಭದಲ್ಲಿ ಗುರುಗಳಾದ ಆರ್ ಮಂಜುಳಾ, ನಯನಜಮೂರ್ತಿ, ಆರ್ ಮುರುಗೇಂದ್ರಪ್ಪ, ಆರ್ ಸುರೇಶ, ತಾರಾಕುಮಾರಿ, ವಿ ವಿಜಯಲಕ್ಷಿö್ಮÃ, ಲಕ್ಷಿö್ಮÃ, ಗ್ರಾಮದ ಹಳೇ ವಿದ್ಯಾರ್ಥಿಗಳಾದ ಪ್ರತಾಪ್, ಮಧುಸೂಧನ, ವಿಶ್ವ, ಮಂಜುಳಾ, ಮಹಂತೇಶ ವೈ, ಲಕ್ಷಿö್ಮÃ, ಶ್ರೀನಿವಾಸ, ತಾರೇಶ, ರಾಜು, ಗ್ರಾಮಸ್ಥರಾದ ಚಿಕ್ಕಣ್ಣ, ರಾಜಣ್ಣ, ಮಂಜುನಾಥ, ರಾಘು ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು
(ಪೋಟೋ ಪಿಆರ್‌ಪುರ ಗುರುವಂದನೆ 11)
ಪರಶುರಾಮಪುರ ಸಮೀಪದ ಸಿದ್ದೇಶ್ವರನದುರ್ಗ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಗ್ರಾಮದ 2007-08 ನೇ ಸಾಲಿನ ಹತ್ತನೇ ತರಗತಿಯ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ತಮ್ಮ ಗುರುಗಳಿಗೆ ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಗೌರವಿಸಿದರು

Namma Challakere Local News

You missed

error: Content is protected !!