ಚಳ್ಳಕೆರೆ : ಜಿಲ್ಲೆಯಲ್ಲೆ ದೊಡ್ಡದಾದ ಚಳ್ಳಕೆರೆ ತಾಲೂಕು ಪಟ್ಟಣ ಪಂಚಾಯಿತಿAದ ನಗರಸಭೆಗೆ ಮೇಲ್ದೆರ್ಜೆಗೆರಿ ಹಲವು ವರ್ಷಗಳೆ ಕಳೆದರೂ ಮೂಲಭೂತ ಸೌಲಭ್ಯದಿಂದ ಮಾತ್ರ ವಂಚಿತವಾಗಿದೆ ಎಂದು ಸಾರ್ವಜನಿಕರು ಮಮ್ಮುಲು ಮರುಗುತ್ತಿದ್ದಾರೆ.
ಹೌದು ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯ ವಾರ್ಡ್ 12ರ ಬನಶಂಕರಿ ರಸ್ತೆ ಹಾಳಾಗಿ ಸುಮಾರು ನಾಲ್ಕು ವರ್ಷಗಳೆ ಕಳೆದವು, ಆದರೆ ದುರಸ್ಥಿ ಪಡಿಸಬೇಕಾದ ನಗರಸಭೆ ನಿಲ್ಯಕ್ಷö್ಯವಹಿಸಿದೆ ಎಂದು ಸಿಟ್ಟಿಗೆದ್ದ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿ ರಸ್ತೆಗೆ ಮಣ್ಣಿನ ಗುಡ್ಡೆ ಹಾಕಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನೂ ಈದೇ ದಾರಿಯಲ್ಲಿ ದಿನನಿತ್ಯ ಸಾವಿರಾರು ಜನರು ಹೋಡಾಡುವ ಪ್ರಮುಖ ರಸ್ತೆ, ಶಾಲಾ ಮಕ್ಕಳಿಂದ ವಯೋವೃದ್ದರವರೆಗೂ ಸಂಚರಿಸುವ ಮಹಾರಸ್ತೆ ಇದಾಗಿದೆ. ಆದರೆ ಇದರ ಬಗ್ಗೆ ನಿಲ್ಯರ್ಕ್ಷವೇಕೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಇಲ್ಲಿನ ಸುತ್ತಲಿನ ಅಂಗಡಿ ಮುಗ್ಗಟ್ಟುಗಳು ದೂಳಿನಿಂದ ಕೂಡಿದ್ದು ಮಾಲೀಕರು ಕೆಮ್ಮು, ನೆಗಡಿ ಅಸ್ತಮದಂತಹ ಖಾಯಿಲೆಗೆ ಬಳಲುವಂತಾಗಿದೆ, ದೂಳುಮುಕ್ತ ಹಾಗೂ ಸ್ವಚ್ಚನಗರಕ್ಕೆ ನಾಂದಿ ಹಾಡಲು ಹಲವು ಬಾರಿ ನಗರಸಭೆ ಪೌರಾಯುಕ್ತರಿಗೆ, ವಾರ್ಡ್ಸದಸ್ಯರಿಗೆ, ತಹಶೀಲ್ದಾರ್‌ಗೆ ಹಾಗೂ ಪೊಲೀಸ್ ಇಲಾಖೆಗೆ ಮನವಿ ನೀಡಿದ್ದೆವೆ ಆದರೆ ಇದರ ಬಗ್ಗೆ ಯಾರೂ ಕೂಡ ಚಾಕರ ಎತ್ತುತ್ತಿಲ್ಲ, ಇದರಿಂದ ಈ ರಸ್ತೆ ಬಂದ್ ಮಾಡಿದ್ದೆವೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು,.
ಇನ್ನೂ ಸ್ಥಳಿಯ ನಿವಾಸಿ ಶ್ರೀಪಾದ ಎಂಬುವವರು ಮಾಧ್ಯಮದೊಂದಿಗೆ ಮಾತನಾಡಿ, ಸ್ಥಳೀಯ ಶಾಸಕರು ಕೋಟಿಗಟ್ಟಲೆ ಅನುದಾನ ತಂದಿರುವ ನಿದರ್ಶನಗಳು ಇವೆ, ಆದರೆ ನಗರದ ವಾರ್ಡ್ಗಳಲ್ಲಿ ರಸ್ತೆ ಸಮಸ್ಯೆ ಹಾಗೆ ಇವೆ, ಇದು ಅಧಿಕಾರಿಗಳ ವೈಪಲ್ಯವೋ… ನಿಲ್ಯರ್ಕ್ಷವೇ.. ಇದನ್ನು ಸ್ಥಳೀಯ ಶಾಸಕರು ತಮ್ಮ ಅಭಿವೃದ್ದಿ ಹೆಸರಿಗೆ ಕಳಂಕ ಅಂಟಿಸಿಕೊಳ್ಳದೆ ನಿರ್ಲ್ಯಕ್ಷ ದೋರಣೆ ತೋರುವ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಬೇಕು ಎನ್ನುತ್ತಾರೆ.

ಇನ್ನೂ ಅಂಗಡಿ ಮಾಲೀಕ ವಿರೇಶ್ ಮಾತನಾಡಿ, ಯಾರನ್ನೆ ಕೇಳಿದರು ನಗರಸಭೆಯಲ್ಲಿ ಹಣವಿಲ್ಲ ಎಲ್ಲಿಂದ ರಸ್ತೆ ಮಾಡಿಸೊದು ಎನ್ನುತ್ತಾರೆ, ಅಧ್ಯಕ್ಷರು ಇಲ್ಲ, ಅನುದಾನ ಇಲ್ಲ, ಎಂದು ಅಧಿಕಾರಿಗಳು ನುಣಿಚಿಕೊಳ್ಳುತ್ತಾರೆ, ಆಡಳಿತಾಧಿಕಾರಿಗಳು ಹಾಗಿರುವ ಜಿಲ್ಲಾಧಿಕಾರಿಗಳೂ ಒಮ್ಮೆಯಾದರೂ ಇಂತಹ ಸಾರ್ವಜನಿಕರ ರಸ್ತೆಗೆ ದಾವಿಸಿ ಬಡಜನರ ಸಂಕಷ್ಟಗಳನ್ನು ಆಲಿಸಿ ಸ್ಥಳಿಯ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಕ್ತ ನಿದೇರ್ಶನ ನೀಡಬೇಕು ಒಬ್ಬರ ಮೇಲೆ ಒಬ್ಬರು ಸಬೂಬು ಹೇಳಿಕೊಂಡರೆ ನಮ್ಮ ಪಾಡು ಏನು ಎಂದು ಅಧಿಕಾರಿಗಳ ವಿರುದ್ದ÷ ಕಿಡಿಕಾರಿದರು.

ಪೋಟೋ ಚಳ್ಳಕೆರೆ ನಗರದ ಬನಶಂಕರಿ ರಸ್ತೆ ಮಧ್ಯೆದಲ್ಲಿ ಮಣ್ಣಿನ ಗುಡ್ಡೆ ಹಾಕಿ ಪ್ರತಿಭಟಿಸುತ್ತಿರುವ ಸಾರ್ವಜನಿಕರು.

About The Author

Namma Challakere Local News
error: Content is protected !!