ದಿವಂಗತ ನಟಿ ಲೀಲಾವತಿಯ ಭಾವಪೂರ್ಣ ಶ್ರದ್ಧಾಂಜಲಿ
ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟದ ಸಂಘದ ಕಚೇರಿಯಲ್ಲಿ
ಹಿರಿಯ ನಟಿ ಸುಮಾರು 600ಕ್ಕೂ ಹೆಚ್ಚಿನ ಕನ್ನಡ ಚಲನಚಿತ್ರಗಳಲ್ಲಿ ನಟಿಸಿರುವಂತ ಮೇರು ನಟಿ
ಚಳ್ಳಕೆರೆ : ನಗರದ ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟದ ಸಂಘದ ಕಛೇರಿಯಲ್ಲಿ ಹಿರಿಯ ಮೇರು ನಟಿ ಲೀಲಾವತಿ ರವರ ಅಸ್ತಗತ ಈಡೀ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಅವರ ಭಾವಪೂರ್ಣ ಶ್ರದ್ಧಾಂಜಲಿಯ ಅಂಗವಾಗಿ ಇಂದು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಹಿರಿಯ ನಟಿಗೆ ಗೌರವ ಸಲ್ಲಿಸೊಣ ಎಂದು ರಾಜ್ಯಧ್ಯಕ್ಷರಾದ ಕೆ ಶಿವಕುಮಾರ್ ಹೇಳಿದರು.
ಇನ್ನೂ ವಕೀಲರಾದ ಪಾಪಣ್ಣ ಮಾತನಾಡಿ, ಕನ್ನಡ ಚಲನಚಿತ್ರಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆಯಲ್ಲಿಯೂ ಸಹ ನಟಿಸಿರುವಂತ ಪೋಷಕ ಪಾತ್ರದಲ್ಲಿ ಹೀರೋಯಿನ್ ಆಗಿ ಸಹ ಡಾಕ್ಟರ್ ರಾಜಕುಮಾರ್ ಅವರ ಜೊತೆಯಲ್ಲಿ ಸುಮಾರು 46 ಚಲನಚಿತ್ರಗಳಲ್ಲಿ ನಟಿಸಿರುವಂತ ನಟಿ ಲೀಲಾವತಿಯವರು ನಮ್ಮನ್ನು ಆಗಲಿ ಇಹಲೋಕಕ್ಕೆ ಹೋಗಿದ್ದಾರೆ ಎಂದು ಹೇಳಿದರು
ಈ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಮಾಧ್ಯಮ ಮಹಾವಕ್ಕೂಟದ ಡಿ ಈಶ್ವರಪ್ಪ, ಪತ್ರಕರ್ತರಾದ ಮೌನೇಶ ಆಚಾರ್ಯ, ಸುರೇಶ ಬೆಳಗೆರೆ, ಮಂಜುನಾಥ್, ಹಾಗೂ ಕರ್ನಾಟಕ ಯುವ ರಕ್ಷಣೆ ವೇದಿಕೆ ರಾಜ್ಯ ಅಧ್ಯಕ್ಷರಾದ ಆದರ್ಶ, ಶಿಕ್ಷಕರು ಇನ್ನಿತರ ಈ ಸಭೆಯಲ್ಲಿ ಭಾಗವಹಿಸಿದ್ದರು