ಚಳ್ಳಕೆರೆ : ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೇ ಹಾಗೂ ಹತ್ಯೆ ನೆಡೆಸುತ್ತಿರುವುದು ವಕೀಲ ವೃತ್ತಿನಡೆಸುವ ವಕೀಲ ವೃಂದಕ್ಕೆ ಆತಂಕದ ವಾತಾವರಣ ಸೃಷ್ಟಿ ಮಾಡುತ್ತಿದೆ ಎಂದು ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆಎಂ.ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ನಗರದ ನ್ಯಾಯಾಲಯ ಆವರಣದಿಂದ ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು
ಇತ್ತೀಚಿನ ದಿನಗಳಲ್ಲಿ ಸಾಮಾಜಿಕವಾಗಿ ವಕೀಲ ವೃತ್ತಿ ಮಾಡುವುದು ಆತಂಕ ಸೃಷ್ಟಿ ಮಾಡುತ್ತಿದೆ, ಕಳೆದ ಒಂದು ವಾದರಲ್ಲಿ ಎರಡು ಘಟನೆಗಳು ನಡೆಸಿರುವುದು ಆತಂಕದ ವಾತವಾರಣ ಸೃಷ್ಠಿದೆ, ಗುಲ್ಬರ್ಗದ ವಕೀಲರಾದ ಈರಣ್ಣಗೌಡ ಮಾಳಿ ಪಾಟೀಲ್ ಇವರನ್ನು ಬರ್ಬರವಾಗಿ ಕೊಲೆ ಮಾಡಿರುವುದು ವಕೀಲ ವೃತ್ತಿಯನ್ನು ಬೆಚ್ಚಿಬಿಳಿಸುವಂತೆ ಮಾಡಿದೆ.
ಇಂತಹ ಘಟನೆಗಳಿಂದ ವಕೀಲರುಗಳಿಗೆ ರಕ್ಷಣೆ ನೀಡುವ ಕುರಿತು ವಕೀಲ ರಕ್ಷಣಾ ಕಾಯಿದೆ ಜಾರಿಗೆ ತರುವಂತೆ ಮಾರ್ಗ ಸೂಚಿಗಳನ್ನು ರಚಿಸುವುದರ ಮೂಲಕ ವಕೀಲರಗಳಿಗೆ ರಕ್ಷಣೆ ನೀಡಬೇಕೆಂದು ಮತ್ತು ಕೃತ್ಯ ನಡೆಸಿದ ಆರೋಪಿತರನ್ನು ಶೀಘ್ರವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ತಾಲೂಕು ವಕೀಲರ ಸಂಘದಿAದ ಮನವಿ ಪತ್ರ ಸಲ್ಲಿಸಿದರು.
ಹೇಳಿಕೆ :
ಕಳೆದ ಒಂದು ವಾರದಲ್ಲೇ ರಾಜ್ಯದಲ್ಲಿ ವಕೀಲರ ಮೇಲೆ ಹಲ್ಲೆ ಹಾಗು ಹತ್ಯೆ ಮಾಡಿರುವುದು ವಕೀಲ ವೃತ್ತಿಯನ್ನು ಬೆಚ್ಚಿಬಿಳಿಸಿದೆ, ಇದರಿಂದ ಕೇವಲ ಮನವಿಪತ್ರ ಸ್ವೀಕರಿಸಿ ರಾಜ್ಯ ಸರ್ಕಾರ ಸುಮ್ಮನಾಗದೆ ವಕೀಲ ವೃತ್ತಿಗೆ ಕಾನೂನು ರೂಪಿಸಬೇಕು, ಪ್ರಸ್ತುತ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ವಕೀಲ ವೃತ್ತಿಗೆ ಸೂಕ್ತ ಕಾನೂನನ್ನು ರೂಪಿಸಲು ರಾಜ್ಯ ಸರ್ಕಾರ ಗಂಬೀರವಾಗಿ ಚರ್ಚೆಯಾಗಬೇಕು.—ಕೆಎಂ.ನಾಗರಾಜ ವಕೀಲರ ಸಂಘದ ತಾಲೂಕು ಅಧ್ಯಕ್ಷ
ಇದೇ ಸಂದರ್ಭದಲ್ಲಿ ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆಎಂ ನಾಗರಾಜ್, ಉಪಾಧ್ಯಕ್ಷ ಬಿ.ಪಾಲಯ್ಯ, ಎಂ.ಸಿದ್ದರಾಜು, ರುದ್ರಯ್ಯ ರಾಮಕೃಷ್ಣ, ಎನ್.ಬೀರಪ್ಪ, ಹನುಮಂತರಾಯ, ಬೋರಯ್ಯಡಿ, ದೊರೆ ನಾಗರಾಜ್, ಆರ್‌ಟಿ.ಸ್ವಾಮಿ, ಜೆ.ಶಿವಪ್ಪ, ಸುಮಲತಾ, ಬೋರನಾಯಕ, ಪಾಪಣ್ಣ, ಕುಮಾರ್ ಜೆ, ಕುಬೇಂದ್ರಪ್ಪ ಇತರರು ಹಾಜರಿದ್ದರು