ಚಳ್ಳಕೆರೆ : ನಮ್ಮ ಕಾಡುಗೊಲ್ಲರ ನ್ಯಾಯಯುತ ಬೇಡಿಕೆ ಕಾಡು ಗೊಲ್ಲರ ಪ್ರಮಾಣ ಪತ್ರಕ್ಕೆ ಕಳೆದ ಹಲವು ದಿನಗಳಿಂದ ಹೋರಾಟ ಮಾಡುತ್ತಾ ಬಂದಿದೆವೆ ಆದರೆ ಅಧಿಕಾರಿಗಳು ಪ್ರಮಾಣಪತ್ರ ನೀಡುತ್ತಿಲ್ಲ ಎಂದು ಕಾಡು ಗೊಲ್ಲರ ಸಮುದಾಯದ ಹಲವು ಮುಖಂಡರು ತಹಶೀಲ್ದಾರ್ ಕಾರನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ,
ನಗರದ ಡಾ.ಬಿಆರ್.ಅಂಬೇಡ್ಕರ್ ವೃತ್ತದ ಸಮೀಪದ ತಾಲೂಕು ಕಛೇರಿ ಬಳಿಯಲ್ಲಿ ತಹಶೀಲ್ದಾರ್ ರವರು ಅನ್ಯ ಕಾರ್ಯನಿಮಿತ್ತ ಹೊರಟ ಕಾರನ್ನು ಕಾಡುಗೊಲ್ಲರ ಸಮುದಾಯದ ಮುಖಂಡರು ತಡೆದು ಕಾಡುಗೊಲ್ಲರ ಜಾತಿಯ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿದರು.
ಕಾಡುಗೊಲ್ಲರ ಸಂಘದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಮಾತನಾಡಿ, ರಾಜ್ಯ ಸರಕಾರ ಸೂಕ್ತ ನೀದೇರ್ಶನ ನೀಡಿದ್ದರು ಕೂಡ ಅಧಿಕಾರಿಗಳ ವೈಪಲ್ಯದಿಂದ ನಮ್ಮ ಮಕ್ಕಳ ವ್ಯಾಸಂಗ ಕುಂಠಿತಗೊಳ್ಳು ಬೀತಿಯಿದೆ. ಇದರಿಂದ ನಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಕಾಡುಗೊಲ್ಲರ ಜಾತಿ ಪ್ರಮಾಣ ಪತ್ರ ಅನಿವಾರ್ಯವಾಗಿದೆ ಎಂದರು.
ಇನ್ನೂ ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಇನ್ನೂ ಮೂರು ದಿನಗಳ ಒಳಗೆ ನಿಮಗೆ ಪ್ರಮಾಣ ಪತ್ರದ ಬಗ್ಗೆ ತಿಳಿಸಲಾಗುವುದು, ಇದರಿಂದ ನಿಮ್ಮ ಸಹಕಾರ ಅಗತ್ಯ ಎಂದರು.
ತಹಶೀಲ್ದಾರ್ ರೊಂದಿಗೆ ಚರ್ಚಿಸಿದ ಮೀಸೆ ಮಹಾಲಿಂಗಪ್ಪ ಮಾತನಾಡಿ, ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡದೆ ಹೋದರೆ ರಾಜ್ಯಾಧ್ಯಾಂತ ಉಗ್ರ ಹೋರಾಟ ಮಾಡಲಾಗುತ್ತದೆ, ಇನ್ನೂ ಮೀನಮೇಶ ಮಾಡುವ ಅಧಿಕಾರಿಗಳ ವಿರುದ್ದ ತಾಲೂಕಿನ ದಂಡಾಧಿಕಾರಿಳ ಹೆಸರನ್ನು ದಡ್ಡ ಅಧಿಕಾರಿಗಳು ಎಂದು ನಾಮಕರಣ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ಜಿಪಂ.ಮಾಜಿ ಅಧ್ಯಕ್ಷ ರಂಗಸ್ವಾಮಿ, ಮುಖಂಡ ಗೊಂವಿದಪ್ಪ, ಮಂಜುನಾಥ್, ವೀರಣ್ಣ, ಮಂಜಣ್ಣ, ತಿಪ್ಪೆಸ್ವಾಮಿ, ಬಸವರಾಜ್, ಕೃಷ್ಣಮೂರ್ತಿ, ಜಿ.ಕೆ.ವೀರಣ್ಣ, ಕಾಟಪನಹಟ್ಟಿ ವೀರೇಶ್, ನಿರ್ಸಗ ಗೋಂವಿದ್ ರಾಜ್, ಶ್ರೀನಿವಾಸ್, ರಂಗಸ್ವಾಮಿ, ಸಿದ್ದಾಪುರ ಮಂಜುನಾಥ್, ಬಾನು ವೀರೇಶ್, ಜಯಣ್ಣ, ಇತರರು ಇತರರು .