ಚಳ್ಳಕೆರೆ : ತಾಯಿ ಜೊತೆ ಇಬ್ಬರ ಮಕ್ಕಳ ಆತ್ಮಹತ್ಯೆ ಘೋರ
ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗ್ರಾಮದ ಉಪ್ಪಾರ ಜನಾಂಗದ ಲತಾ (28) ಹಾಗೂ ಪ್ರಣೀತ (5) ಗ್ನಾನೇಶ್ (1) ಎಂಬುವವರು ಆತ್ಮಹತ್ಯೆ ಗೆ ಶರಾಣಾಗಿದ್ದಾರೆ.
ಗ್ರಾಮದ ಮನೆಯಲ್ಲಿ ಎಂದಿನಂತೆ ಮುಂಜಾನೆ ಗಂಡ ತಿಪ್ಪೇಸ್ವಾಮಿ ಹೊಲಕ್ಕೆ ಹೋದಾಗ ಮನೆಯಲ್ಲಿ ಯಾರು ಇಲ್ಲದ ವೇಳೆ ಇಬ್ಬರ ಮಕ್ಕಳ ಜೊತೆ ಇರುವ ಗೃಹಿಣಿ ತನ್ನ ಮನೆಯ ನೀರಿನ ತೊಟ್ಟಿನಲ್ಲಿ ಮಗ ಪ್ರಣೀತನ ಮೃತ ದೇಹ ಹಾಗು ಬಚ್ಚಲ ಮನೆಯ ಪಾತ್ರೆಯಲ್ಲಿ ಒಂದು ವರ್ಷದ ಮಗು ಗ್ನಾನೇಶ್ ಮೃತ ದೇಹ ಹಾಗು ತಾಯಿಯ ಲತಾ ನೇಣಿಗೆ ಶರಾಣದ ಘಟನೆ ಜರುಗಿದೆ.
ಇನ್ನೂ ಈ ಸುದ್ದಿ ತಿಳಿದ ಗ್ರಾಮವೆಲ್ಲಾ ಶೋಕದಲ್ಲಿ ಕಂಬನಿ ಮಿಡಿದಿದ್ದಾರೆ.
ಇನ್ನೂ ಪೊಲೀಸ್ ಇಲಾಖೆ ಪಿಐ ಆರ್.ಎಪ್.ದೇಸಾಯಿ ಹಾಗು ಪಿಎಸ್ಐ ಕೆ.ಸತೀಶ್ ನಾಯ್ಕ್ ತನಿಖೆ ನಡೆಸುತ್ತಿದ್ದಾರೆ.