ಚಳ್ಳಕೆರೆ
ಮೇಣದ ದೀಪಗಳ ಮಧ್ಯದಲ್ಲಿ ಅರಳಿದ ಅಂಬೇಡ್ಕರ್ ಭಾವಚಿತ್ರ
ಚಳ್ಳಕೆರೆ : ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಯುವಕ ಸಂಘದಿಂದ 67ನೇ ಅಂಬೇಡ್ಕರ್ ಪರಿನಿಬ್ಬಾಣ ದಿನವನ್ನು ಆಚರಣೆ ಮಾಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಗ್ರಾಮದ ಯುವಕರು ಮೇಣದ ದೀಪಗಳನ್ನು ತಂದು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೇಣದ ದೀಪಗಳನ್ನು ಹಿಡಿದು ಗ್ರಾಮದಲ್ಲಿ ಜಾತ ಮಾಡುವುದರ ಮೂಲಕ ಅಂಬೇಡ್ಕರ್ ಅವರಿಗೆ ವಿಶೇಷ ರೀತಿಯಲ್ಲಿ ಗೌರವ ಸಮರ್ಪಣೆ ನೀಡಿದರು.
ದಲಿತರು ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಅಂಬೇಡ್ಕರ್ ಅವರ ಆಶಯವನ್ನು ಸರ್ಕಾರ ಜಾರಿಗೆ ತರಲು ವಿಫಲವಾಗಿದೆ. ಅಸ್ಪೃಶ್ಯತೆ ಅಸಮಾನತೆ ಇನ್ನು ಜೀವಂತವಾಗಿರುವುದು ಸಮಾಜದ ದುರ್ದೈವದ ಸಂಗತಿಯಾಗಿದೆ ಎಂದರು, ಹಾಗೂ ಗ್ರಾಮದಲ್ಲಿ ಎಂಟು ವರ್ಷಗಳಿಂದ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನವನ್ನು ಮೇಣದ ದೀಪಗಳನ ಬೆಳಗುವ ಮೂಲಕ ನಡೆಸಿಕೊಂಡು ಬರುತ್ತಿದ್ದೇವೆ ಎಂದು ಮಂಜುನಾಥ್ ತಿಳಿಸಿದರು.