ಕೋಡಿಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ 67 ನೇ ಯ ಪರಿ ನಿರ್ವಾಣ ಕಾರ್ಯಕ್ರಮ :
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ವತಿಯಿಂದ, ದಲಿತ ಸಮುದಾಯದ ಶಕ್ತಿ ದೇವತೆಯಾದ ಶ್ರೀ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ದೀನ ದಲಿತರ ಆಶಾ ಕಿರಣ, ಭಾರತ ರತ್ನ , ಸಂವಿಧಾನ ಶಿಲ್ಪಿ,ಮಹಾನ್ ಮಾನವತಾವಾದಿ,ಶೋಷಿತರ ಶಾಶ್ವತ ಧ್ವನಿ, ಯುವಕರ ಮಾರ್ಗದರ್ಶಕರು ಹಾಗೂ ಇಡೀ ದಲಿತ ಸಮುದಾಯಕ್ಕೆ ಸ್ಪೂರ್ತಿ ಮತ್ತು ಕೀರ್ತಿ ಯಾಗಿರುವ ಡಾ.ಬಿ.ಆರ್ ಅಂಬೇಡ್ಕರ್ ರವರ 67 ನೇಯ ಪರಿನಿರ್ವಾಣ ಪುಣ್ಯ ಸ್ಮರಣೆ ಕಾರ್ಯಕ್ರಮದೊಂದಿಗೆ ಭಾವ ಪೂರ್ವಕ ನಮನಗಳನ್ನು ಪ್ರತಿಯೊಬ್ಬರೂ ಜ್ಯೋತಿ ಬೆಳಗುವುದರ ಮೂಲಕ ಮಹಾ ನಾಯಕನಿಗೆ ಶ್ರದ್ದಾ ಪೂರ್ವಕ ನಮನಗಳನ್ನು ಸಲ್ಲಿಸಲಾಯಿತು..
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಸಮುದಾಯದ ಮುಖಂಡರು, ಯಜಮಾನರು ಸಮಸ್ತ ಯುವಕ ಯುವತಿಯರು, ಸರ್ವ ಸದಸ್ಯರು,ಹಾಗೂ ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು..