ಚಳ್ಳಕೆರೆ : ಕಾಲೇಜ್ ಗೆ ಚಕ್ಕರ್ ಹಾಕಿ ಪಾರ್ಕಿನಲ್ಲಿ ಕೂತು ಕಾಲ ಹರಣ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಡಿವೈಎಸ್ಪಿ ಟಿ.ಬಿ.ರಾಜಣ್ಣ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೌದು ಗ್ರಾಮೀಣ ಪ್ರದೇಶದಿಂದ ಮುಂಜಾನೆ ಕಾಲೇಜ್ ಗೆಂದು ಬಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೆ ಪಾರ್ಕಿನಲ್ಲಿ ಕೂತು ಕಾಲಹರಣ ಮಾಡುತ್ತಿದ್ದರು.
ಸಾರ್ವಜನಿಕರ ಮಾಹಿತಿ ಮೇರೆಗೆ
ನಗರದ ವಿಸ್ಮಯ ಪಾರ್ಕಿನಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಬುದ್ದಿವಾದ ಹೇಳಿ
ಶಾಲೆ ಕಾಲೇಜುಗಳಿಗೆ ಚಕ್ಕರ್ ಹಾಕಿ ಬಂದು ಪಾರ್ಕಿನಲ್ಲಿ ಕೂರದಂತೆ ಎಚ್ಚರಿಕೆ ನೀಡಿದ್ದಾರೆ.
ವಿಸ್ಮಯ ಪಾರ್ಕಿನಲ್ಲಿ ಶಾಲಾ-ಕಾಲೇಜುಗಳಿಗೆ ಬರುವಂತಹ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಚಕ್ಕರ್ ಹಾಕಿ, ಪಾರ್ಕಿನಲ್ಲಿ ಬಂದು ಕುಳಿತುಕೊಂಡು ಬರ್ತಡೇ ಪಾರ್ಟಿ ಮಾಡಿಕೊಳ್ಳುವುದು ಕುಳಿತು ಹರಟೆ ಹೊಡೆಯುವುದು ಮಾಡುತ್ತಿದ್ದರು.
ಇದನ್ನು ಗಮನಿಸಿದ ಚಳ್ಳಕೆರೆ ಡಿವೈಎಸ್ಪಿ ಟಿವಿ. ರಾಜಣ್ಣ ವಿಸ್ಮಯ ಪಾರ್ಕಿಗೆ ಭೇಟಿ ನೀಡಿ ಕುಳಿತು ಹರಟೆ ಹೊಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ತೆರಳುವಂತೆ ಎಚ್ಚರಿಕೆ ನೀಡಿದ್ದಾರೆ.