ಚಳ್ಳಕೆರೆ : ಬುಡಕಟ್ಟು ಸಂಪ್ರದಾಯದ ದೇವರ ಗೋವುಗಳಿಗೆ ಸರಕಾರ ಮೇವು ವಿತರಣೆ ಮಾಡುವ ನೆಪದಲ್ಲಿ ಸಂಪ್ರದಾಯವನ್ನು ಒಡೆಯಬಾರದು ದೇವರ ಗೋವುಗಳು ಇರುವಲ್ಲಿಗೆ ಮೇವು ನೀರನ್ನು ಹೊದಗಿಸಬೇಕು ಎಂದು ಕಿಲಾರಿಗಳು ಮನವಿ ಮಾಡಿದ್ದಾರೆ.

ಅವರು‌ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕಿನ ದೇವರ ರಾಸುಗಳಿಗೆ ಕೇವಲ ಎರಡು ಮೂರು ತಿಂಗಳು ಮೇವು ನೀಡಿದರೆ ಸಾಲದು ವರ್ಷದ ಉದ್ದಕ್ಕೂ ಮೇವು ನೀಡಿ ಎಂದರು.

ಇನ್ನೂ ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮ ಜಪಾನಂದಸ್ವಾಮಿಗಳು ಮಾತನಾಡಿ,
ಸರಕಾರ ಬರಗಾಲ ಎಂದು ಘೋಷಣೆ ಮಾಡಿ ಗೋಶಾಲೆ ಪ್ರಾರಂಭಿಸಲಾಗುವುದು ಸಂತಸದ ವಿಷಯ ಆದರೆ ಇದುವರೇಗೂ ಜಾನುವಾರುಗಳಿಗೆ ಗೋಶಾಲೆಗಳು ತೆರೆಯಲು ಸರಕಾರ ಮೀನಾ ಮೇಷ ಎಣಿಸುತ್ತಿದೆ. ದೇವರ ಎತ್ತುಗಳಿಗೆ ಪ್ರತ್ಯೇಕ ಗೋಶಾಲೆ ತೆರೆಯಬೇಕು, ಶಾಶ್ವತ ಗೋಶಾಲೆ ತೆರಯಲು ಸರಕಾರದ ಗೋಮಾಳದಲ್ಲಿ ಜಾಗ ಮೀಸಲಿಡಬೇಕು.

ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ದೇವರ ಹೆಸರುಗಲ್ಲಿ ಜಾನುವಾರುಗಳು ಬಿಟ್ಟು ಪೋಷಣೆ ಮಾಡಿಕೊಂಡು, ವಿಶೇಷ ಆಚರಣೆಗಳನ್ನು ಮಾಡುತ್ತಾರೆ. ದೇವರ ರಾಸುಗಳಿಗೆ ಮೂಗು ದಾರ ಹಾಕುವುದಿಲ್ಲ, ಹಗ್ಗ ಹಾಕಿ ಕಟ್ಟುವುದಿಲ್ಲ, ಇವು ಗೋ ಶಾಲೆಗಳಲ್ಲಿ ಇರುವುದಿಲ್ಲ. ದೇವರ ರಾಸುಗಳು ಇರುವ ಸ್ಥಳಗಳಿಗೆ ಸರ್ಕಾರ ಮೇವು ಪೂರೈಕೆ ಮಾಡಿ ದೇವರ ರಾಸುಗಳನ್ನು ಸರ್ಕಾರ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮೊಳಕಾಲ್ಮೂರು ತಾಲ್ಲೂಕಿನ ಮಂಜಣ್ಣ
ಉಪನ್ಯಾಸP ಓಬಣ್ಣ, ಅರುಣ್ ಜೋಳದ್ , ನಟರಾಜ್ ,
ಕಿಲಾರಿ ಬೋರಯ್ಯ, ಪಾಲಯ್ಯ,ಬೋರಯ್ಯ, ಸಿದ್ದೇಶ್, ಪರಮೇಶ್ವರಪ್ಪ, ಸಂಯೋಜಕರಾದ ಮಹೇಶ್, ಸಿದ್ದೇಶ್ ಸೇರಿದಂತೆ ಉತರರುದ್ದರು.

Namma Challakere Local News
error: Content is protected !!