ಚಳ್ಳಕೆರೆ : ತೆಲಂಗಾಣ ರಾಜ್ಯದ ಚುನಾವಣೆ ಮುಗಿದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರಾವಾಗಿವೆ. ಇನ್ನೂ ಸೋಲುಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ ಅರಳಿ ಮರದ ಕಟ್ಟೆಗಳ ರಾಜಾಕೀಯ ಚತುರರ ಲೆಕ್ಕಾಚಾರದಂತೆ, ಪಕ್ಷಗಳ ಬಲಾ ಬಲವನ್ನು ಅಳೆದು ತೂಗಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಲೆಕ್ಕಾಚಾರಗಳು ಜೋರಾಗಿಯೇ ಸ್ದದು ಮಾಡುತ್ತಿವೆ. ಇಂತಹ ಸಮಯದಲ್ಲಿ ಅಲಂಪುರ ಕ್ಷೇತ್ರಕ್ಕೆ ಮತ ಪ್ರಚಾರಕ್ಕೆ ತೆರಳಿದ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿರವರು ಮಾಧ್ಯಮದೊಂದಿಗೆ ತೆಲಂಗಾಣದ ರಾಜಾಕೀಯ ವಿಷ್ಲೇಷಣೆಯನ್ನು ವಿವರಿಸಿದ್ದಾರೆ.
ಕಳೆದ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಕರ್ನಾಟಕ ರಾಜ್ಯದ ಬಯಲು ಸೀಮೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕ್ಷೇತ್ರದಲ್ಲಿ ತಮ್ಮ ಚಾಪು ಮೂಡಿಸಿ ಇನ್ನೂ ತೆಲಂಗಾಣ ರಾಜ್ಯದ ವಿಧಾನ ಸಭಾ ಚುನಾವಣೆ ಪ್ರಚಾರ ಕಾರ್ಯದಲ್ಲಿ ಕಳೆದ ಹಲವು ದಿನಗಳಿಂದ ತೊಡಗಿದ ಶಾಸಕರು ಮಾಧ್ಯಮದೊಂದಿಗೆ ತೆಲಂಗಾಣದ ಚುನಾವಣೆ ಬಗ್ಗೆ ಹಂಚಿಕೊAಡಿದ್ದಾರೆ.
ರಾಷ್ಟಿçÃಯ ಪಕ್ಷವಾದ ನಮ್ಮ ಕಾಂಗ್ರೇಸ್ ಪಕ್ಷ ಈ ಬಾರಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬರಲಿದೆ, ಇನ್ನೂ ತೆಲಂಗಾಣದ ಅಲಂಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಡಾ.ಎಸ್.ಎ.ಸಂಪತ್‌ಕುಮಾರ್ ಈ ಬಾರಿ ಜಯಬೇರಿ ಬಾರಿಸಲಿದ್ದಾರೆ. ಎಸ್‌ಸಿ ಮೀಸಲು ಕ್ಷೇತ್ರವಾದ ಅಲಂಪುರದಲ್ಲಿ ಅವರು ಕಳೆದ ತಮ್ಮ ಶಾಸಕ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತ ಜನರ ವಿಶ್ವಾಸಗಳಿಸಿದ್ದರಿಂದ ಇವರಿಗೆ ಈ ಬಾರಿ ಬಹು ಅಂತರಗಳಿAದ ಗೆಲುವು ಸಾಧಿಸುತ್ತಾರೆ, ಇನ್ನೂ ಈ ಬಾರಿ ಸುಮಾರು 70 ಸ್ಥಾನಗಳಿಂದ ತೆಲಂಗಾಣ ರಾಜ್ಯ ಅಧಿಕಾರದ ಗದ್ದುಗೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಮತ ಪ್ರಚಾರಕ್ಕೆಂದು ತೆಲಂಗಾಣದಲ್ಲಿ ಬೀಡು ಬಿಟ್ಟಿದ್ದ ಶಾಸಕ ಟಿ.ರಘುಮೂರ್ತಿ, ಕರ್ನಾಟಕ ಮಾದರಿಯ ಚುನಾವಣೆಯನ್ನು ಅನುಸರಿಸಿ ಅಲಂಪುರ ಕ್ಷೇತ್ರದ ಸುಮಾರು 130 ಗ್ರಾಮಗಳ ಪೈಕಿ ಸುಮಾರು 70ಗ್ರಾಮಗಳ ಮತದಾರನ್ನು ಸಂಪರ್ಕಿಸಿದ್ದೆನೆ ಅವರ ಪಕ್ಷನಿಷ್ಠೆ ಹಾಗೂ ಕಾಂಗ್ರೇಸ್ ಪಕ್ಷದ ಯೋಜನೆಗಳನ್ನು ಮತದಾರರು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ ಇದರಿಂದ ಅಲಂಪರದಲ್ಲಿ ಬಹು ಅಂತರದಿAದ ಗೆಲವು ಸಾಧಿಸುತ್ತಾರೆ. ಇನ್ನು ಹಲವು ಸಮಿಕ್ಷೆಗಳ ಪ್ರಕಾರ ಕಾಂಗ್ರೇಸ್ ಗೆಲುವು ನಿಶ್ಚಿತ ಎಂಬ ವರದಿಗಳು ಹರಿದಾಡುತ್ತಿವೆ ಈ ಎಲ್ಲವನ್ನೂ ಮನಗಂಡು ಈ ಬಾರಿ ತೆಲಂಗಾಣದಲ್ಲಿ ಕೈ ಜಯಬೇರಿಸಲಿದೆ ಎಂದರು.
ಪೋಟೋ ಚಳ್ಳಕೆರೆ ವಿಧಾನ ಸಭಾ ಕ್ಷೆತ್ರದ ಶಾಸಕ ಟಿ.ರಘುಮೂರ್ತಿ

About The Author

Namma Challakere Local News
error: Content is protected !!