ಚಿತ್ರದುರ್ಗ
ಶಾಲಾ ಹಂತದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಿರಬೇಕು ಎಂದರೆ ನಿಯಮಿತವಾಗಿ ಸ್ಪರ್ಧಾ ಚಟುವಟಿಕೆಗಳನ್ನು ಎಂದು ಚಿತ್ರದುರ್ಗ ತಾಲೂಕು ಮದಕರಿಪುರ ಗ್ರಾಪಂ ಅಧ್ಯಕ್ಷ ಬಸವರಾಜ್ ಹೇಳಿದರು
ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ಮದಕರಿಪುರ ಗ್ರಾಮದ ಸಹಿಪ್ರಾ ಶಾಲಾ ಆವರಣದಲ್ಲಿ ಬುಧವಾರ ಬಳಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಡಿಎಸ್‌ಹಳ್ಳಿ ಗ್ರಾಪಂ, ಬಿಇಒ ಮತ್ತು ಬಿಆರ್‌ಸಿ ಕಚೇರಿ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮದಕರಿಪುರ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಗಣಿತ ಕಲಿಕಾ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಮಾತನಾಡಿದರು
ಹಳ್ಳಿಗಾಡಿನ ಮಕ್ಕಳು ವಿವಿಧ ವಿಷಯಗಳನ್ನು ಕಲಿತು ಪ್ರಗತಿ ಸಾಧಿಸಲು ಕೇವಲ ಬೋಧನೆಯಿಂದ ಸಾಲದು ಬದಲಾಗಿ ತರಗತಿಯಲ್ಲಿ ಆಯೋಜಿಸುವ ಸ್ಪರ್ಧೆಗಳು ಮುಖ್ಯ ಪಾತ್ರ ವಹಿಸುತ್ತವೆ ಎಂದರು
ಮದಕರಿಪುರ ಕ್ಲಸ್ಟರ್ ಸಿಆರ್‌ಪಿ ಶಿವರುದ್ರಪ್ಪ ಪ್ರಾಸ್ತಾವಿಕ ಮಾತನಾಡಿ ಸ್ಥಳೀಯ ಆಡಳಿತ, ಗ್ರಾಮಸ್ಥರು ಮತ್ತು ಬಿಎಡ್ ಪ್ರಶಿಕ್ಷಣಾರ್ಥಿಗಳ ಸಹಕಾರ ಮತ್ತು ಪ್ರೋತ್ಸಾಹದಿಂದ ಗಣಿತ ಕಲಿಕಾ ಸ್ಪರ್ಧೆ ಉತ್ತಮವಾಗಿ ಮೂಡಿ ಬಂತು ಎಂದರು
ಸAದರ್ಭದಲ್ಲಿ ಮದಕರಿಪುರ ಗ್ರಾಪಂ ಅಧ್ಯಕ್ಷ ಬಸವರಾಜ್, ಸಮೂಹ ಸಂಪನ್ಮೂಲವ್ಯಕ್ತಿ ಶಿವರುದ್ರಪ್ಪ, ಮುಖ್ಯಶಿಕ್ಷಕಿ ರೇಖಾ, ಶಿಕ್ಷಕರ ಸಂಘದ ನಿರ್ದೇಶಕಿ ಉಷಾ, ಶಿಕ್ಷಕರಾದ ಶೋಭಾ, ನಾಗರಾಜು, ನಾಗಲತಾ, ಗೀತಾ, ಸೌಭಾಗ್ಯ, ಬಿಇಡಿ ಪ್ರಶಿಕ್ಷಣಾರ್ಥಿಗಳು ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು
(ಪೋಟೋ ಪಿಆರ್‌ಪುರ ಎಜುಕೇಷನ್ 29 )
ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ಮದಕರಿಪುರ ಗ್ರಾಮದ ಸಹಿಪ್ರಾ ಶಾಲಾ ಆವರಣದಲ್ಲಿ ಬುಧವಾರ ಬಳಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಡಿಎಸ್‌ಹಳ್ಳಿ ಗ್ರಾಪಂ, ಬಿಇಒ ಮತ್ತು ಬಿಆರ್‌ಸಿ ಕಚೇರಿ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮದಕರಿಪುರ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಗಣಿತ ಕಲಿಕಾ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಗ್ರಾಪಂ ಅಧ್ಯಕ್ಷ ಬಸವರಾಜ್ ನಗದು ಬಹುಮಾನ ನೀಡಿದರು ಸಮೂಹ ಸಂಪನ್ಮೂಲವ್ಯಕ್ತಿ ಶಿವರುದ್ರಪ್ಪ, ಮುಖ್ಯಶಿಕ್ಷಕಿ ರೇಖಾ, ಶಿಕ್ಷಕರ ಸಂಘದ ನಿರ್ದೇಶಕಿ ಉಷಾ, ಶಿಕ್ಷಕರಾದ ಶೋಭಾ, ನಾಗರಾಜು, ನಾಗಲತಾ, ಗೀತಾ, ಸೌಭಾಗ್ಯ, ಬಿಇಡಿ ಪ್ರಶಿಕ್ಷಣಾರ್ಥಿಗಳು ಇದ್ದರು

About The Author

Namma Challakere Local News
error: Content is protected !!