ಚಿತ್ರದುರ್ಗ
ಆಧುನಿಕ ಕಾಲಘಟ್ಟಕ್ಕೆ ಅನುಗುಣವಾಗಿ ವಿಜ್ಞಾನ ವಿಷಯವನ್ನು ವಿದ್ಯಾರ್ಥಿಗಳಿಗೆ ಸೂಕ್ತ ಪ್ರಯೋಗ, ಪ್ರಾತ್ಯಕ್ಷಿಕೆಯ ಮೂಲಕ ಶಿಕ್ಷಕರು ಮಾರ್ಗದರ್ಶನ ನೀಡಬೇಕು ಎಂದು ಜೆಸಿಹಳ್ಳಿಗೊಲ್ಲರಹಟ್ಟಿ ಸಹಿಪ್ರಾ ಶಾಲಾ ಪ್ರಭಾರಿ ಮುಖ್ಯಶಿಕ್ಷಕ ಒ ಚಿತ್ತಯ್ಯ ಹೇಳಿದರು
ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ಜೆಸಿಹಳ್ಳಿಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಾಲಾ ಸಮಿತಿ ಹಾಗೂ ಸಹಿಪ್ರಾ ಶಾಲೆಯ ವತಿಯಿಂದ ಆಯೋಜಿಸಿದ್ದ ವೈಜ್ಞಾನಿಕ ದೃಷ್ಟಿಕೋನದತ್ತ ವಿದ್ಯಾರ್ಥಿಗಳು ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಸಾಮಾಜಿಕ ಬದಲಾವಣೆ ಹಾಗೂ ತಂತ್ರಜ್ಞಾನಾಧಾರಿತ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಕೋನದಿಂದ ಮಕ್ಕಳು ಯಾವುದೇ ಸಾಂಪ್ರದಾಯಕ ಬೋಧನೆಗೆ ಗಮನಹರಿಸುವುದಿಲ್ಲ ಈ ಹಿನ್ನೆಲೆ ವಿಜ್ಞಾನ ವಿಷಯಗಳನ್ನು ವೈಜ್ಞಾನಿಕವಾಗಿ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದರು
ಹಿರಿಯ ಶಿಕ್ಷಕ ಎಸ್ ಟಿ ಮಂಜುನಾಥ ಮಾತನಾಡಿ ಸರ್ಕಾರದ ನಿದೇಶನ ಮತ್ತು ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಹೆಚ್ಚೆಚ್ಚು ಚಟುವಟಿಕೆಗಳನ್ನು ಆಯೋಜಿಸಿ ವಿಜ್ಞಾನ ಕಿಟ್‌ಗಳನ್ನು ಬಳಸಿಕೊಂಡು ಅವರಲ್ಲಿ ವಿಜ್ಞಾನದ ಆಸಕ್ತಿ ಹೆಚ್ಚಿಸಬೇಕು ಎಂದರು
ಜಿಪಿಟಿ ಶಿಕ್ಷಕ ವಿ ಶರಣಪ್ಪ ಇದೇ ವೇಳೆ ಶಾಲಾ ಮಕ್ಕಳಿಗೆ ವಿವಿಧ ವಿಜ್ಞಾನದ ಚಟುವಟಿಕೆಗಳನ್ನು ನಡೆಸಿದರು ಸಂದರ್ಭದಲ್ಲಿ ಶಾಲಾ ಸಮಿತಿಯ ಅಧ್ಯಕ್ಷ ಆರ್ ತಿಪ್ಪೇಸ್ವಾಮಿ, ಹಿರಿಯ ಶಿಕ್ಷಕ ಎಸ್ ಟಿ ಮಂಜುನಾಥ, ಶಿಕ್ಷಕರಾದ ವಿ ಶರಣಪ್ಪ, ಪಿ ಮೇಘಾ, ಭವಾನಿ ಮುಖ್ಯ ಅಡುಗೆ ಸಿಬ್ನಂದಿ ಸರೋಜಾ, ಸಹಾಯಕ ಅಡಿಗೆಯವರಾದ ತಿಪ್ಪಮ್ಮ ವಿದ್ಯಾರ್ಥಿಗಳಾದ ಎಸ್ ಆಕಾಶ, ಆರ್ ಟಿ ಚಂದನ್‌ಕುಮಾರ, ಭವ್ಯಾ ಚಂದನಾ, ಅನನ್ಯ, ಗೌತಮಿ, ಅಕ್ಷಿತಾ, ಟಿ ಲಕ್ಷಿö್ಮÃ, ಎಸ್ ದೀಕ್ಷಾ, ಎಸ್ ಆಕಾಶ, ಗಿರೀಶ, ಕಿರಣ್‌ಕುಮಾರ ವೈಷ್ಣವಿ, ದೀಕ್ಷಾ ಟಿ ಪುಣ್ಯಶ್ರೀ ಯಶವಂತ ಇದ್ದರು
ಪೋಟೋ (ಪಿಆರ್‌ಪುರ ವಿಜ್ಞಾನ 29 )
ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ಜೆಸಿಹಳ್ಳಿಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಾಲಾ ಸಮಿತಿ ಹಾಗೂ ಸಹಿಪ್ರಾ ಶಾಲೆಯ ವತಿಯಿಂದ ಆಯೋಜಿಸಿದ್ದ ವೈಜ್ಞಾನಿಕ ದೃಷ್ಟಿಕೋನದತ್ತ ವಿದ್ಯಾರ್ಥಿಗಳು ಮತ್ತು ವಿಜ್ಞಾನದ ಪ್ರಾತ್ಯಕ್ಷಿಕೆ ಕಾರ್ಯಕ್ರಮzಲ್ಲಿ ವಿದ್ಯಾರ್ಥಿಗಳಾದ ಎಸ್ ಆಕಾಶ, ಆರ್ ಟಿ ಚಂದನ್‌ಕುಮಾರ ಚಟುವಟಿಕೆ ನೀಡಿದರು