ಚಳ್ಳಕೆರೆ : ಚಳ್ಳಕೆರೆ ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು 51 ಉಪನ್ಯಾಸಕರು ತಮ್ಮ ಸೇವಾ ಭದ್ರಾತೆಗಾಗಿ ಆಯಾ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನ.23ರಿಂದ ರಾಜ್ಯಾದ್ಯಂತ ಹಮ್ಮಿಕೊಂಡ ಪ್ರತಿಭಟನೆಗೆ ಕಾಲೇಜಿನಿಂದ ತೆರಳಲು ಅವಕಾಶ ಕೊಡಿ ಎಂದು ಪ್ರಾಂಶುಪಾಳರನ್ನು ಕೇಳಿದ ಅತಿಥಿ ಉಪನ್ಯಾಸಕರಿಗೆ ಏಕವಚನದಲ್ಲಿ ನಿಂಧಿಸಿ ಪ್ರಸಂಗ ನಗರದಲ್ಲಿ ನಡೆದಿದೆ.
ಹೌದು ಕಳೆದ ಹಲವು ವರ್ಷಗಳಿಂದ ಸೇವಾ ಭದ್ರತೆ ಇಲ್ಲದೆ ಅತೀ ಕಡಿಮೆ ವೇತದಲ್ಲಿ ದುಡಿಯುವ ಉಪನ್ಯಾಸಕ ಸೇವಾ ಭದ್ರತೆ ಇಲ್ಲದೆ ಇದ್ದಾರೆ ಇಂದರಿAದ ಉಪನ್ಯಾಸಕರ ಸೇವಾ ಖಾರ್ಯ ಮಾತಿಗಾಗಿ ಹೋರಾಟ ಮಾಡಲು ತಮ್ಮ ಹಕ್ಕುಗಳನ್ನು ಕೇಳಲು ಅವಕಾಶ ಮಾಡಿಕೊಡುತ್ತಿಲ್ಲ ಇವರು ಈಡೀ ರಾಜ್ಯದಲ್ಲಿ ಇಲ್ಲದ ಕಾನೂನುಗಳನ್ನು ಈ ಕಾಲೇಜಿನಲ್ಲಿ ರೂಪಿಸುತ್ತಿದ್ದಾರೆ ಎಂದು ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಬಸವರಾಜ್ ಆರೋಪ ಮಾಡಿದ್ದಾರೆ.
ಕಡಿಮೆ ವೇತನಕ್ಕೆ ನಿಗಧಿತ ಸಮಯಕ್ಕೆ ಪಠ್ಯಗಳ ಬೋದನೆ ಮಾಡುತ್ತೇವೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಹಕಾರಿಯಾಗುವಂತೆ ವಿಶೇಷ ತರಗತಿಗಳನ್ನು ಮಾಡುತ್ತೇವೆ ಆದರೆ ಪ್ರಾಚಾರ್ಯರು ಅತಿಥಿ ಉಪನ್ಯಾಸಕರನ್ನು ಕಡೆಗಣಿಸುತ್ತಾರೆ, ರಾಜ್ಯಾದ್ಯಂತ ಎಲ್ಲಾ ಕಾಲೇಜಿನ ಅತಿಥಿ ಉಪನ್ಯಾಸಕರು ಪ್ರತಿಭಟನೆ ಮಾಡುತ್ತಿದ್ದಾರೆ ಅದರಂತೆ ನಾವೂ ಸಹ ಪ್ರತಿ ಭಟನೆ ಮಾಡಲು ಮುಂದಾಗಿದ್ದೇವೆ,
ಪ್ರತಿಭನಟೆ ಮಾಡಲು ವೈಯುಕ್ತವಾಗಿ ಪ್ರತಿಭಟನೆ ಮಾಡುವ ಪ್ರತಿಯೊಬ್ಬ ಅತಿಥಿ ಉಪನ್ಯಾಸಕರು ಅನುಮತಿ ಪಡೆಯಬೇಕು ಇಲ್ಲವಾದರೆ ಹೊರ ನಡೆಯಿರಿ ಎಂದು ಏಕವಚನದಲ್ಲಿ ಹೇಳುತ್ತಾರೆ. ಇದರಿಂದ ಕೆಲ ಕಾಲ ಪ್ರಾಚಾರ್ಯ ಹಾಗೂ ಅತಿಥಿ ಉಪನ್ಯಾಸಕರನ ನಡುವೆ ಮಾತಿನ ಚಕಮಕಿ ನಡೆದಿದೆ.

ನಾವೇನು ಇವರ ಮನೆಗೆ ಬಂದಿದ್ದೇವೆಯೇ ಹೊರಗೆ ಹೋಗಿ ಎಂದು ಹೇಳಲು ಎಂದು ಅತಿಥಿ ಉಪನ್ಯಾಸಕಿ ಪ್ರಾಚಾರ್ಯರ ವಿರುದ್ದ ಕಿಡಿ ಕಾರಿದ್ದಾರೆ.
ನಮಗೆ ಬರಬೇಕಾಗಿರುವ ಬಾಕಿ ವೇತನ, ಉದ್ಯೋಗ ಭದ್ರತೆ ಇವೆಲ್ಲವೂ ಸಿಗುವುದು ಯಾವಾಗ. ಎಂಭ ಆತಂಕದಲ್ಲಿದ್ದೇವೆ ಪ್ರತಿಭಟನೆ ಮಾಡಿದರೂ ಸರಕಾರ ನಮ್ಮ ಸೇವಾ ಭದ್ರತೆ ಹಾಗೂ ವೇತನ ನೀಡುವಲ್ಲಿ ವಿಳಂಭ ದೋರಣೆ ಮಾಡುತ್ತಿದೆ.
ನಮ್ಮೆಲ್ಲ ನೋವುಗಳನ್ನು ನುಂಗಿಕೊAಡು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಲು ಶ್ರಮಿಸುತ್ತಿದ್ದೇವೆ. ಈ ಎಲ್ಲ ಸತ್ಯ ಗೊತ್ತಿದ್ದರು ಸರ್ಕಾರ ಮತ್ತು ಇಲಾಖೆ ನಮ್ಮತ್ತ ಗಮನ ನೀಡುತ್ತಿಲ್ಲ ಎಂದು ಪ್ರತಿಭಟನೆ ನಿರತ ಬಸವರಾಜ್ , ಯರ್ರಿಸ್ವಾಮಿ, ಅನಿಲ್, ಶ್ರೀನಿವಾಸ್, ಶೋಭ, ಶಿಲ್ಪ, ಅಶ್ವಿನಿದೇಸಾಯಿ, ಸುಪ್ರಿತ್, ಮಧು ಇತರರಿದ್ದರು..

Namma Challakere Local News
error: Content is protected !!