ಚಳ್ಳಕೆರೆ : ಕರ್ನಾಟಕ ರಾಜ್ಯ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದಿAದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಮ್ಮಿಕೊಳಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ನಗರದ ರೋಟರಿ ಕ್ಲಬ್ ನÀಲ್ಲಿ ನ.30ರಂದು ಬೆಳಿಗ್ಗೆ 9ಗಂಟೆಯಿAದ ಮದ್ಯಾಹ್ನ 2ಗಂಟೆಯವರೆಗೆ ಆರೋಗ್ಯ ತಪಾಸಣೆ ಶಿಬಿರ ನಡೆಯುತ್ತದೆ. ಇದರ ಸದುಪಯೋಗವನ್ನು ಖಾಸಗಿ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ, ಬಸ್ ಚಾಲಕರು ಸೇರಿದಂತೆ ಕುಟುಂಬದ ಸದಸ್ಯರು ಶಿಬಿರದ ಅನುಕೂಲ ಪಡೆದುಕೊಳ್ಳಲು ಕೋರಿದೆ. ಎಂದು ಎಸ್.ರವಿಕುಮಾರ್ ಮನವಿ ಮಾಡಿದ್ದಾರೆ.
ಇನ್ನೂ ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ವತ್ರೆ, ರೋಟರಿ ಕ್ಲಬ್ ಚಳ್ಳಕೆರೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದೆ.
ಶಿಬಿರದಲ್ಲಿ ಆರೋಗ್ಯ ತಪಾಸಣೆಯನ್ನು ರಕ್ತದೊತ್ತಡ, ಇಸಿಜಿ, ಸಕ್ಕರೆ ಖಾಯಿಲೆ, ಕಿವಿಮೂಗು, ಗಂಟಲು, ಕಣ್ಣಿನ ಸಮಸ್ಯೆಗಳು, ಮೂಳೆ ಸಂಬAಧಿತ ಸಮಸ್ಯೆಗಳು, ಮಹಿಳೆಯರ ಸಾಮಾನ್ಯ ಆರೋಗ್ಯ ತಪಾಸಣೆ ಮಾಡಲಾಗುವುದು ಎನ್ನಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಎಸ್.ರವಿಕುಮಾರ್ ಮೊ.9113236962- ತಿಪ್ಪೆಸ್ವಾಮಿ ಹೆಚ್. ಮೊ-9449814166 ಗೆ ಕರೆ ಮಾಡಲು ಕೋರಿದೆ.