ಚಳ್ಳಕೆರೆ: ಹಲವರು ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಿರುತ್ತಾರೆ ಇದರಿಂದಾಗಿ ಗಣಿತ ವಿಷಯವೆಂದರೆ ಕಬ್ಬಿಣದ ಕಡಲೆ ಎಂದು ವಿದ್ಯಾರ್ಥಿಗಳು ಭಾವಿಸಿ ನಕಾರಾತ್ಮಕ ಚಿಂತನೆಗಳಿAದ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಗಳಿಸುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್.ಸುರೇಶ್ ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಬುಡ್ನಹಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕರಿಂದ ಆರನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಗುಣಮಟ್ಟಕ್ಕೆ ತಕ್ಕಂತೆ ಗಣಿತ ವಿಷಯದ ಬಗ್ಗೆ ಆತಂಕ ಹೋಗಲಾಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಗಣಿತವನ್ನು ಸಹ ಎಲ್ಲಾ ವಿಷಯಗಳಂತೆ ಕಲಿಯಬಹುದು ಈ ವಿಷಯ ಕಠಿಣ ಎಂಬ ಮನಸ್ಥಿತಿಯಿಂದ ವಿದ್ಯಾರ್ಥಿಗಳು ಹೊರಬಂದು ವಿಷಯವನ್ನು ಆಳವಾಗಿ ತಿಳಿದುಕೊಂಡಾಗ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದರು.
ಕಬ್ಬಿಣದ ಕಡಲೆ ಎಂದು ಕೆಲವು ಮಕ್ಕಳ ತಲೆಯಲ್ಲಿ ತುಂಬಿರುತ್ತಾರೆ ಇದರಿಂದ ಶಿಕ್ಷಕರು ಗಣಿತದ ಬಗ್ಗೆ ಸಂಪೂರ್ಣವಾಗಿ ಮನನ ಮಾಡಿಕೊಂಡು ಮಕ್ಕಳಿಗೆ ಬೋಧಿಸುವುದಲ್ಲದೆ ಗಣಿತ ವಿಷಯದಲ್ಲಿನ ಕಷ್ಟಕರ ಸಂಗತಿಗಳನ್ನು ಸರಳ ರೀತಿಯಲ್ಲಿ ಬೋಧಿಸಿದಾಗ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುತ್ತದೆ ಎಂದರು.
ಈದೇ ಸಂದರ್ಭದಲ್ಲಿ ಬುಡ್ಲಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಮಲತಾ ಮಲ್ಲೇಶಪ್ಪ, ಮುಖ್ಯ ಶಿಕ್ಷಕಿ ನಳಿನಿ, ಎಸ್ ಡಿ ಎಂ ಸಿ ಅಧ್ಯಕ್ಷ ಮಂಜುನಾಥ್, ಸಿಆರ್‌ಪಿ ರಾಧಾ, ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು