ಚಿತ್ರದುರ್ಗ
ಶಾಲಾ ಹಂತದ ಮಕ್ಕಳಲ್ಲಿ ಗಣಿತದ ಮೂಲಕ್ರಿಯೆಗಳೂ ಸೇರಿದಂತೆ ಆದುನಿಕ ಕಾಲಘಟ್ಟಕ್ಕೆ ಹೊಂದಿಕೆಯಾಗುವAತೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಚಿತ್ರದುರ್ಗ ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ಎಸ್ ನಾಗಭೂಷಣ ತಿಳಿಸಿದರು
ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಸಹಿಪ್ರಾ ಶಾಲಾ ಆವರಣದ ಸಭಾ ಭವನದ ಬಳಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಡಿಎಸ್‌ಹಳ್ಳಿ ಗ್ರಾಪಂ, ಬಿಇಒ ಮತ್ತು ಬಿಆರ್‌ಸಿ ಕಚೇರಿ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಡಿಎಸ್‌ಹಳ್ಳಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸೋಮವಾರ ಆಯೋಜಿಸಿದ್ದ ಗಣಿತ ಕಲಿಕಾ ಆಂದೋಲನ ಚಟುವಟಿಕೆಯಲ್ಲಿ ಪಾಲ್ಗೊಂಡು ಮಾತನಾಡಿದರು
ಸರ್ಕಾರ ಶಾಲಾ ಹಂತದ ಮಕ್ಕಳಲ್ಲಿ ಗಣಿತ ವಿಷಯವೆಂದರೆ ಕಬ್ಬಿಣದ ಕಡಲೆ ಎಂಬ ಮನೋಭಾವವಿದೆ ಇದನ್ನು ಹೋಗಲಾಡಿಸಲು ಗಣಿತ ಕಲಿಕಾ ಆಂದೋಲನ, ಗಣಿತ ವಿಷಯದ ಕಲಿಕೆಗೆ ಪೂರಕ ಕಲಿಕಾ ಸಾಧನಗಳನ್ನು ಪೂರೈಸಿ ಪ್ರಾಥಮಿಕ ಹಂತದ ವಿದ್ಯಾರ್ಥಿಗಳು ಗಣಿತ ವಿಷಯವನ್ನು ಪರಿಣಾಮಕಾರಿಯಾಗಿ ಕಲಿಯಲು ಪ್ರೇರೇಪಿಸಲಾಗುತ್ತಿದೆ ಎಂದರು
ಚಿತ್ರದುರ್ಗ ತಾಲೂಕು ಕ್ಷೇತ್ರಸಮನ್ವಯಾಧಿಕಾರಿ ಈ ಸಂಪತ್‌ಕುಮಾರ್ ಪ್ರಾಸ್ತಾವಿಕ ಮಾತನಾಡಿ ಸರ್ಕಾರ, ಸ್ಥಳೀಯ ಆಡಳಿತ, ಸರ್ಕಾರೇತರ ಸಂಘ ಸಂಸ್ಥೆಗಳು ಜಂಟಿಯಾಗಿ ಮಕ್ಕಳಿಗೆ ಗಣಿತ ವಿಷಯದ ಪರೀಕ್ಷೆ ನಡೆಸಿ ವಿಜೇತರಿಗೆ ಸ್ಥಳೀಯ ಆಡಳಿತವೇ ನಗದು ಬಹುಮಾನ ನೀಡುತ್ತದೆ ಇದರಿಂದ ಕಲಿಯುವ ಮಕ್ಕಳು ಮತ್ತು ಕಲಿಸುವ ಶಿಕ್ಷಕರಿಗೆ ಉತ್ಸಾಹ ಮೂಡಿ ಗಣಿತ ವಿಷಯವನ್ನು ಪರಿಣಾಮಕಾರಿಯಾಗಿ ಕಲಿಸಲು ಸಹಕಾರಿಯಾಗುತ್ತದೆ ಎಂದರು
ಚಿತ್ರದುರ್ಗ ತಾಲೂಕು ಗಣಿತ ಕಲಿಕಾ ಆಂದೋಲನದ ನೋಡಲ್ ಅಧಿಕಾರಿ ಕೆ ಖಲಂದರ್ ಮಾತನಾಡಿ ಚಿತ್ರದುರ್ಗ ತಾಲೂಕಿನ ಎಲ್ಲಾ ಗ್ರಾಪಂ ಕೇಂದ್ರಗಳಲ್ಲಿ ಈ ಕಲಿಕಾ ಆಂದೋಲನ ಕಾರ್ಯಕ್ರಮ ಜರುಗುತ್ತಿದೆ ಇದಕ್ಕೆ ಸ್ಥಳೀಯ ಆಡಳಿತವು ಎಲ್ಲಾ ರೀತಿಯ ಸಹಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಶ್ಲಾಘಿಸಿದರು
ಇದೇ ವೇಳೆ ಚಿತ್ರದುರ್ಗ ತಾಲೂಕಿನ ಸಿರಿಗೆರೆ, ಚಿತ್ರದುರ್ಗ ಪಶ್ಚಿಮ, ಡಿಎಸ್‌ಹಳ್ಳಿ ಸೇರಿದಂತೆ ಹನ್ನೆರೆಡು ಗ್ರಾಪಂ ಕೇಂದ್ರಗಳಲ್ಲಿ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮ ಜರುಗಿತು
ಸಂದರ್ಭದಲ್ಲಿ ಡಿಎಸ್‌ಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಸುಧಾ, ಬಿಇಒ ಎಸ್ ನಾಗಭೂಷಣ, ಬಿಆರ್‌ಸಿ ಈ ಸಂಪತ್‌ಕುಮಾರ, ನೋಡಲ್ ಅಧಿಕಾರಿ ಬಿಆರ್‌ಪಿ ಕೆ ಖಲಂದರ್, ಇಸಿಒಗಳಾದ ಕೃಷ್ಣಮೂರ್ತಿ, ಸಮೀರಾ, ದೇವರಾಜು, ಸಿಆರ್‌ಪಿ ವೆಂಕಟೇಶಪಾಪಣ್ಣರೆಡ್ಡಿ, ಪ್ರಬಾರಿ ಮುಖ್ಯಶಿಕ್ಷಕ ಎಸ್ ಕೆ ತಮ್ಮಯ್ಯ ಡಿಎಸ್‌ಹಳ್ಳಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು
(ಪೋಟೋ ಸಿಟಿಎ ಗಣಿತ 28)
ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಸಹಿಪ್ರಾ ಶಾಲಾ ಆವರಣದ ಸಭಾ ಭವನದ ಬಳಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಡಿಎಸ್‌ಹಳ್ಳಿ ಗ್ರಾಪಂ, ಬಿಇಒ ಮತ್ತು ಬಿಆರ್‌ಸಿ ಕಚೇರಿ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಡಿಎಸ್‌ಹಳ್ಳಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸೋಮವಾರ ಆಯೋಜಿಸಿದ್ದ ಗಣಿತ ಕಲಿಕಾ ಆಂದೋಲನ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು