ಚಳ್ಳಕೆರೆ
ಜಮೀನಿಗೆ ಹೋಗುವ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ರೈತ ಬಸವರಾಜ್ ಆಗ್ರಹ
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಕುದಾಪುರ ಗ್ರಾಮದ ಭಾಗ್ಯಮ ಎಂಬುವರಿಗೆ 4 ಎಕರೆ ಜಮೀನು ಗ್ರಾಮದ ಸಮೀಪದಲ್ಲಿದ್ದು ಹೊಲಕ್ಕೆ ಹೋಗುವುದಕ್ಕೆ ಬರುವುದಕ್ಕೆ ರಸ್ತೆಯೇ ಇಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಇನ್ನೂ
ಗ್ರಾಮೀಣ ರೈತರು ತಮ್ಮ ಜಮೀನುಗಳಿಗೆ ಹೋಗಲು ಗ್ರಾಮ ನಕಾಶೆಯಲ್ಲಿರುವ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳಲ್ಲಿ ಅನ್ಯ ಕೃಷಿಕರು ಸಂಚರಿಸಲು ಜಮೀನಿನ ಮಾಲೀಕರು ಅಡ್ಡಿಪಡಿಸಬಾರದು ಎಂದು ಸರಕಾರ ಸುತ್ತೋಲೆ ಹೊರಡಿಸಿದ್ದು,
ರೈತರ ದಾರಿ ಹಕ್ಕನ್ನು ರಕ್ಷಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದರು ದಾರಿ ತೆರವುಗೊಳಿಸಲು ಮುಂದಾಗಿಲ್ಲ ಎಂದು ರೈತ ಬಸವರಾಜ್ ಅಳಲು ತೋಡಿಕೊಂಡಿದ್ದಾನೆ
ಗ್ರಾಮದಲ್ಲಿರುವ ಸರ್ಕಾರಿ ಗೋಮಾಳ ಜಾಗವನ್ನು ಗ್ರಾಮಸ್ಥರು ಆಕ್ರಮವಾಗಿ ಒತ್ತುವರಿ ಮಾಡಿಕೊಂಡಿದು ಇದರಿಂದ ನಮ್ಮ ಜಮೀನಿಗೆ ಹೋಗಲು ದಾರಿ ಇಲ್ಲ ಈ ಬಗ್ಗೆ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಅರ್ಜಿ ನೀಡಿದರು ಯಾವ ಅಧಿಕಾರಿಯೂ ಇತ್ತ ಕಡೆ ಬಂದಿಲ್ಲ ಎಂದು ಆರೋಪಿಸಿದ್ದಾರೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ರೈತರ ಜಮೀನಿಗೆ ಹೋಗುವ ದಾರಿ ಒತ್ತುವರಿಯನ್ನು ತೆರವುಗೊಳಿಸುವರೇ ಎಂಬುದು ರೈತನ ಮನದಾಳದ ಮಾತಾಗಿದೆ.